ಸಾರಾಂಶ
ಆಪರೇಷನ್ ಲಂಡನ್ ಕೆಫೆ ಸಿನಿಮಾ ಪ್ಯಾನ್ ಇಂಡಿಯಾ ಮಟ್ಟದಲ್ಲಿ ರಿಲೀಸ್ ಆಗಲಿದೆ.
ಸಿನಿವಾರ್ತೆ
ಕವೀಶ್ ಶೆಟ್ಟಿ ಮತ್ತು ಮೇಘಾ ಶೆಟ್ಟಿ ನಟನೆಯ ‘ಆಪರೇಶನ್ ಲಂಡನ್ ಕೆಫೆ’ ಪ್ಯಾನ್ ಇಂಡಿಯಾ ಸಿನಿಮಾವಾಗಿ ಕನ್ನಡ, ಮರಾಠಿ, ಹಿಂದಿ, ತಮಿಳು, ತೆಲುಗು, ಮಲಯಾಳಂ ಭಾಷೆಗಳಲ್ಲಿ ಸಿನಿಮಾ ತೆರೆ ಕಾಣಲಿದೆ. ಸಡಗರ ರಾಘವೇಂದ್ರ ಈ ಸಿನಿಮಾದ ನಿರ್ದೇಶಕರು.
ಮರಾಠಿಯ ಜನಪ್ರಿಯ ಕಲಾವಿದರಾದ ಶಿವಾನಿ ಸುರ್ವೆ, ವಿರಾಟ್ ಮಡಕೆ, ಪ್ರಸಾದ್ ಕಾಂಡೇಕರ್ ಹಾಗೂ ಕನ್ನಡದ ಅರ್ಜುನ್ ಕಾಪಿಕಾಡ್, ಕೃಷ್ಣ ಹೆಬ್ಬಾಳೆ, ಧರ್ಮೇಂದ್ರ ಅರಸ್, ನೀನಾಸಂ ಅಶ್ವತ್ ಮುಖ್ಯ ಪಾತ್ರಗಳಲ್ಲಿದ್ದಾರೆ.
ಉಡುಪಿಯ ವಿಜಯ್ ಕುಮಾರ್ ಶೆಟ್ಟಿ ಹವರಾಲ್, ರಮೇಶ್ ಕೊಠಾರಿ, ದೀಪಕ್ ರಾಣೆ ಮತ್ತು ವಿಜಯ್ ಪ್ರಕಾಶ್ ಈ ಸಿನಿಮಾ ನಿರ್ಮಾಣ ಮಾಡುತ್ತಿದ್ದಾರೆ.