ಸಾರಾಂಶ
ಶ್ರುತಿ ನಾಯ್ಡು ನಿರ್ಮಾಣದ ಕಾಲೇಜು ಬದುಕಿನ ಸುತ್ತ ಹೆಣೆದಿರುವ ಲವಲವಿಕೆಯ ಸಿನಿಮಾವೊಂದರಲ್ಲಿ ಪ್ರಮೋದ್ ನಾಯಕನಾಗಿ ನಟಿಸುತ್ತಿದ್ದಾರೆ.
ಕನ್ನಡಪ್ರಭ ಸಿನಿವಾರ್ತೆ
ಕಾಲೇಜ್ ಆಟ, ತುಂಟಾಟ, ಜಬರ್ದಸ್ತಿಗಳ ಬಗೆಗಿರುವ ಯೂತ್‌ಫುಲ್ ಮೂವಿಯೊಂದಕ್ಕೆ ನಟ ಪ್ರಮೋದ್ ಹೀರೋ ಆಗಿದ್ದಾರೆ. ಅವರ ಜನ್ಮದಿನದಂದು ಈ ಸಿನಿಮಾದ ಪೋಸ್ಟರ್ ಬಿಡುಗಡೆಯಾಗಿದೆ. ಶ್ರುತಿ ನಾಯ್ಡು ನಿರ್ಮಾಣದ ಈ ಸಿನಿಮಾಕ್ಕೆ ರಮೇಶ್ ಇಂದಿರಾ ಆ್ಯಕ್ಷನ್ ಕಟ್ ಹೇಳುತ್ತಿದ್ದಾರೆ.
ಸಿನಿಮಾ ಬಗ್ಗೆ ಮಾಹಿತಿ ನೀಡಿದ ನಿರ್ಮಾಪಕಿ ಶ್ರುತಿ ನಾಯ್ಡು, ‘ಈಗಿನ ಯುವ ಜನರನ್ನು ಥಿಯೇಟರ್‌ಗೆ ಕರೆತರುವ ಸಿನಿಮಾ. ಹತ್ತು ವರ್ಷ ಹಿಂದಿನ ಹಾಗೂ ಇಂದಿನ ಕಥೆ ಇದೆ.
ಒಂಥರಾ ನಾಸ್ತಾಲ್ಜಿಯಾ ಫೀಲ್ ಕೊಡುತ್ತದೆ. ಶೇ.80 ಭಾಗದ ಕಥೆ ಕಾಲೇಜಿನಲ್ಲೇ ನಡೆಯುತ್ತದೆ. ಕಾಲೇಜ್ ಹುಡುಗರನ್ನು ಕಂಪ್ಲೀಟ್ ಆಗಿ ಎಂಗೇಜ್ ಮಾಡುವ ಲವಲವಿಕೆಯ ಯೂತ್‌ಫುಲ್ ಚಿತ್ರ ಎಂದು ಹೇಳಬಹುದು.
ಫೆಬ್ರವರಿಯಿಂದ ಶೂಟಿಂಗ್ ಆರಂಭ. ಮೈಸೂರು, ಬೆಂಗಳೂರು, ಕೊಡಗಿನಲ್ಲಿ ಶೂಟಿಂಗ್ ನಡೆಯಲಿದೆ’ ಎಂದಿದ್ದಾರೆ. ಉಳಿದ ತಾರಾಗಣ, ತಾಂತ್ರಿಕ ವರ್ಗದ ವಿವರಗಳು ಇನ್ನಷ್ಟೇ ಹೊರಬೀಳಬೇಕಿದೆ. ಪ್ರಶಾಂತ್ ನೀಲ್ ನಿರ್ದೇಶನದ ‘ಸಲಾರ್’ ಸಿನಿಮಾದ ಮುಖ್ಯ ಪಾತ್ರವೊಂದರಲ್ಲಿ ಪ್ರಮೋದ್ ಕಾಣಿಸಿಕೊಂಡಿದ್ದರು.