ಒಂದೇ ಕಾಲಲ್ಲಿ 16500 ಅಡಿ ಎತ್ತರದ ಮೌಂಟ್‌ ರೆನಾಕ್‌ ಶಿಖರ ಏರಿದ ಉದಯ್‌

| Published : Mar 30 2024, 12:52 AM IST

ಒಂದೇ ಕಾಲಲ್ಲಿ 16500 ಅಡಿ ಎತ್ತರದ ಮೌಂಟ್‌ ರೆನಾಕ್‌ ಶಿಖರ ಏರಿದ ಉದಯ್‌
Share this Article
  • FB
  • TW
  • Linkdin
  • Email

ಸಾರಾಂಶ

ಇಲ್ಲಿನ ಬೆಲ್ಫಾರಿಯಾ ನಿವಾಸಿಯಾದ ಉದಯ್‌ ಕುಮಾರ್‌ ಒಂದೇ ಕಾಲಲ್ಲಿ 16,500 ಅಡಿ ಎತ್ತರದ ಸಿಕ್ಕಿಂನ ಮೌಂಟ್‌ ರೆನಾಕ್‌ ಶಿಖರವನ್ನು ಏರಿ ಸಾಧನೆ ಮಾಡಿದ್ದಾರೆ.

ಕೋಲ್ಕತಾ: ಇಲ್ಲಿನ ಬೆಲ್ಫಾರಿಯಾ ನಿವಾಸಿಯಾದ ಉದಯ್‌ ಕುಮಾರ್‌ ಒಂದೇ ಕಾಲಲ್ಲಿ 16,500 ಅಡಿ ಎತ್ತರದ ಸಿಕ್ಕಿಂನ ಮೌಂಟ್‌ ರೆನಾಕ್‌ ಶಿಖರವನ್ನು ಏರಿ ಸಾಧನೆ ಮಾಡಿದ್ದಾರೆ.

ಇಲ್ಲಿನ ಖಾಸಗಿ ಸಂಸ್ಥೆಯೊಂದರಲ್ಲಿ ಉದ್ಯೋಗ ಮಾಡುತ್ತಿರುವ ಉದಯ್‌ ಕುಮಾರ್‌, 2015ರ ರೈಲು ಅಪಘಾತದಲ್ಲಿ ತಮ್ಮ ಎಡಗಾಲು ಮೊಣಕಾಲಿನವರೆಗೂ ಹಾಗೂ ಬಲಗಾಲಿನ ನಾಲ್ಕು ಬೆರಳಗಳನ್ನು ಕಳೆದುಕೊಂಡಿದ್ದರು. ಇದರಿಂದ ಕುಮಾರ್‌ ಶೇ.91 ರಷ್ಟು ಅಂಗವಿಕಲತೆಯನ್ನು ಎದುರಿಸುತ್ತಿದ್ದರು. ಇದರ ಹೊರತಾಗಿಯೂ ಒಂದೇ ಕಾಲಿನಲ್ಲಿ ಶಿಖರವನ್ನು ಏರಿ ಸಾಧನೆ ಮಾಡಿದ್ದಾರೆ.

ಪ್ರಸ್ತುತ ವಿಶ್ವದ ಅತಿ ಎತ್ತರದ ಶಿಖರವಾದ ಮೌಂಟ್‌ ಎವರೆಸ್ಟ್‌ ಏರಲು ಸಿದ್ಧತೆ ನಡೆಸುತ್ತಿದ್ದಾರೆ ಎಂದು ಮೂಲಗಳು ತಿಳಿಸಿವೆ.