ಸಾರಾಂಶ
ಪುನೀತ್ ಸೋದರತ್ತೆಗೆ ಅಳಿಯನ ಅಗಲಿಕೆ ಸುದ್ದಿ ಇನ್ನೂ ಗೊತ್ತಿಲ್ಲ. ಅವರು ಪುನೀತ್ 50ನೇ ಜನ್ಮದಿನದಂದು ಶುಭ ಹಾರೈಸಿದ ರೀತಿ ನೋಡಿ..
ಕನ್ನಡಪ್ರಭ ಸಿನಿವಾರ್ತೆ‘ಐವತ್ತು ವರ್ಷ.. ಅಬ್ಬಾ.. ಚೆನ್ನಾಗಿದ್ದೀಯ ಮಗನೇ. ನೀನಿನ್ನೂ ಮಗು ಅಂದುಕೊಂಡಿದ್ದೀನಿ ನಾನು. ಒಮ್ಮೆ ಬಂದು ನೋಡ್ಕೊಂಡು ಹೋಗೋ ಕಂದಾ..’
ಪುನೀತ್ ರಾಜ್‌ಕುಮಾರ್ ತೀರಿಕೊಂಡ ವಿಷಯ ತಿಳಿಯದೇ ಇನ್ನೂ ಅವರ ಆಗಮನಕ್ಕೆ ಎದುರು ನೋಡುತ್ತಿರುವ ಡಾ ರಾಜ್ ಸಹೋದರಿ, ಪುನೀತ್ ಸೋದರತ್ತೆ ನಾಗಮ್ಮ ಅವರ ನುಡಿಗಳಿವು.ಪುನೀತ್ ನಿಧನದ ವಿಷಯ ತಿಳಿಸಿದರೆ ಅದನ್ನು ತಡೆದುಕೊಳ್ಳುವ ಶಕ್ತಿ ಇವರಿಗೆ ಇಲ್ಲ ಎಂಬ ಕಾರಣಕ್ಕೆ ಕುಟುಂಬಸ್ಥರು ಇನ್ನೂ ಇವರಿಂದ ವಿಷಯ ಮುಚ್ಚಿಟ್ಟಿದ್ದಾರೆ. ಹೀಗಾಗಿ ಪುನೀತ್ ಜೀವಂತವಾಗಿದ್ದಾರೆಂದು ಭಾವಿಸಿ ನಾಗಮ್ಮ ಖುಷಿಯಿಂದ ಹುಟ್ಟುಹಬ್ಬಕ್ಕೆ ಶುಭ ಕೋರಿ ಪುನೀತ್ ಅವರ ಬಾಲ್ಯದ ದಿನಗಳನ್ನು ಸ್ಮರಿಸಿಕೊಂಡಿದ್ದಾರೆ. ಈ ವೀಡಿಯೋ ನೋಡಿ ಅಪ್ಪು ಅಭಿಮಾನಿಗಳು ಕಣ್ಣೀರಾಗಿದ್ದಾರೆ.