ಸಾರಾಂಶ
ಯುಐ ಸಿನಿಮಾದ ಹಾಡಿನ ರೆಕಾರ್ಡಿಂಗ್ ಹಂಗೇರಿಯಲ್ಲಿ ನಡೆಯುತ್ತಿದೆ. ಉಪೇಂದ್ರ, ಸಂಗೀತ ನಿರ್ದೇಶಕ ಅಜನೀಶ್ ಲೋಕನಾಥ್ ಅಲ್ಲಿ ಲೈವ್ ಮ್ಯೂಸಿಕ್ ರೆಕಾರ್ಡ್‌ನಲ್ಲಿ ಬ್ಯುಸಿಯಾಗಿದ್ದಾರೆ.
ಸಿನಿವಾರ್ತೆ
ಉಪೇಂದ್ರ ನಟನೆ, ನಿರ್ದೇಶನದ ‘ಯುಐ’ ಸಿನಿಮಾದ ಹಾಡಿನ ರೆಕಾರ್ಡಿಂಗ್ ಹಂಗೇರಿಯಲ್ಲಿ ನಡೆಯುತ್ತಿದೆ. ಇದೀಗ ಉಪೇಂದ್ರ ಹಂಗೇರಿಯಲ್ಲಿರುವ ವೀಡಿಯೋವೊಂದನ್ನು ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದ್ದಾರೆ. ಇದರಲ್ಲಿ ಹಂಗೇರಿಯ ಪ್ರವಾಸಿ ತಾಣವೊಂದರಲ್ಲಿ ಉಪೇಂದ್ರ ಅವರು ಸಂಗೀತ ನಿರ್ದೇಶಕ ಅಜನೀಶ್ ಲೋಕನಾಥ್ ಜೊತೆಗೆ ಚರ್ಚಿಸುತ್ತಿರುವ ದೃಶ್ಯವಿದೆ. ಇದಕ್ಕೆ ‘ಅಂದು ಎ ಇಂದು ಯುಐ’ ಎಂಬ ಶೀರ್ಷಿಕೆ ನೀಡಿ, ‘ಕಮಿಂಗ್ ಸೂನ್’ ಎಂದು ತಿಳಿಸಿದ್ದಾರೆ.
ಈ ಹಿಂದೆಯೇ ಅಜನೀಶ್ ಲೋಕನಾಥ್, ‘ಯುಐ ಹಾಡಿನ ರೆಕಾರ್ಡಿಂಗ್ ಹಂಗೇರಿಯಲ್ಲಿ ನಡೆಯಲಿದೆ. ಲೈವ್ ಮ್ಯೂಸಿಕ್ ರೆಕಾರ್ಡಿಂಗ್ ಮಾಡಿಕೊಳ್ಳುತ್ತೇವೆ. ಅಲ್ಲಿನ ಜನಪದ ಸಮೃದ್ಧವಾಗಿದೆ. ಆ ಭಾಗದ ಸಂಗೀತ ನಮ್ಮ ಸಿನಿಮಾಕ್ಕೆ ಬಹಳ ಸೊಗಸಾಗಿ ಹೊಂದಿಕೊಳ್ಳುತ್ತದೆ’ ಎಂದಿದ್ದರು.
ಇದೀಗ ಉಪೇಂದ್ರ ಹಂಗೇರಿ ವೀಡಿಯೋದೊಂದಿಗೆ ಜನರ ತಲೆಗೆ ಹುಳ ಬಿಡುವಂಥಾ ಕ್ಯಾಪ್ಶನ್ ನೀಡಿ ಮಜಾ ತಗೊಳ್ತಿದ್ದಾರೆ.