ರಿಷಿ ನಟನೆಯ ರಾಮನ ಅವತಾರ ಚಿತ್ರದ ಟ್ರೇಲರ್ ಬಿಡುಗಡೆ ಆಗಿದೆ.

ಕನ್ನಡಪ್ರಭ ಸಿನಿವಾರ್ತೆ

ರಿಷಿ ನಾಯಕನಾಗಿ ನಟಿಸಿರುವ ‘ರಾಮನ ಅವತಾರ’ ಚಿತ್ರದ ಟ್ರೇಲರ್‌ ಬಿಡುಗಡೆ ಆಗಿದೆ. ಚಿತ್ರದ ನಾಯಕ ರಿಷಿ, ‘ಈ ಸಿನಿಮಾ ಒಪ್ಪಿಕೊಳ್ಳಲು ಮುಖ್ಯ ಕಾರಣ ‘ಆಪರೇಷನ್‌ ಅಲಮೇಲಮ್ಮ’. ಮನರಂಜನೆಯಿಂದ ಕೂಡಿದ ಮತ್ತೊಂದು ಸಿನಿಮಾ ಮಾಡಬೇಕು ಎನ್ನುವ ಕಾರಣಕ್ಕೆ ‘ರಾಮನ ಅವತಾರ’ ಚಿತ್ರವನ್ನು ಒಪ್ಪಿಕೊಂಡೆ. 2024ರಲ್ಲಿ ನಡೆಯುವ ಘಟನೆಯನ್ನು ರಾಮಾಯಣ ನೆರಳಿನಲ್ಲಿ ತೋರಿಸುತ್ತಿರುವುದು ನನಗೆ ಖುಷಿ ಕೊಟ್ಟಿದೆ’ ಎಂದರು.

ನಿರ್ದೇಶಕ ವಿಕಾಸ್‌ ಪಂಪಾಪತಿ, ‘ಈ ಸಿನಿಮಾ ಕತೆ ಪಾತ್ರಧಾರಿಗಳ ಜರ್ನಿಯ ಮೇಲೆ ನಿಂತಿದೆ. ರಾಮ ಹೆಸರಿನ ಪಾತ್ರಧಾರಿ ತನಗೆ ತಾನೇ ಜೆಂಟಲ್‌ಮೆನ್ ಎಂದು ಹೇಳಿಕೊಳ್ಳುತ್ತಿರುತ್ತಾನೆ. ಆತ ಯಾಕೆ ಆ ರೀತಿ ಹೇಳಿಕೊಂಡು ಓಡಾಡುತ್ತಾನೆ ಮತ್ತು ಆತನ ಜೀವನದಲ್ಲಿ ನಡೆದ ಘಟನೆಗಳೇನು ಎಂಬುದೇ ಚಿತ್ರದ ಕಥೆ’ ಎಂದರು.

ಪ್ರಣೀತಾ ಸುಭಾಷ್‌, ಶುಭ್ರ ಅಯ್ಯಪ್ಪ ನಾಯಕಿಯರಾಗಿ ನಟಿಸಿದ್ದಾರೆ. ಅಮರೇಜ್‌ ಸೂರ್ಯವಂಶಿ ನಿರ್ಮಾಣ ಮಾಡಿದ್ದಾರೆ. ಮೇ 10ಕ್ಕೆ‌ ‘ರಾಮನ ಅವತಾರ’ ಬಿಡುಗಡೆ ಆಗುತ್ತಿದೆ.