ವಿಂಟೇಜ್‌ ಲುಕ್‌ನಲ್ಲಿ ಚೈತ್ರಾ ಆಚಾರ್‌

| Published : Apr 25 2024, 01:06 AM IST / Updated: Apr 25 2024, 06:10 AM IST

ಸಾರಾಂಶ

ಏಕ್‌ದಂ ರೆಟ್ರೋ ಹಾಲಿವುಡ್‌ ಹೀರೋಯಿನ್‌ ರೇಂಜ್‌ಗೆ ಲುಕ್‌ ಚೇಂಜ್‌ ಮಾಡ್ಕೊಂಡಿದ್ದಾರೆ ಚೈತ್ರಾ ಆಚಾರ್‌. ಅವರ ಫೋಟೋ ಶೂಟ್‌ ಎಲ್ಲೆಡೆ ವೈರಲ್‌ ಆಗುತ್ತಿದೆ.

  ಸಿನಿವಾರ್ತೆ

ನಟಿ ಚೈತ್ರಾ ಆಚಾರ್‌ ವಿಂಟೇಜ್ ಲುಕ್‌ನಲ್ಲಿ ಬಹಳ ಡಿಫರೆಂಟ್‌ ಆಗಿ ಫೋಟೋಶೂಟ್‌ ಮಾಡಿಸಿಕೊಂಡಿದ್ದಾರೆ. 60 - 70ರ ದಶಕದ ಹಾಲಿವುಡ್‌ ನಾಯಕಿಯಂತೆ ಮೇಕೋವರ್‌ ಮಾಡಿಕೊಂಡಿದ್ದಾರೆ.

 ಹಾಲಿವುಡ್‌ ನಟಿಯರ ಸ್ಟೈಲಿನಲ್ಲೇ ವಿಂಟೇಜ್‌ ಕಾರಿನ ಹಿನ್ನೆಲೆಯಲ್ಲಿ ಪೋಸ್‌ ಕೊಟ್ಟಿದ್ದಾರೆ. ಈ ರೆಟ್ರೋ ಫೋಟೋಗಳು ಸೋಷಿಯಲ್‌ ಮೀಡಿಯಾದಲ್ಲಿ ಹೈಪ್‌ ಕ್ರಿಯೇಟ್‌ ಮಾಡಿವೆ. ಅನೇಕ ಸೆಲೆಬ್ರಿಟಿಗಳು ಚೈತ್ರಾ ಅವರ ಹೊಸ ಲುಕ್‌ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. 

ಸದ್ಯ ಚೈತ್ರಾ ಆಚಾರ್‌, ಡಾಲಿ ಧನಂಜಯ ನಟನೆಯ ‘ಉತ್ತರಕಾಂಡ’ ಸಿನಿಮಾದಲ್ಲಿ ಲಚ್ಚಿ ಎಂಬ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಈ ಸಿನಿಮಾದ ಶೂಟಿಂಗ್‌ ಉತ್ತರ ಕರ್ನಾಟಕದಲ್ಲಿ ನಡೆಯುತ್ತಿದೆ.