ಆಗಸ್ಟ್‌ನಲ್ಲಿ ತೆರೆಗೆ ಬರಲಿದೆ ಸಿಗ್ನಲ್ ಮ್ಯಾನ್‌ 1971

| Published : Jun 13 2024, 12:52 AM IST / Updated: Jun 13 2024, 06:46 AM IST

Film theater
ಆಗಸ್ಟ್‌ನಲ್ಲಿ ತೆರೆಗೆ ಬರಲಿದೆ ಸಿಗ್ನಲ್ ಮ್ಯಾನ್‌ 1971
Share this Article
  • FB
  • TW
  • Linkdin
  • Email

ಸಾರಾಂಶ

ಕೆ. ಶಿವರುದ್ರಯ್ಯ ನಿರ್ದೇಶನದ ಹಾಗೂ ಪ್ರಕಾಶ್‌ ಬೆಳವಾಡಿ, ರಾಜೇಶ್‌ ನಟರಂಗ, ವೆಂಕಟೇಶ್‌ ಪ್ರಸಾದ್ ಪ್ರಮುಖ ಪಾತ್ರಗಳಲ್ಲಿ ನಟಿಸಿರುವ ‘ಸಿಗ್ನಲ್ ಮ್ಯಾನ್ 1971’ ಚಿತ್ರ ಆಗಸ್ಟ್‌ನಲ್ಲಿ ತೆರೆಗೆ ಬರಲಿದೆ.

 ಸಿನಿವಾರ್ತೆ:  ಕೆ. ಶಿವರುದ್ರಯ್ಯ ನಿರ್ದೇಶನದ ಹಾಗೂ ಪ್ರಕಾಶ್‌ ಬೆಳವಾಡಿ, ರಾಜೇಶ್‌ ನಟರಂಗ, ವೆಂಕಟೇಶ್‌ ಪ್ರಸಾದ್ ಪ್ರಮುಖ ಪಾತ್ರಗಳಲ್ಲಿ ನಟಿಸಿರುವ ‘ಸಿಗ್ನಲ್ ಮ್ಯಾನ್ 1971’ ಚಿತ್ರ ಆಗಸ್ಟ್‌ನಲ್ಲಿ ತೆರೆಗೆ ಬರಲಿದೆ ಎಂದು ಚಿತ್ರತಂಡ ಹೇಳಿಕೊಂಡಿದೆ.

1971ರಲ್ಲಿ ನಡೆದ ಇಂಡೋ- ಪಾಕ್‌ ಕದನದ ಹಿನ್ನೆಲೆಯಲ್ಲಿ ಈ ಚಿತ್ರದ ಕತೆ ಸಾಗುತ್ತದೆ. ನಿರ್ಜನ ರೈಲ್ವೆ ನಿಲ್ದಾಣದಲ್ಲಿ ಇಪ್ಪತ್ತು ವರ್ಷಗಳ ಕಾಲ ಕಾರ್ಯ ನಿರ್ವಹಿಸಿದ ‘ಸಿಗ್ನಲ್ ಮ್ಯಾನ್’ ಒಬ್ಬನ ಜೀವನ ಕತೆ ಈ ಚಿತ್ರದಲ್ಲಿದೆ.

ಕೆ ಶಿವರುದ್ರಯ್ಯ, ‘20 ವರ್ಷಗಳ ಕಾಲ ಜನಸಂಪರ್ಕವಿಲ್ಲದ ಸ್ಥಳದಲ್ಲಿದ್ದ ವ್ಯಕ್ತಿಯೊಬ್ಬ ಗೊಂದಲಕ್ಕೀಡಾಗುತ್ತಾನೆ. ಗೊಂದಲದಿಂದ ಆಚೆ ಬಂದ ನಂತರ ಆತ ರಾಜ್ಯ ಹಾಗೂ ದೇಶಕ್ಕೆ ಬೇಕಾಗುವ ವ್ಯಕ್ತಿಯಾಗುತ್ತಾನೆ. ಹಲವು ಅಂತಾರಾಷ್ಟ್ರೀಯ ಚಿತ್ರೋತ್ಸವಗಳಲ್ಲಿ ಸಿನಿಮಾ ಪ್ರದರ್ಶನಗೊಂಡು ಮೆಚ್ಚುಗೆಗೆ ಪಾತ್ರವಾಗಿದೆ. ಆಗಸ್ಟ್‌ನಲ್ಲಿ ತೆರೆಗೆ ಬರಲಿದೆ’ ಎಂದರು. ಗಣೇಶ್‌ ಪ್ರಭು ಚಿತ್ರದ ನಿರ್ಮಾಪಕರು.