ಜ.12ಕ್ಕೆ ಹನುಮಾನ್‌ ಸಿನಿಮಾ ಬಿಡುಗಡೆ

| Published : Jan 10 2024, 01:46 AM IST / Updated: Jan 10 2024, 11:29 AM IST

ಜ.12ಕ್ಕೆ ಹನುಮಾನ್‌ ಸಿನಿಮಾ ಬಿಡುಗಡೆ
Share this Article
  • FB
  • TW
  • Linkdin
  • Email

ಸಾರಾಂಶ

ತೆಲುಗಿನ ‘ಹನುಮಾನ್‌’ ಸಿನಿಮಾ ಕನ್ನಡಕ್ಕೂ ಡಬ್‌ ಆಗಿದ್ದು, ಜ.12ಕ್ಕೆ ಎಲ್ಲಾ ಭಾಷೆಗಳಲ್ಲಿ ಬಿಡುಗಡೆ ಆಗುತ್ತಿದೆ. ಇದು ಈ ವರ್ಷ ತೆರೆಗೆ ಬರುತ್ತಿರುವ ಮೊದಲ ಪ್ಯಾನ್‌ ಇಂಡಿಯಾ ಸಿನಿಮಾ ಆಗಿದೆ.

ಕನ್ನಡಪ್ರಭ ಸಿನಿವಾರ್ತೆ

ತೆಲುಗಿನ ‘ಹನುಮಾನ್‌’ ಸಿನಿಮಾ ಕನ್ನಡಕ್ಕೂ ಡಬ್‌ ಆಗಿದ್ದು, ಜ.12ಕ್ಕೆ ಎಲ್ಲಾ ಭಾಷೆಗಳಲ್ಲಿ ಬಿಡುಗಡೆ ಆಗುತ್ತಿದೆ. ಇದು ಈ ವರ್ಷ ತೆರೆಗೆ ಬರುತ್ತಿರುವ ಮೊದಲ ಪ್ಯಾನ್‌ ಇಂಡಿಯಾ ಸಿನಿಮಾ ಆಗಿದೆ. 

ಬಾಲ ನಟನಾಗಿ ತೆಲುಗು ಚಿತ್ರರಂಗಕ್ಕೆ ಬಂದ ತೇಜಸ್‌ ಸಜ್ಜಾ ಹೀರೋ ಆಗಿರುವ, ಅಮೃತಾ ಅಯ್ಯರ್‌ ನಾಯಕಿಯಾಗಿ ಕಾಣಿಸಿಕೊಂಡಿರುವ ಚಿತ್ರವಿದು. ಪ್ರಮುಖ ಪಾತ್ರದಲ್ಲಿ ವರಲಕ್ಷ್ಮಿ ಶರತ್‌ ಕುಮಾರ್‌ ನಟಿಸಿದ್ದಾರೆ. 

ಪ್ರಶಾಂತ್‌ ವರ್ಮಾ ನಿರ್ದೇಶನದ ಈ ಚಿತ್ರವನ್ನು ನಿರಂಜನ್‌ ರೆಡ್ಡಿ ಹಾಗೂ ಚೈತನ್ಯ ರೆಡ್ಡಿ ನಿರ್ಮಿಸಿದ್ದಾರೆ. ತೇಜಸ್‌ ಸಜ್ಜಾ, ‘ಹಳ್ಳಿಯ ಸಾಮಾನ್ಯ ಹುಡುಗನೊಬ್ಬನಿಗೆ ಹನುಮಾನ್‌ ಶಕ್ತಿ ಬಂದರೆ ಏನಾಗುತ್ತದೆ ಎಂಬುದು ಚಿತ್ರದ ಕತೆ’ ಎಂದರು. 

ಅಮೃತಾ ಅಯ್ಯರ್‌, ‘ನಾನು ಹುಟ್ಟಿದ್ದು ಚೆನ್ನೈನಲ್ಲಿ. ಬೆಳೆದಿದ್ದು ಬೆಂಗಳೂರಿನಲ್ಲಿ. ಹೀಗಾಗಿ ನಾನು ಕನ್ನಡತಿ’ ಎಂದರು.