ಲಿಕ್ಕರ್‌ ಕೇಸಲ್ಲಿ ಇ.ಡಿ.ಮುಂದಿನ ಗುರಿ ಆತಿಷಿ?

| Published : Mar 31 2024, 02:08 AM IST / Updated: Mar 31 2024, 11:26 AM IST

ಸಾರಾಂಶ

ಗೋವಾ ಚುನಾವಣೆ ಉಸ್ತುವಾರಿಯಾಗಿದ್ದ ಸಚಿವೆ ಆತಿಷಿ ಅಬಕಾರಿ ಹಗರಣದಲ್ಲಿ ಶೀಘ್ರದಲ್ಲೇ ಬಂಧನವಾಗಬಹುದು ಎನ್ನಲಾಗಿದೆ.

ನವದೆಹಲಿ: ದೆಹಲಿ ಮದ್ಯ ಲೈಸೆನ್ಸ್‌ ಹಗರಣದಲ್ಲಿ ಮುಂದಿನ ಬಂಧನ, ದೆಹಲಿ ಸರ್ಕಾರದ ಸಚಿವೆ ಆತಿಷಿ ಆಗಿರಬಹುದು ಎನ್ನಲಾಗುತ್ತಿದೆ. 

ಮದ್ಯ ಲೈಸೆನ್ಸ್‌ ಹಗರಣದ ಮೂಲಕ ಸಂಗ್ರಹಿಸಿದ ಹಣವನ್ನು ಆಮ್‌ಆದ್ಮಿ ಪಕ್ಷ, ಕಳೆದ ಗೋವಾ ವಿಧಾನಸಭಾ ಚುನಾವಣೆ ವೇಳೆ ಚುನಾವಣಾ ಖರ್ಚು ವೆಚ್ಚಗಳಿಗಾಗಿ ಬಳಸಲಾಗಿತ್ತು. ಈ ವೇಳೆ ಗೋವಾದಲ್ಲಿ ಪಕ್ಷದ ಉಸ್ತುವಾರಿಯಾಗಿ ಕಾರ್ಯನಿರ್ವಹಿಸಿದ್ದು ಸ್ವತಃ ಆತಿಷಿ. ಈಗಾಗಲೇ ಈ ಪ್ರಕರಣದಲ್ಲಿ ಕೋರ್ಟ್‌ಗೆ ಸಲ್ಲಿಸಲಾಗಿರುವ ದಾಖಲೆಗಳಲ್ಲಿ, ಅಕ್ರಮ ಹಣವನ್ನು ಗೋವಾ ಚುನಾವಣೆಯಲ್ಲಿ ಬಳಸಿರುವ ಮಾಹಿತಿಯನ್ನು ಇ.ಡಿ. ನೀಡಿದೆ.

 ಮುಂದಿನ ಸಮನ್ಸ್ ಅವರಿಗೆ ಆಗಿರಬಹುದು ಎಂದು ಮೂಲಗಳು ಹೇಳಿವೆ.ಈ ಪ್ರಕರಣ ಸಂಬಂಧ ಈಗಾಗಲೇ ಸಚಿವ ಮನೀಶ್‌ ಸಿಸೋಡಿಯಾ, ರಾಜ್ಯಸಭಾ ಸದಸ್ಯ ಸಂಜಯ್‌ ಸಿಂಗ್‌ ಮತ್ತು ಸ್ವತಃ ಮುಖ್ಯಮಂತ್ರಿ ಅರವಿಂದ್‌ ಕೇಜ್ರಿವಾಲ್‌ ಅವರನ್ನು ಇ.ಡಿ. ಅಧಿಕಾರಿಗಳು ಬಂಧಿಸಿದ್ದಾರೆ.