ಸಾರಾಂಶ
ಪ್ರಧಾನಿ ನರೇಂದ್ರ ಮೋದಿ ವಿರುದ್ಧ ವಾಗ್ದಾಳಿಯೊಂದಿಗೆ ಬಿಹಾರ ಚುನಾವಣಾ ಪ್ರಚಾರಕ್ಕೆ ಚಾಲನೆ ನೀಡಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ಮತಕ್ಕಾಗಿ ಪ್ರಧಾನಿ ಮೋದಿ ನೃತ್ಯ ಮಾಡಲೂ ಸಿದ್ಧ ಎಂದು ವ್ಯಂಗ್ಯ - ಬಿಜೆಪಿ ತಿರುಗೇಟು
ಮುಜಫ್ಫರ್‌ಪುರ: ಪ್ರಧಾನಿ ನರೇಂದ್ರ ಮೋದಿ ವಿರುದ್ಧ ವಾಗ್ದಾಳಿಯೊಂದಿಗೆ ಬಿಹಾರ ಚುನಾವಣಾ ಪ್ರಚಾರಕ್ಕೆ ಚಾಲನೆ ನೀಡಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ಮತಕ್ಕಾಗಿ ಪ್ರಧಾನಿ ಮೋದಿ ನೃತ್ಯ ಮಾಡಲೂ ಸಿದ್ಧ ಎಂದು ವ್ಯಂಗ್ಯವಾಡಿದ್ದಾರೆ.ಬುಧವಾರ ಇಲ್ಲಿ ಇಂಡಿಯಾ ಕೂಟದ ಪರವಾಗಿ ಚುನಾವಣಾ ರ್‍ಯಾಲಿಯಲ್ಲಿ ಪಾಲ್ಗೊಂಡು ಮಾತನಾಡಿದ ರಾಹುಲ್, ‘ಮತಕ್ಕೆ ಬದಲಾಗಿ ನೀವು ನೃತ್ಯ ಮಾಡಬೇಕೆಂದು ನರೇಂದ್ರ ಮೋದಿಗೆ ಹೇಳಿದರೆ ಅವರು ವೇದಿಕೆಯಲ್ಲೇ ನೃತ್ಯ ಮಾಡಲು ಸಿದ್ಧ’ ಎಂದು ವ್ಯಂಗ್ಯವಾಡಿದರು.
ಜೊತೆಗೆ ಛಟ್ ಪೂಜೆ ವೇಳೆ ದೆಹಲಿಯಲ್ಲಿ ಬಿಹಾರಿ ಜನತೆ ಕಲುಷಿತ ಯಮುನಾ ನದಿಯಲ್ಲೇ ಸ್ನಾನ ಮಾಡಿದರೆ, ಮೋದಿ ಮಾತ್ರ ವಿಶೇಷವಾಗಿ ಸಿದ್ಧಪಡಿಸಿದ್ದ ಕೆರೆಯಲ್ಲಿ ಸ್ನಾನ ಮಾಡಿದರು. ಅವರಿಗೆ ಯುಮುನೆ ಬಗ್ಗೆಯಾಗಲೀ, ಛಟ್ ಪೂಜೆಯ ಬಗ್ಗೆಯಾಗಲೀ ಯಾವುದೇ ಚಿಂತೆ ಇಲ್ಲ. ಅವರ ಗಮನ ಏನಿದ್ದರೂ ಮತಗಳ ಮೇಲೆ ಮಾತ್ರ. ಅವರಿಗೆ ನಿಮ್ಮ ಮತ ಬೇಕು ಅಷ್ಟೇ’ ಎಂದು ಟೀಕಿಸಿದರು.
ತೀಶ್ ಕುಮಾರ್ ಇಲ್ಲಿ ಕೇವಲ ಮುಖವಾಡವಷ್ಟೇ
ಜೊತೆಗೆ ನಿತೀಶ್ ಕುಮಾರ್ ಇಲ್ಲಿ ಕೇವಲ ಮುಖವಾಡವಷ್ಟೇ. ಬಿಹಾರವನ್ನು ದೆಹಲಿಯಿಂದಲೇ ಬಿಜೆಪಿ ನಾಯಕರು ನಿಯಂತ್ರಿಸುತ್ತಿದ್ದಾರೆ. ಅಲ್ಲದೆ ಮಹಾರಾಷ್ಟ್ರ, ಹರ್ಯಾಣ ರೀತಿಯಲ್ಲಿ ಬಿಹಾರದಲ್ಲಿ ಮತಚೋರಿಗೆ ಪ್ರಯತ್ನಿಸುತ್ತಿದ್ದಾರೆ. ಅದಕ್ಕಾಗಿಯೇ 66 ಲಕ್ಷ ಮತದಾರರ ಹೆಸರನ್ನು ರದ್ದುಪಡಿಸಲಾಗಿದೆ. ಬಿಹಾರಿಗಳ ಧ್ವನಿ ಬಿಹಾರದಲ್ಲಿ ಸರ್ಕಾರ ರಚಿಸುವುದು ಅವರಿಗೆ ಬೇಕಿಲ್ಲ ಎಂದು ಆರೋಪಿಸಿದರು.
ಲೋಕಲ್ ಗೂಂಡಾ ರೀತಿ
ರಾಹುಲ್ ಮಾತು: ಬಿಜೆಪಿ
ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು ಮತಕ್ಕಾಗಿ ವೇದಿಕೆ ಮೇಲೆ ನೃತ್ಯ ಮಾಡಲೂ ಸಿದ್ಧ ಎಂಬ ಹೇಳಿಕೆಗೆ ಪ್ರತಿಕ್ರಿಯಿಸಿರುವ ಬಿಜೆಪಿ, ‘ರಾಹುಲ್ ಗಾಂಧಿ ಒಬ್ಬ ಸ್ಥಳೀಯ ಗೂಂಡಾ ರೀತಿ ಮಾತಾಡುತ್ತಿದ್ದಾರೆ’ ಎಂದು ಆಕ್ರೋಶ ವ್ಯಕ್ತಪಡಿಸಿದೆ.
ಈ ಬಗ್ಗೆ ಟ್ವೀಟಿಸಿರುವ ಬಿಜೆಪಿ ವಕ್ತಾರ ಪ್ರದೀಪ್ ಭಂಡಾರಿ, ‘ಲೋಕಲ್ ಗೂಂಡಾನಂತೆ ರಾಹುಲ್ ಆಡಿದ ಮಾತು ಬಿಹಾರದ ಮತದಾರರು ಮತ್ತು ಬಡವರಿಗೆ ಮಾಡಿದ ಅವಮಾನವಾಗಿದೆ. ಜತೆಗೆ, ಅವರು ಭಾರತದ ಪ್ರಜಾಪ್ರಭುತ್ವವನ್ನೂ ವ್ಯಂಗ್ಯವಾಡಿದ್ದಾರೆ’ ಎಂದು ಆರೋಪಿಸಿ ಹರಿಹಾಯ್ದಿದ್ದಾರೆ.
;Resize=(690,390))

;Resize=(128,128))
;Resize=(128,128))