ರೂಪಾ ರಾವ್ ಮೊದಲ ಬಾರಿಗೆ ನಿರ್ಮಿಸಿರುವ ಕೆಂಡ ಚಿತ್ರ ಪ್ರತಿಷ್ಠಿತ ದಾದಾ ಸಾಹೇಬ್ ಪಾಲ್ಕೆ ಫಿಲಂ ಫೆಸ್ಟಿವಲ್‌ಗೆ ಆಯ್ಕೆ ಆಗಿದೆ.

ಕನ್ನಡಪ್ರಭ ಸಿನಿವಾರ್ತೆ

‘ಗಂಟುಮೂಟೆ’ ಖ್ಯಾತಿಯ ನಿರ್ದೇಶಕಿ ರೂಪಾ ರಾವ್ ನಿರ್ಮಾಣದ, ಸಹದೇವ್‌ ಕೆಲವಡಿ ನಿರ್ದೇಶನದ ‘ಕೆಂಡ’ ಚಿತ್ರವು ದೆಹಲಿಯಲ್ಲಿ ನಡೆಯಲಿರುವ ಪ್ರತಿಷ್ಠಿತ 14ನೇ ದಾದಾ ಸಾಹೇಬ್ ಫಾಲ್ಕೆ ಫಿಲಂ ಫೆಸ್ಟಿವಲ್‌ಗೆ ಆಯ್ಕೆ ಆಗಿದೆ. 

ಏಪ್ರಿಲ್‌ 30ರಂದು ಫಿಲಂ ಫೆಸ್ಟಿವಲ್‌ ನಡೆಯಲಿದೆ. ಈ ಚಿತ್ರವು ಜೂನ್‌ ತಿಂಗಳಲ್ಲಿ ಚಿತ್ರಮಂದಿರಗಳಲ್ಲಿ ತೆರೆ ಕಾಣಲಿದೆ. ಬಿ ವಿ ಭರತ್‌, ಪ್ರಣವ್‌ ಶ್ರೀಧರ್‌, ವಿನೋದ್‌ ಸುಶೀಲ, ಗೋಪಾಲಕೃಷ್ಣ ದೇಶಪಾಂಡೆ, ಸಚಿನ್‌ ಶ್ರೀನಾಥ್‌, ಶರತ್‌ ಗೌಡ, ಅರ್ಚನ ಶ್ಯಾಮ್‌, ಪೃಥ್ವಿ ಬನವಾಸಿ, ದೀಪ್ತಿ ನಾಗೇಂದ್ರ ನಟಿಸಿದ್ದಾರೆ. ಚಿತ್ರಕ್ಕೆ ರಿತ್ವಿಕ್ ಕಾಯ್ಕಿಣಿ ಸಂಗೀತ ನಿರ್ದೇಶನ, ಲಕ್ಷ್ಮಿಕಾಂತ್ ಜೋಶಿ ಕಲಾ ನಿರ್ದೇಶನವಿದೆ.