ಹಿಂದೂ ಸ್ತ್ರೀಯರ ಉದಾಹರಿಸಿ ಪಾಕಿಸ್ತಾನಿಗಳಿಗೆ ಜೈಷ್‌ ಉಗ್ರರ ಕರೆ

| N/A | Published : Oct 30 2025, 01:30 AM IST

Pakistan Terrorist

ಸಾರಾಂಶ

ಭಾರತದ ವಿರುದ್ಧ ಹೋರಾಡಲು ಮಹಿಳಾ ಉಗ್ರ ಪಡೆ ರಚನೆಯ ಘೋಷಣೆ ಮಾಡಿದ್ದ ಜೈಷ್‌ ಉಗ್ರ ಸಂಘಟನೆ, ಅದಕ್ಕೆ ಮಹಿಳೆಯರನ್ನು ಆಹ್ವಾನಿಸಲು ಭಾರತದ ಹಿಂದೂ ಮಹಿಳೆಯರನ್ನು ಉದಾಹರಣೆಯಾಗಿ ಬಳಸಿಕೊಂಡಿದೆ.

ನವದೆಹಲಿ: ಭಾರತದ ವಿರುದ್ಧ ಹೋರಾಡಲು ಮಹಿಳಾ ಉಗ್ರ ಪಡೆ ರಚನೆಯ ಘೋಷಣೆ ಮಾಡಿದ್ದ ಜೈಷ್‌ ಉಗ್ರ ಸಂಘಟನೆ, ಅದಕ್ಕೆ ಮಹಿಳೆಯರನ್ನು ಆಹ್ವಾನಿಸಲು ಭಾರತದ ಹಿಂದೂ ಮಹಿಳೆಯರನ್ನು ಉದಾಹರಣೆಯಾಗಿ ಬಳಸಿಕೊಂಡಿದೆ.

ಈ ಕುರಿತ ವಿಡಿಯೋ ಬಿಡುಗಡೆ

ಈ ಕುರಿತ ವಿಡಿಯೋ ಬಿಡುಗಡೆ ಮಾಡಿರುವ ಸಂಘಟನೆ ಮುಖ್ಯಸ್ಥ ಮಸೂದ್ ಅಜರ್‌, ‘ಜೈಷ್‌ನ ಶತ್ರುಗಳು (ಭಾರತೀಯರು) ಹಿಂದೂ ಮಹಿಳೆಯರನ್ನು ಸೇನೆಗೆ ಸೇರಿಸಿಕೊಂಡಿದ್ದಾರೆ. ಹೀಗಾಗಿ ಅವರೊಂದಿಗೆ ಹೋರಾಡಲು ಪಾಕಿಸ್ತಾನದ ಪ್ರತಿ ಜಿಲ್ಲೆಯಲ್ಲಿ ಜಮಾತ್‌-ಉಲ್‌-ಮೊಮಿನಾತ್‌ ಸ್ಥಾಪಿಸಲಾಗಿದೆ. ಇದಕ್ಕೆ ಮಹಿಳೆಯರನ್ನು ನೇಮಿಸುವ ಜವಾಬ್ದಾರಿಯನ್ನು ಮುಂತಾಜಿಮಾಗಳಿಗೆ ನೀಡಲಾಗುವುದು’ ಎಂದಿದ್ದಾನೆ.

‘ಓ ಮುಸಲ್ಮಾನ ಸಹೋದರಿ’ ಹೆಸರಿನ ಕರಪತ್ರ

ಜತೆಗೆ ‘ಓ ಮುಸಲ್ಮಾನ ಸಹೋದರಿ’ ಹೆಸರಿನ ಕರಪತ್ರವನ್ನೂ ಬಿಡುಗಡೆ ಮಾಡಿ, ‘ಈ ಸಂಘಟನೆ ಸೇರಿಕೊಂಡ ಸ್ತ್ರೀಯರಿಗೆ ಮರಣದ ಬಳಿಕ ಸ್ವರ್ಗ ಪ್ರಾಪ್ತಿಯಾಗಲಿದೆ’ ಎಂಬ ಭರವಸೆ ನೀಡಿದ್ದಾನೆ.

ಈ ಸಂಘಟನೆಯ ನೇತೃತ್ವವನ್ನು ಮಸೂದ್‌ ಉಮ್ಮೆ ಮಸೂದ್‌ ವಹಿಸಿಕೊಂಡಿದ್ದು, ಈಗಾಗಲೇ ವಾರದಲ್ಲಿ 5 ದಿನ ಆನ್‌ಲೈನ್‌ ತರಬೇತಿ ಶುರು ಮಾಡಿದ್ದಾಳೆ. ಕಮಾಂಡರ್‌ಗಳ ಪತ್ನಿಯರು, ಮೃತ ಉಗ್ರರ ಸಂಬಂಧಿಗಳು ಮತ್ತು ಆರ್ಥಿಕವಾಗಿ ದುರ್ಬಲರಾಗಿರುವ ಮಹಿಳೆಯರನ್ನು ಇದಕ್ಕೆ ನೇಮಿಸಿಕೊಳ್ಳಲಾಗುತ್ತಿದೆ.

Read more Articles on