ವಶಿಷ್ಠ ಸಿಂಹ ಧ್ವನಿಯನ್ನು ಮಿಮಿಕ್ರಿ ಮಾಡ್ತಿದ್ದೆ: ರಿಷಬ್

| Published : Jun 07 2024, 12:15 AM IST / Updated: Jun 07 2024, 10:12 AM IST

ವಶಿಷ್ಠ ಸಿಂಹ ಧ್ವನಿಯನ್ನು ಮಿಮಿಕ್ರಿ ಮಾಡ್ತಿದ್ದೆ: ರಿಷಬ್
Share this Article
  • FB
  • TW
  • Linkdin
  • Email

ಸಾರಾಂಶ

ವಶಿಷ್ಠ ಸಿಂಹ ಬೇಸ್‌ ವಾಯ್ಸ್ ಅನ್ನು ರಿಷಬ್ ಶೆಟ್ಟಿ ಹೊಗಳಿದ್ದಾರೆ. ಅವರ ಧ್ವನಿಯಿಂದ ಪ್ರಭಾವಿತನಾಗಿ ಮಿಮಿಕ್ರಿ ಮಾಡುತ್ತಿದ್ದೆ ಎಂದು ರಿಷಬ್ ಹೇಳಿದ್ದಾರೆ.

‘ಗೋಧಿ ಬಣ್ಣ ಸಾಧಾರಣ ಮೈಕಟ್ಟು ಚಿತ್ರದಲ್ಲಿ ವಶಿಷ್ಠ ಬೇಸ್‌ ವಾಯ್ಸ್‌ ಬಹಳ ಇಷ್ಟವಾಗಿತ್ತು. ಅವರ ಧ್ವನಿಯನ್ನು ಮಿಮಿಕ್ರಿ ಮಾಡುತ್ತಿದ್ದೆ. ಅವರು ಕನ್ನಡ ಸಿನಿಮಾಕ್ಕೆ ಆಸ್ತಿ ಆಗುವ ವಿಶ್ವಾಸ ಇದೆ. ಬಹುದೊಡ್ಡ ನಾಯಕ ನಟನಾಗಿ ವಶಿಷ್ಠ ಬೆಳೆಯಲಿ’ ಎಂದು ರಿಷಬ್‌ ಶೆಟ್ಟಿ ಹಾರೈಸಿದ್ದಾರೆ.

ವಶಿಷ್ಠ ಸಿಂಹ ನಟನೆಯ ‘ಲವ್‌ಲೀ’ ಸಿನಿಮಾದ ಟ್ರೇಲರ್‌ ಅನ್ನು ರಿಷಬ್‌ ಬಿಡುಗಡೆ ಮಾಡಿ ಮಾತನಾಡಿ, ‘ನಾವೆಲ್ಲ ಒಳ್ಳೆ ಸಿನಿಮಾ ಬಂದಾಗ ನೋಡಿ ಬೆಂಬಲಿಸೋಣ’ ಎಂದರು.

ನಾಯಕ ವಶಿಷ್ಠ ಸಿಂಹ ತನ್ನ ಸಿನಿಮಾ ಜರ್ನಿಗೆ ಸಹಕರಿಸಿದವರನ್ನು ಸ್ಮರಿಸಿದರು. ಫ್ಯಾನ್ಸ್‌ ಕೋರಿಕೆಯಂತೆ ಸಿನಿಮಾದ ಡೈಲಾಗ್ ಹೇಳಿ ಮನರಂಜಿಸಿದರು.

ನಿರ್ದೇಶಕ ಚೇತನ್‌ ಕೇಶವ್‌, ‘ಪ್ರೇಕ್ಷಕ ಕೊಡುವ ದುಡ್ಡಿಗೆ ಮೋಸವಾಗದ ಚಿತ್ರ ನಮ್ಮದು’ ಎಂದರು. ನಾಯಕಿ ಸ್ಟೆಫಿ ಪಟೇಲ್ ಅನುಭವ ಹಂಚಿಕೊಂಡರು. ರವೀಂದ್ರ ಕುಮಾರ್‌ ಈ ಸಿನಿಮಾಕ್ಕೆ ಬಂಡವಾಳ ಹೂಡಿದ್ದಾರೆ.ಬಾಕ್ಸ್‌

ರಿಷಬ್‌ ಕಾಲಿಗೆ ನಮಸ್ಕರಿಸಿದ ವಶಿಷ್ಠ

‘ಕಾಂತಾರ ಸಿನಿಮಾದಲ್ಲಿ ರಿಷಬ್‌ ನಟನೆ ನೋಡಿ ಅವರ ಕಾಲಿಗೆ ನಮಸ್ಕಾರ ಮಾಡಬೇಕು ಅಂತ ಬಹಳ ಆಸೆ ಪಟ್ಟಿದ್ದೆ. ಆ ಆಸೆ ಇವತ್ತು ನೆರವೇರ್ತಾ ಇದೆ’ ಎನ್ನುತ್ತಾ ವಶಿಷ್ಠ ಸಿಂಹ ರಿಷಬ್‌ ಶೆಟ್ಟಿ ಕಾಲಿಗೆ ನಮಸ್ಕರಿಸಲು ಹೋದದ್ದು ವಿಶೇಷವಾಗಿತ್ತು. ರಿಷಬ್‌ ಸಂಕೋಚದಿಂದ ವಶಿಷ್ಠ ಅವರನ್ನು ಮೇಲೆತ್ತಿದರು.