ಸಾರಾಂಶ
ಯಶ್ ನಿರ್ಮಾಪಕರಾಗಿರುವ ರಾಮಾಯಣಚಿತ್ರದ ಶೂಟಿಂಗ್ ಫೋಟೋ ಲೀಕ್ ಆಗಿದೆ. ಸದರಿ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿವೆ.
ಕನ್ನಡಪ್ರಭ ಸಿನಿವಾರ್ತೆನಟ ಯಶ್ ನಿರ್ಮಾಪಕರಾಗಿರುವ ‘ರಾಮಾಯಣ’ ಚಿತ್ರದ ಶೂಟಿಂಗ್ ಈಗಾಗಲೇ ಆರಂಭವಾಗಿದೆ. ಚಿತ್ರದಲ್ಲಿ ನಟಿಸುತ್ತಿರುವ ರಣ್‌ಬೀರ್ ಕಪೂರ್ ಹಾಗೂ ಸಾಯಿ ಪಲ್ಲವಿ ಅವರ ಫೋಟೋ ಲೀಕ್ ಆಗಿದೆ. ರಣ್‌ಬೀರ್ ಹಾಗೂ ಸಾಯಿಪಲ್ಲವಿ ಅವರು ಚಿತ್ರದಲ್ಲಿ ಸೀತೆ ಹಾಗೂ ರಾಮನ ಪಾತ್ರದಲ್ಲಿ ಕಾಣಿಸಿಕೊಂಡಿದ್ದು, ಪಾತ್ರದ ಲುಕ್‌ನ ಸಮೇತ ಫೋಟೋ ಲೀಕ್ ಆಗಿ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.
ಸಾಕಷ್ಟು ಭದ್ರತೆಯ ನಡುವೆ ಮುಂಬಾಯಿನಲ್ಲಿ ಗುರುಕುಲ ದೃಶ್ಯಗಳ ಶೂಟಿಂಗ್ ನಡೆಯುತ್ತಿದೆ. ಆದರೂ ಚಿತ್ರದ ಫೋಟೊಗಳು ಲೀಕ್ ಆಗಿದೆ. ‘ಅನಿಮಲ್’ ಚಿತ್ರದ ನಂತರ ರಣ್‌ಬೀರ್ ಕಪೂರ್ ನಟಿಸುತ್ತಿರುವ ಚಿತ್ರ ಇದಾಗಿದೆ. ನಟಿ ಸಾಯಿ ಪಲ್ಲವಿ ಈ ಚಿತ್ರದ ಮೂಲಕ ಬಾಲಿವುಡ್‌ಗೆ ಕಾಲಿಟ್ಟಿದ್ದಾರೆ. ನಿತೇಶ್ ತಿವಾರಿ ನಿರ್ದೇಶನದ, ನಮಿತ್ ಮಲ್ಹೋತ್ರಾ ಹಾಗೂ ಯಶ್ ನಿರ್ಮಾಣದ ಈ ಚಿತ್ರದಲ್ಲಿ ರಾವಣನ ಪಾತ್ರದಲ್ಲೂ ಯಶ್ ನಟಿಸಲಿದ್ದಾರೆ ಎನ್ನಲಾಗಿದೆ. ಬಹುಕೋಟಿ ವೆಚ್ಚದ ಈ ಸಿನಿಮಾ ಮೂರು ಭಾಗಗಳಲ್ಲಿ ತೆರೆ ಮೇಲೆ ಮೂಡಲಿದೆ. ‘ಭಾರತೀಯ ಸಂಸ್ಕೃತಿಯನ್ನು ಜಗತ್ತಿಗೆ ಸಾರುವ ನಿಟ್ಟಿನಲ್ಲಿ ಅತ್ಯುತ್ತಮ ತಂತ್ರಜ್ಞಾನ ಬಳಸಿ ‘ರಾಮಾಯಣ’ ಚಿತ್ರವನ್ನು ಮಾಡುತ್ತಿದ್ದೇವೆ. ನನ್ನ ಹಾಗೂ ನಮಿತ್ ಮಲ್ಹೋತ್ರಾ ಆಲೋಚನೆಗಳು ಹೊಂದಾಣಿಕೆಯಾಗುತ್ತಿದ್ದು, ಇಬ್ಬರು ಜತೆಗೂಡಿ ಈ ಚಿತ್ರವನ್ನು ನಿರ್ಮಿಸುತ್ತಿದ್ದೇವೆ’ ಎಂಬ ಯಶ್ ಅವರ ಇತ್ತೀಚಿನ ಹೇಳಿಕೆ ಚಿತ್ರದ ಮೇಲಿನ ನಿರೀಕ್ಷೆ ಹೆಚ್ಚಿಸಿದೆ.