ಬಿಜೆಪಿ ವಾಷಿಂಗ್‌ ಮಷಿನ್‌ ಕಾಂಗ್ರೆಸ್‌ ವ್ಯಂಗ್ಯ

| Published : Mar 31 2024, 02:06 AM IST

ಸಾರಾಂಶ

ಇತರೆ ಪಕ್ಷಗಳ ಕಳಂಕಿತ ನಾಯಕರು ಬಿಜೆಪಿ ಸೇರುತ್ತಲೇ ಅವರು ಕಳಂಕರಹಿತರಾಗುತ್ತಾರೆ.

ನವದೆಹಲಿ: ಇತರೆ ಪಕ್ಷಗಳ ಕಳಂಕಿತ ನಾಯಕರು ಬಿಜೆಪಿ ಸೇರುತ್ತಲೇ ಅವರು ಕಳಂಕರಹಿತರಾಗುತ್ತಾರೆ. ಅವರ ಪಾಲಿಗೆ ಬಿಜೆಪಿ ವಾಷಿಂಗ್‌ ಮಷಿನ್‌ ಎಂದು ಹಲವು ದಿನಗಳಿಂದ ಟಾಂಗ್‌ ನೀಡುತ್ತಿರುವ ಕಾಂಗ್ರೆಸ್‌, ಶನಿವಾರ ಇಲ್ಲಿ ನಡೆಸಿದ ಪತ್ರಿಕಾಗೋಷ್ಠಿ ವೇಳೆ ವಾಷಿಂಗ್‌ ಮಷಿನ್‌ ಅನ್ನು ಪ್ರದರ್ಶಿಸಿ ಬಿಜೆಪಿ ವಿರುದ್ಧ ಕಟಿಕಿಯಾಡಿತು.

ಶನಿವಾರ ಪತ್ರಿಕಾಗೋಷ್ಠಿಯಲ್ಲಲಿ ಮಾತನಾಡಿದ ಕಾಂಗ್ರೆಸ್‌ ಪ್ರಧಾನ ಕಾರ್ಯದರ್ಶಿ ಪವನ್‌ ಖೇರಾ, ‘ಬಿಜೆಪಿ ವಾಷಿಂಗ್‌ ಮಷೀನ್‌ಗೆ ಭ್ರಷ್ಟಾಚಾರ, ಭಯೋತ್ಪಾದನೆ, ಸುಲಿಗೆ ಹೀಗೆ ಆರೋಪಗಳನ್ನು ಹೊತ್ತವರು ಸೇರಿದರೆ ಅವರ ಕೇಸುಗಳು ರದ್ದಾಗಲಿದೆ. ಇದಕ್ಕೆ ಉದಾಹರಣೆ, ಎನ್‌ಸಿಪಿ ಅಜಿತ್‌ ಪವಾರ್ ಬಣದ ಪ್ರಫುಲ್‌ ಪಟೇಲ್‌. ಅವರು ಬಿಜೆಪಿ ಜೊತೆ ಸೇರಿದ ಕೂಡಲೇ ಅವರ ಮೇಲಿದ್ದ ಕೇಸುಗಳನ್ನು ಸಿಬಿಐ ಮುಚ್ಚಿಹಾಕಿದೆ. ಈ ವಾಷಿಂಗ್‌ ಮಷೀನ್‌ ಬೆಲೆ ಕೇವಲ 8500 ಕೋಟಿ ರು. (ಬಿಜೆಪಿಗೆ ಬಂದ ಚುನಾವಣಾ ಬಾಂಡ್‌ ಮೊತ್ತ) ಎಂದು ಟಾಂಗ್‌ ನೀಡಿದರು.