ಸಾರಾಂಶ
ರಾಜ್ ಮೊಮ್ಮಗ ಧೀರೇನ್ ತಮ್ಮ ಹೆಸರಿನೊಂದಿಗೆ ತಾತನ ಹೆಸರನ್ನೂ ಸೇರಿಸಿ ಧೀರೇನ್ ಆರ್ ರಾಜ್‌ಕುಮಾರ್ ಆಗಿದ್ದಾರೆ. ಇದಕ್ಕೆ ಮಂಗಳೂರಿನ ಕೊರಗಜ್ಜ ದೇವಾಲಯದ ಒಂದು ಘಟನೆ ಕಾರಣವಂತೆ.
ಸಿನಿವಾರ್ತೆ
ಧೀರೇನ್ ರಾಮ್‌ಕುಮಾರ್ ಎಂಬ ಹೆಸರಿನಲ್ಲಿ ಸ್ಯಾಂಡಲ್‌ವುಡ್‌ಗೆ ಎಂಟ್ರಿಕೊಟ್ಟಿದ್ದ ನಟ ಇದೀಗ ತನ್ನ ಹೆಸರನ್ನು ಧೀರೇನ್ ಆರ್ ರಾಜ್‌ಕುಮಾರ್ ಎಂದು ಬದಲಿಸಿಕೊಂಡಿದ್ದಾರೆ.
‘ತಾತನ ಹೆಸರನ್ನು ನನ್ನ ಹೆಸರಿನೊಂದಿಗೆ ಸೇರಿಸಿಕೊಂಡಿದ್ದೇನೆ. ಈ ಯೋಚನೆ ಮೊದಲಿಂದ ಇತ್ತು. ಮಂಗಳೂರಿನ ಕೊರಗಜ್ಜನ ದೇವಸ್ಥಾನಕ್ಕೆ ಹೋದಾಗ ಅಲ್ಲಿನ ಅರ್ಚಕರು ತಾತನ ಹೆಸರು ಇಟ್ಟುಕೊಳ್ಳಿ ಎಂದರು. ಅದು ನನಗೂ ಸರಿ ಅನ್ನಿಸಿ ಜನ್ಮದಿನದಂದು ಹೆಸರಲ್ಲಿ ಬದಲಾವಣೆ ಮಾಡಿಕೊಂಡಿದ್ದೇನೆ’ ಎಂದು ಧೀರೇನ್ ಹೇಳಿದ್ದಾರೆ.