ವಿಜಯ ರಾಘವೇಂದ್ರ ಸೈಕಾಲಜಿಸ್ಟ್ ಪಾತ್ರದಲ್ಲಿ ನಟಿಸಿರುವ ಗ್ರೇ ಗೇಮ್ಸ್ ಸಿನಿಮಾ ಮೇ 10ಕ್ಕೆ ಬಿಡುಗಡೆಯಾಗಲಿದೆ.

 ಸಿನಿವಾರ್ತೆ : ವಿಜಯ ರಾಘವೇಂದ್ರ, ಭಾವನಾ ರಾವ್‌ ನಟನೆಯ ಸಸ್ಪೆನ್ಸ್‌ ಡ್ರಾಮಾ ‘ಗ್ರೇ ಗೇಮ್ಸ್‌’ ಮೇ 10ಕ್ಕೆ ತೆರೆಗೆ ಬರಲಿದೆ.

 ಆನ್‌ಲೈನ್‌ ಗೇಮಿಂಗ್‌ ಹಾಗೂ ಮೆಟಾವರ್ಸ್‌ ಜಗತ್ತಿನ ಸಂಕೀರ್ಣತೆಗಳ ಬಗ್ಗೆ ಸಿನಿಮಾ ಕಥೆ ಇದೆ. ವಿಜಯ್‌ ರಾಘವೇಂದ್ರ ಸೈಕಾಲಜಿಸ್ಟ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಸೈಬರ್‌ ಕ್ರೈಂ ತನಿಖಾಧಿಕಾರಿಯಾಗಿ ಭಾವನಾ ರಾವ್‌ ನಟಿಸಿದ್ದಾರೆ. ವೃತ್ತಿಪರ ಗೇಮರ್‌ ಆಗಿ ಜೈ, ಚಿತ್ರನಟಿಯಾಗಿ ಶ್ರುತಿ ಪ್ರಕಾಶ್‌ ಅಭಿನಯಿಸಿದ್ದಾರೆ. ಅಪರ್ಣಾ ವಸ್ತಾರೆ, ರವಿ ಭಟ್‌ ಮುಖ್ಯಭೂಮಿಕೆಯಲ್ಲಿದ್ದಾರೆ. ಗಂಗಾಧರ್‌ ಸಾಲಿಮಠ ನಿರ್ದೇಶಕರು. ಆನಂದ್‌ ಮುಗದ್‌ ಸಿನಿಮಾ ನಿರ್ಮಿಸಿದ್ದಾರೆ.