ಮಾಂತ್ರಿಕ ಚಿತ್ರದ ಟ್ರೇಲರ್ ಬಿಡುಗಡೆ

| Published : Apr 23 2024, 12:52 AM IST / Updated: Apr 23 2024, 08:01 AM IST

ಸಾರಾಂಶ

ಮಾಂತ್ರಿಕ ಚಿತ್ರದ ಟ್ರೇಲರ್ ಬಿಡುಗಡೆ ಇತ್ತೀಚೆಗೆ ನಡೆಯಿತು.

 ಸಿನಿವಾರ್ತೆ

ದೆವ್ವ ಇದೆಯೋ, ಇಲ್ಲವೋ ಗೊತ್ತಿಲ್ಲ. ಆದರೆ, ದೆವ್ವಗಳನ್ನು ಹುಡುಕಿಕೊಂಡು ಹೋಗುವ ಮಾಂತ್ರಿಕನ ಮೇಲೊಂದು ಸಿನಿಮಾ ಬಂದಿದೆ. ಚಿತ್ರದ ಹೆಸರು ‘ಮಾಂತ್ರಿಕ’. ಇತ್ತೀಚೆಗೆ ಇದರ ಟ್ರೇಲರ್‌ ಬಿಡುಗಡೆ ಆಯಿತು. ವ್ಯಾನ ವರ್ಣ ಜಮ್ಮುಲ ನಿರ್ದೇಶನ, ನಾಯಕನಾಗಿ ನಟನೆ ಮಾಡಿರುವ ಈ ಚಿತ್ರದಲ್ಲಿ ಮೈಥಿಲಿ ನಾಯಕ್‌, ರಾಧಿಕ ಮಾಲಿಪಾಟೀಲ ನಾಯಕಿಯರು. ಆಯನ ಚಿತ್ರದ ನಿರ್ಮಾಪಕಿ.

ವ್ಯಾನ ವರ್ಣ ಜಮ್ಮುಲ ಮಾತನಾಡಿ, ‘ದೆವ್ವ ಬಂದು ಹೆದರಿಸುವ ಸಿನಿಮಾಗಳನ್ನು ನೋಡಿದ್ದೀರಿ. ಆದರೆ, ನಮ್ಮ ಈ ಸಿನಿಮಾ ದೆವ್ವವನ್ನೇ ಹುಡುಕಿಕೊಂಡು ಹೋಗುವ ಕತೆಯನ್ನು ಒಳಗೊಂಡಿದೆ. ಘೋಸ್ಟ್‌ ಹಂಟರ್‌ ಕತೆಯನ್ನು ಹೇಳುವ ಪ್ರಯತ್ನ ಈ ಚಿತ್ರದಲ್ಲಿದೆ’ ಎಂದು ಹೇಳಿದರು. ಈ ಚಿತ್ರಕ್ಕೆ ಈಗಾಗಲೇ ಸೆನ್ಸಾರ್‌ ಆಗಿದೆ. ಮುಂದಿನ ತಿಂಗಳು ತೆರೆಗೆ ಬರುವ ಸಾಧ್ಯತೆಗಳಿವೆ.