ಕಾಂಗ್ರೆಸ್‌ ಬಳಿಕ ಸಿಪಿಐಗೂ ತೆರಿಗೆ ಇಲಾಖೆ ನೋಟಿಸ್‌

| Published : Mar 30 2024, 12:55 AM IST / Updated: Mar 30 2024, 09:13 AM IST

ಸಾರಾಂಶ

ಕಾಂಗ್ರೆಸ್‌ಗೆ 2000 ಕೋಟಿ ರು.ಗೂ ಅಧಿಕ ಮೊತ್ತದ ಆದಾಯ ತೆರಿಗೆ ಇಲಾಖೆ ನೋಟಿಸ್‌ ರವಾನಿಸಿದ ಬೆನ್ನಲ್ಲೇ, ಸಿಪಿಐಗೂ ಆದಾಯ ತೆರಿಗೆ ಇಲಾಖೆ ನೋಟಿಸ್‌ ರವಾನಿಸಿದೆ.

ನವದೆಹಲಿ: ಕಾಂಗ್ರೆಸ್‌ಗೆ 2000 ಕೋಟಿ ರು.ಗೂ ಅಧಿಕ ಮೊತ್ತದ ಆದಾಯ ತೆರಿಗೆ ಇಲಾಖೆ ನೋಟಿಸ್‌ ರವಾನಿಸಿದ ಬೆನ್ನಲ್ಲೇ, ಸಿಪಿಐಗೂ ಆದಾಯ ತೆರಿಗೆ ಇಲಾಖೆ ನೋಟಿಸ್‌ ರವಾನಿಸಿದೆ.

ಕಳೆದ ಕೆಲ ವರ್ಷಗಳ ಆದಾಯ ತೆರಿಗೆ ರಿಟರ್ನ್ಸ್‌ ಸಲ್ಲಿಕೆ ವೇಳೆ ಹಳೆಯ ಪಾನ್‌ಕಾರ್ಡ್‌ ನಂಬರ್‌ ಬಳಸಿದ್ದ ಸಂಬಂಧ 11 ಕೋಟಿ ರು. ಪಾವತಿಸುವಂತೆ ಆದಾಯ ತೆರಿಗೆ ಇಲಾಖೆ ಸೂಚಿಸಿದೆ. ಈ ಮೊತ್ತವು ಬಾಕಿ, ದಂಡ ಮತ್ತು ಬಡ್ಡಿಯನ್ನು ಒಳಗೊಂಡಿದೆ ಎಂದು ಮೂಲಗಳು ತಿಳಿಸಿವೆ.

ಈ ನಡುವೆ ನೋಟಿಸ್‌ ಕುರಿತು ಪರಿಶೀಲಿಸಿದ್ದು, ವಕೀಲರ ಬಳಿ ಚರ್ಚಿಸಿದ ಬಳಿಕ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಪಕ್ಷದ ಮೂಲಗಳು ತಿಳಿಸಿವೆ.

ಟಿಎಂಸಿ ನಾಯಕ ಗೋಖಲೆಗೆ 4 ದಿನದಲ್ಲಿ 11 ನೋಟಿಸ್‌

ಕೋಲ್ಕತಾ: ಆದಾಯ ತೆರಿಗೆ ಇಲಾಖೆ ಕಳೆದ 72 ಗಂಟೆಗಳಲ್ಲಿ ತಮಗೆ 11 ನೋಟಿಸ್‌ಗಳನ್ನು ರವಾನಿಸಿದೆ ಎಂದು ಟಿಎಂಸಿ ನಾಯಕ ಸಾಕೇತ್‌ ಗೋಖಲೆ ಆರೋಪಿಸಿದ್ದಾರೆ. ಈ ಪೈಕಿ ಕೆಲವು 7 ವರ್ಷಗಳಷ್ಟು ಹಿಂದಿನ ಅವಧಿಗೆ ಸಂಬಂಧಿಸಿದ್ದು. ‌

ಜಾರಿ ನಿರ್ದೇಶನಾಲಯದಿಂದ ಬೆದರಿಕೆ ಸಾಧ್ಯವಾಗದೇ ಹೋದಾಗ ಬಿಜೆಪಿ, ಐಟಿ ಅಧಿಕಾರಿಗಳನ್ನು ಬಳಸಿಕೊಳ್ಳುತ್ತಿದೆ ಎಂದು ಗೋಖಲೆ ದೂರಿದ್ದಾರೆ.