ಸಾರಾಂಶ
ಮೇ.4 ಮತ್ತು 5 ರಂದು ಬೆಂಗಳೂರಿನಲ್ಲಿ ಯಜಮಾನ ಪ್ರೀಮಿಯರ್ ಲೀಗ್ ನಡೆಯಲಿದೆ
ಕನ್ನಡಪ್ರಭ ಸಿನಿವಾರ್ತೆ
ಸಿನಿಮಾ ನಟ, ನಟಿಯರು, ತಂತ್ರಜ್ಞರ ನಡುವೆ ಸ್ನೇಹ, ಸೌಹಾರ್ದತೆ ಮೂಡಿಸಲು ಡಾ ವಿಷ್ಣುವರ್ಧನ್ ಕಂಡುಕೊಂಡ ದಾರಿ ಕ್ರಿಕೆಟ್ ಆಡಿಸುವುದು. ಕ್ರೀಡೆಯ ಮೂಲಕ ಎಲ್ಲರನ್ನು ಒಟ್ಟಿಗೆ ನೋಡುವ ವಿಷ್ಣು ಅವರ ಆಸೆಯಂತೆ ವಿಷ್ಣು ಸೇನಾ ಸಮಿತಿ ಕಳೆದ ಎರಡು ವರ್ಷಗಳಿಂದ ಯಜಮಾನ ಪ್ರೀಮಿಯರ್ ಲೀಗ್ ನಡೆಸಿಕೊಂಡು ಬರುತ್ತಿದೆ. ಮೂರನೇ ವರ್ಷದ ಲೀಗ್ ಮೇ 4 ಮತ್ತು 5ರಂದು ಬೆಂಗಳೂರಿನ ಅಶೋಕ್ ರೈಸಿಂಗ್ ಕ್ರಿಕೆಟ್ ಮೈದಾನದಲ್ಲಿ ನಡೆಯಲಿದೆ. ಈ ವರ್ಷದ ಜೆರ್ಸಿಯನ್ನು ನಟ ಜಯರಾಮ್ ಕಾರ್ತಿಕ್ ಇತ್ತೀಚೆಗೆ ಬಿಡುಗಡೆ ಮಾಡಿದರು.