ಕ್ಲಿಕ್‌ ಚಿತ್ರದಲ್ಲಿ ರವಿ ಬಸ್ರೂರು ಪುತ್ರ ಪವನ್ ನಟನೆ

| Published : Jan 12 2024, 01:46 AM IST / Updated: Jan 12 2024, 04:04 PM IST

ಕ್ಲಿಕ್‌ ಚಿತ್ರದಲ್ಲಿ ರವಿ ಬಸ್ರೂರು ಪುತ್ರ ಪವನ್ ನಟನೆ
Share this Article
  • FB
  • TW
  • Linkdin
  • Email

ಸಾರಾಂಶ

ಖ್ಯಾತ ಸಂಗೀತ ನಿರ್ದೇಶಕ ರವಿ ಬಸ್ರೂರು ಪುತ್ರ ಪವನ್ ನಟನೆಯ ಸಿನಿಮಾ ಕ್ಲಿಕ್.

ಖ್ಯಾತ ಸಂಗೀತ ನಿರ್ದೇಶಕ ರವಿ ಬಸ್ರೂರ್ ಪುತ್ರ ಮಾಸ್ಟರ್ ಪವನ್ ಬಸ್ರೂರು ‘ಕ್ಲಿಕ್’ ಚಿತ್ರದಲ್ಲಿ ನಟಿಸಿದ್ದಾರೆ. ಈ ಹಿಂದೆ ‘ಗಿರ್ಮಿಟ್’ ಚಿತ್ರದಲ್ಲಿ ನಟಿಸಿದ್ದ ಪವನ್ ಈ ಚಿತ್ರದಲ್ಲಿ ಪ್ರಮುಖ ಪಾತ್ರಧಾರಿಯಾಗಿ ನಟಿಸಿದ್ದಾರೆ. 

ಶಶಿಕುಮಾರ್‌ ಈ ಸಿನಿಮಾ ನಿರ್ದೇಶಿಸಿದ್ದಾರೆ. ಐಟಿ ಉದ್ಯೋಗಿಯಾಗಿರುವ ಶಶಿಕಿರಣ್ ನಿರ್ಮಿಸಿದ್ದಾರೆ. ಮಕ್ಕಳ ಇಚ್ಛೆಗೆ ತಕ್ಕಂತೆ ಕಲಿಯುವ ಅವಕಾಶವನ್ನು ಪೋಷಕರು ಮಾಡಿಕೊಡಬೇಕು ಎಂಬ ವಿಚಾರದ ಸುತ್ತ ಸಾಗುವ ಸಿನಿಮಾ ಇದು. 

ಈ ಕುರಿತು ಮಾತನಾಡುವ ಶಶಿಕಿರಣ್, ‘ರವಿ ಬಸ್ರೂರು ತಮ್ಮ ಪುತ್ರ ಎಂಬ ಕಾರಣಕ್ಕೆ ತಗೋಬೇಡಿ, ಆಡಿಷನ್ ಮಾಡಿಯೇ ತೆಗೆದುಕೊಳ್ಳಿ ಎಂದು ಹೇಳಿದ್ದರು. ಪವನ್‌ ಅವರಿಗೆ ಎಲ್ಲರನ್ನೂ ಸೆಳೆಯುವ ನಟನಾ ಪ್ರತಿಭೆ ಇದೆ. 

ನಾನು ವಿಭಾಗದಲ್ಲೂ ತೊಡಗಿಸಿಕೊಂಡು ಈ ಸಿನಿಮಾ ಮಾಡಿದ್ದೇನೆ’ ಎನ್ನುತ್ತಾರೆ. ಕಾರ್ತಿಕ್, ಚಂದ್ರಕಲಾ ಮೋಹನ್, ರಚನಾ ದಶರತ್, ಸಂಜು ಬಸಯ್ಯ, ಸಿಲ್ಲಿಲಲ್ಲಿ ಆನಂದ್, ಸುಮನಾ ಶಶಿ ತಾರಾಗಣದಲ್ಲಿದ್ದಾರೆ. ಆಕಾಶ್ ಪರ್ವ-ವಿಶ್ವಾಸ್ ಕೌಶಿಕ್ ಸಂಗೀತ ನಿರ್ದೇಶನ, ಜೀವನ್ ಗೌಡ ಛಾಯಾಗ್ರಹಣ, ವಿನಯ್ ಕುಮಾರ್ ಸಂಕಲನವಿದೆ.