ರಘು ಹಾಸನ್ ನಿರ್ದೇಶನದ ‘ನಾನು ಮತ್ತು ಗುಂಡ 2’ ಚಿತ್ರಕ್ಕೆ ರಾಕೇಶ್‌ ಅಡಿಗ ನಾಯಕನಾಗಿ ಆಯ್ಕೆ ಆಗಿದ್ದಾರೆ. ಈ ಹಿಂದೆಯೇ ಚಿತ್ರದ ಟೈಟಲ್‌ ಟೀಸರ್‌ ಬಿಡುಗಡೆ ಆಗಿತ್ತು.

ಕನ್ನಡಪ್ರಭ ಸಿನಿವಾರ್ತೆ 

ರಘು ಹಾಸನ್ ನಿರ್ದೇಶನದ ‘ನಾನು ಮತ್ತು ಗುಂಡ 2’ ಚಿತ್ರಕ್ಕೆ ರಾಕೇಶ್‌ ಅಡಿಗ ನಾಯಕನಾಗಿ ಆಯ್ಕೆ ಆಗಿದ್ದಾರೆ. ಈ ಹಿಂದೆಯೇ ಚಿತ್ರದ ಟೈಟಲ್‌ ಟೀಸರ್‌ ಬಿಡುಗಡೆ ಆಗಿತ್ತು. ಈಗ ವಿಶೇಷ ವಿಡಿಯೋವೊಂದನ್ನು ಬಿಡುಗಡೆ ಮಾಡುವ ಮೂಲಕ ಚಿತ್ರಕ್ಕೆ ರಾಕೇಶ್‌ ಅಡಿಗ ನಾಯಕ ಎಂಬುದನ್ನು ಚಿತ್ರತಂಡ ಘೋಷಿಸಿದೆ. 

ಈ ಚಿತ್ರದ ಮೊದಲ ಭಾಗದಲ್ಲಿ ಶಿವರಾಜ್‌ ಕೆ ಆರ್‌ ಪೇಟೆ ನಾಯಕನಾಗಿ ಕಾಣಿಸಿಕೊಂಡಿದ್ದರು. ಈಗ ಮುಂದುವರಿದ ಭಾಗದಲ್ಲಿ ರಾಕೇಶ್‌ ಅಡಿಗ ಹೀರೋ ಆಗಿದ್ದಾರೆ. ಈ ಬಾರಿ ಕನ್ನಡದ ಜತೆಗೆ ತೆಲುಗು, ತಮಿಳು, ಮಲಯಾಳಂ ಹಾಗೂ ಹಿಂದಿ ಭಾಷೆಯಲ್ಲೂ ಸಿನಿಮಾ ಮೂಡಿ ಬರಲಿದೆ.