ಜೂನ್‌ನಿಂದ ಬ್ಯಾಂಕ್‌ ನೌಕರರಿಗೆ ವಾರಕ್ಕೆ ಐದೇ ದಿನ ಕೆಲಸ ನೀತಿ?

| Published : Mar 02 2024, 01:45 AM IST

ಜೂನ್‌ನಿಂದ ಬ್ಯಾಂಕ್‌ ನೌಕರರಿಗೆ ವಾರಕ್ಕೆ ಐದೇ ದಿನ ಕೆಲಸ ನೀತಿ?
Share this Article
  • FB
  • TW
  • Linkdin
  • Email

ಸಾರಾಂಶ

ಜೂನ್‌ ತಿಂಗಳಿನಿಂದ ಬ್ಯಾಂಕ್‌ ನೌಕರರಿಗೆ ವಾರಕ್ಕೆ ಐದು ದಿನ ಮಾತ್ರ ಕೆಲಸ ಮಾಡುವ ಜೊತೆಗೆ ಸಂಬಳ ಕೂಡ ಹೆಚ್ಚಳವಾಗುವ ನೀತಿ ಜಾರಿಯಾಗುವ ಸಾಧ್ಯತೆಯಿದೆ.

ನವದೆಹಲಿ: ಮುಂಬರುವ ಜೂನ್‌ನಿಂದ ಬ್ಯಾಂಕ್‌ ನೌಕರರಿಗೆ ವಾರಕ್ಕೆ ಕೇವಲ ಐದು ದಿನಗಳ ಕೆಲಸ ಮಾಡುವ ಬೇಡಿಕೆಗೆ ಕೇಂದ್ರ ಸರ್ಕಾರ ಸಮ್ಮತಿ ಸೂಚಿಸಲಿದೆ ಎನ್ನಲಾಗಿದೆ. ಈ ಕುರಿತು ಅಖಿಲ ಭಾರತ ಬ್ಯಾಂಕ್‌ ನೌಕರರ ಒಕ್ಕೂಟ ಹಣಕಾಸು ಇಲಾಖೆಗೆ ಮನವಿ ಮಾಡಿದ್ದು, ವಾರಕ್ಕೆ ಕೇವಲ ಐದು ದಿನಗಳ ಜೊತೆಗೆ ತಮ್ಮ ಸಂಬಳವನ್ನೂ ಹೆಚ್ಚಳ ಮಾಡಬೇಕೆಂದು ಬೇಡಿಕೆ ಸಲ್ಲಿಸಿದೆ. ಈ ಕುರಿತು ಕೇಂದ್ರ ಹಣಕಾಸು ಇಲಾಖೆ ಸಕಾರಾತ್ಮಕವಾಗಿ ಸ್ಪಂದಿಸಿದ್ದು ಇನ್ನು ಕೆಲವೇ ದಿನಗಳಲ್ಲಿ ಅಧಿಕೃತ ಘೋಷಣೆ ಹೊರಬೀಳಬಹುದು ಎನ್ನಲಾಗಿದೆ.

ಪ್ರಸ್ತುತ ಬ್ಯಾಂಕ್‌ ನೌಕರರಿಗೆ ಎರಡನೇ ಮತ್ತು ನಾಲ್ಕನೇ ಶನಿವಾರ ರಜೆ ನೀಡಲಾಗುತ್ತಿತ್ತು. ಇನ್ನು ಮುಂದೆ ಅವರಿಗೆ ತಿಂಗಳಿನ ಎಲ್ಲ ಶನಿವಾರ ಮತ್ತು ಭಾನುವಾರದಂದು ರಜೆ ಸಿಗಲಿದೆ. ಜೊತೆಗೆ ಈ ಮಾರ್ಪಾಡಿನಲ್ಲಿ ಸಾರ್ವಜನಿಕರಿಗೆ ಯಾವುದೇ ತೊಂದರೆಯಾಗದಂತೆ ಮಾರ್ಪಾಡು ಮಾಡಲಾಗಿದ್ದು, ಬ್ಯಾಂಕ್‌ ಸಿಬ್ಬಂದಿ ಐದು ದಿನಗಳಲ್ಲೇ ಹೆಚ್ಚುವರಿ ಕೆಲಸ ಮಾಡುವ ಮೂಲಕ ತಮ್ಮ ಕೆಲಸದ ಅವಧಿಯನ್ನು ಸರಿದೂಗಿಸಿಕೊಳ್ಳುವಂತೆ ನಿಯಮ ರೂಪಿಸಲಿದೆ ಎಂದು ಮೂಲಗಳು ತಿಳಿಸಿವೆ. ಇದರ ಜೊತೆಗೆ ಬ್ಯಾಂಕ್‌ ನೌಕರರ ವೇತನವೂ ಸಹ ಶೇ.17ರಷ್ಟು ಹೆಚ್ಚಳವಾಗಬಹುದು ಎನ್ನಲಾಗಿದೆ.