ಸಾರಾಂಶ
ಕೊಲೆ ಆರೋಪ ಪ್ರಕರಣದಲ್ಲಿ ಜೈಲು ಸೇರಿರುವ ನಟ ದರ್ಶನ್ ಅವರಿಗೆ ಪತ್ನಿ ವಿಜಯಲಕ್ಷ್ಮೀ ಅವರು ವಿಚ್ಛೇದನ ಕೊಡಲಿದ್ದಾರೆ ಎನ್ನುವ ಊಹಾಪೋಹ ಕೇಳಿ ಬರುತ್ತಿದೆ.
, ಬೆಂಗಳೂರು : ಕೊಲೆ ಆರೋಪ ಪ್ರಕರಣದಲ್ಲಿ ಜೈಲು ಸೇರಿರುವ ನಟ ದರ್ಶನ್ ಅವರಿಗೆ ಪತ್ನಿ ವಿಜಯಲಕ್ಷ್ಮೀ ಅವರು ವಿಚ್ಛೇದನ ಕೊಡಲಿದ್ದಾರೆ ಎನ್ನುವ ಊಹಾಪೋಹ ಕೇಳಿ ಬರುತ್ತಿದೆ. ಇದರ ಬೆನ್ನಲ್ಲೇ ವಿಜಯಲಕ್ಷ್ಮೀ ಅವರು ಸಾಮಾಜಿಕ ಜಾಲತಾಣದಲ್ಲಿ ದರ್ಶನ್ ಜೊತೆಗಿದ್ದ ಡಿಪಿಯನ್ನು ಡಿಲೀಟ್ ಮಾಡಿದ್ದಾರೆ. ಜೊತೆಗೆ ಅನ್‌ಫಾಲೋ ಕೂಡ ಮಾಡಿದ್ದಾರೆ.
ಈಗಾಗಲೇ ಪವಿತ್ರಾ ಗೌಡ ಅವರ ವಿಚಾರದಲ್ಲಿ ಸಾಕಷ್ಟು ಬಾರಿ ಹಿಂಸೆ, ನೋವು, ಸಂಕಷ್ಟಗಳನ್ನು ಮೌನವಾಗಿಯೇ ಎದುರಿಸುತ್ತಾ ಬಂದಿರುವ ವಿಜಯಲಕ್ಷ್ಮೀ ಅವರಿಗೆ ದರ್ಶನ್ ಅವರ ಬಂಧನ ಪ್ರಕರಣ ದಿಕ್ಕು ತೋಚದಂತೆ ಮಾಡಿದೆ. ವಿಜಯಲಕ್ಷ್ಮೀ ಅವರು ಈಗ ತಮ್ಮ ಪತಿಯಿಂದ ದೂರ ಆಗುವ ನಿರ್ಧಾರಕ್ಕೆ ಬಂದಿದ್ದಾರೆ ಎನ್ನುವ ಮಾತುಗಳು ಕೇಳಿ ಬರುತ್ತಿವೆ.
ಆರೋಪ ಸಾಬೀತು ಆದರೆ ತಮ್ಮ ಪತಿ ದರ್ಶನ್ ಅವರಿಗೆ ವಿಜಯಲಕ್ಷ್ಮೀ ಅವರು ಡಿವೋರ್ಸ್ ಕೊಡುವುದು ಖಾತ್ರಿ ಎನ್ನಲಾಗುತ್ತಿದೆ. ಈ ವದಂತಿಗಳಿಗೆ ಪುಷ್ಟಿ ನೀಡುವಂತೆ ದರ್ಶನ್ ಅವರು ಜೈಲಿಗೆ ಹೋದ ಬೆನ್ನಲ್ಲೇ ವಿಜಯಲಕ್ಷ್ಮೀ ಅವರು ತಮ್ಮ ಇನ್‌ಸ್ಟಾಗ್ರಾಮ್ ಖಾತೆಯಿಂದ ದರ್ಶನ್ ಅವರನ್ನು ಅನ್‍ಫಾಲೋ ಮಾಡುವ ಜತೆಗೆ ದರ್ಶನ್ ಅವರೊಂದಿಗೆ ಇದ್ದ ಫೋಟೋವನ್ನೂ ಸಹ ಡಿಲೀಟ್ ಮಾಡಿದ್ದಾರೆ. ಅಲ್ಲದೆ ಇನ್‌ಸ್ಟಾಗ್ರಾಮ್‌ನಲ್ಲಿ ವಿಜಯಲಕ್ಷ್ಮೀ ಅವರು ತಾವು ಫಾಲೋ ಮಾಡುತ್ತಿದ್ದ ಎಲ್ಲರನ್ನೂ ಅನ್‍ಫಾಲೋ ಮಾಡಿದ್ದಾರೆ.