ಸಾರಾಂಶ
ಪ್ರಮೋದ್ ನಾರಾಯಣ್ ನಿರ್ಮಾಣದ ಹೊಸ ಸಿನಿಮಾಕ್ಕೆ ರಿಷಿ ನಾಯಕ.
ಸಿನಿವಾರ್ತೆ
‘ಸಂಜು ವೆಡ್ಸ್ ಗೀತಾ’ದಂಥಾ ಯಶಸ್ವಿ ಸಿನಿಮಾ ನೀಡಿದ್ದ ನಿರ್ಮಾಪಕ ಪ್ರಮೋದ್ ನಾರಾಯಣ್ ಹೊಸ ಸಿನಿಮಾ ನಿರ್ಮಾಣಕ್ಕೆ ಮುಂದಾಗಿದ್ದಾರೆ. ರಿಷಿ ಈ ಸಿನಿಮಾದ ನಾಯಕ. ರಾಮ್ ಗೋಪಾಲ್ ವರ್ಮ ಜೊತೆ ಕೆಲಸ ಮಾಡಿರುವ ಕಿಶೋರ್ ಭಾರ್ಗವ್ ಈ ಸಿನಿಮಾ ನಿರ್ದೇಶಿಸುತ್ತಿದ್ದಾರೆ. ಕನ್ನಡ ಹಾಗೂ ತೆಲುಗು ಭಾಷೆಗಳಲ್ಲಿ ಈ ಚಿತ್ರ ನಿರ್ಮಾಣವಾಗಲಿದೆ.