ಹುಡುಗಿಯರ ಬಗ್ಗೆ ಆರ್‌ಜಿವಿ ಅಶ್ಲೀಲ ಹೇಳಿಕೆ

| Published : Mar 19 2025, 12:37 AM IST

ಸಾರಾಂಶ

ಹುಡುಗಿಯ ಮುಂಭಾಗ ಹಾಗೂ ಹಿಂಭಾಗ ತನಗಿಷ್ಟ ಎಂಬ ಮೂಲಕ ಆರ್‌ಜಿವಿ ವಿವಾದಕ್ಕೆ ಸಿಲುಕಿದ್ದಾರೆ.

ಕನ್ನಡಪ್ರಭ ಸಿನಿವಾರ್ತೆಖ್ಯಾತ ನಿರ್ದೇಶಕ ರಾಮ್‌ ಗೋಪಾಲ್‌ವರ್ಮಾ ಹೆಣ್ಮಕ್ಕಳ ಬಗ್ಗೆ ಅಶ್ಲೀಲವಾಗಿ ಮಾತನಾಡಿರುವುದು ತೀವ್ರ ವಿರೋಧಕ್ಕೆ ಕಾರಣವಾಗಿದೆ. ಸೋಷಲ್‌ ಮೀಡಿಯಾದಲ್ಲಿ ಪ್ರತ್ಯೂಷಾ ಎಂಬ ನಟಿಯ ಜೊತೆಗಿರುವ ವೀಡಿಯೋ ಹಂಚಿಕೊಂಡಿದ್ದಾರೆ. ಇದರಲ್ಲಿ ನಟಿ ಕೇಳಿದ ಪ್ರಶ್ನೆಗೆ ಉತ್ತರಿಸಿದ ಆರ್‌ಜಿವಿ, ‘ನನಗೆ ಹೆಣ್ಣಿನ ಎದೆ ಭಾಗ ಹಾಗೂ ಹಿಂಭಾಗ ಇಷ್ಟ’ ಎಂದಿದ್ದಾರೆ. ಅವರ ಮಾತಿಗೆ ಸೋಷಲ್‌ ಮೀಡಿಯಾದಲ್ಲಿ ವ್ಯಾಪಕ ವಿರೋಧ ವ್ಯಕ್ತವಾಗಿದೆ.

‘ಹೀಗೆ ಮಾತನಾಡುವ ಮೂಲಕ ಆರ್‌ಜಿವಿ ಸಮಾಜಕ್ಕೆ ಯಾವ ಸಂದೇಶ ನೀಡುತ್ತಿದ್ದಾರೆ, ಇವರಂಥಾ ಸೆಲೆಬ್ರಿಟಿ ಸಾರ್ವಜನಿಕವಾಗಿ ಇಂಥಾ ಅಶ್ಲೀಲ ಮಾತನ್ನಾಡಿರುವುದಕ್ಕೆ ಯಾಕೆ ಅವರ ವಿರುದ್ಧ ಕೇಸು ಹಾಕಬಾರದು’ ಎಂದು ಸಾಕಷ್ಟು ಮಂದಿ ಆರ್‌ಜಿವಿ ವಿರುದ್ಧ ಕಿಡಿ ಕಾರಿದ್ದಾರೆ.