ಸಾರಾಂಶ
ಹಮಾಸ್ ಉಗ್ರರು ಮತ್ತು ಇಸ್ರೇಲ್ ನಡುವೆ ಕದನವಿರಾಮ ಏರ್ಪಡಿಸುವಲ್ಲಿ ಯಶಸ್ವಿಯಾಗಿದ್ದ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಇದೀಗ ಮತ್ತೊಂದು ಮಾಸ್ಟರ್ ರೂಪಿಸಿದ್ದಾರೆ. ಗಾಜಾಪಟ್ಟಿ ಪ್ರದೇಶವನ್ನು ಹಮಾಸ್ ಉಗ್ರರಿಂದ ಮುಕ್ತ ಮಾಡುವ ಹೊಣೆಯನ್ನು ಪಾಕಿಸ್ತಾನಕ್ಕೆ ನೀಡಲು ಮುಂದಾಗಿದ್ದಾರೆ.
ವಾಷಿಂಗ್ಟನ್: ಹಮಾಸ್ ಉಗ್ರರು ಮತ್ತು ಇಸ್ರೇಲ್ ನಡುವೆ ಕದನವಿರಾಮ ಏರ್ಪಡಿಸುವಲ್ಲಿ ಯಶಸ್ವಿಯಾಗಿದ್ದ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಇದೀಗ ಮತ್ತೊಂದು ಮಾಸ್ಟರ್ ರೂಪಿಸಿದ್ದಾರೆ. ಭವಿಷ್ಯದಲ್ಲಿ ಗಾಜಾಪಟ್ಟಿ ಪ್ರದೇಶವನ್ನು ಹಮಾಸ್ ಉಗ್ರರಿಂದ ಮುಕ್ತ ಮಾಡುವ ಹೊಣೆಯನ್ನು ಪಾಕಿಸ್ತಾನಕ್ಕೆ ನೀಡಲು ಮುಂದಾಗಿದ್ದಾರೆ.
ಈ ನಿಟ್ಟಿನಲ್ಲಿ ಅಮೆರಿಕದ ಗುಪ್ತಚರ ಸಂಸ್ಥೆ ಸಿಐಎ, ಇಸ್ರೇಲ್‌ನ ಗುಪ್ತಚರ ಸಂಸ್ಥೆ ಮೊಸಾದ್ ಮತ್ತು ಪಾಕಿಸ್ತಾನದ ಸೇನಾ ಮುಖ್ಯಸ್ಥ ಫೀಲ್ಡ್ ಮಾರ್ಷಲ್ ಆಸಿಂ ಮುನೀರ್ ಈಗಾಗಲೇ ಹಲವು ರಹಸ್ಯ ಸಭೆಗಳನ್ನು ನಡೆಸಿದ್ದಾರೆ. ಈ ಪ್ಲ್ಯಾನ್‌ನ ಭಾಗವಾಗಿ ಪಾಕ್ ತನ್ನ 20000 ಯೋಧರನ್ನು ಗಾಜಾದಲ್ಲಿ ನಿಯೋಜಿಸಲಿದೆ ಎಂದು ವರದಿಗಳು ತಿಳಸಿವೆ.
ಮಹತ್ವ ಏಕೆ?:
ಪಾಕಿಸ್ತಾನವು ಇಸ್ರೇಲ್ ದೇಶದ ಅಸ್ತಿತ್ವವನ್ನೇ ಈವರೆಗೆ ಒಪ್ಪಿಕೊಂಡಿಲ್ಲ. ಇಂಥ ಸ್ಥಿತಿಯಲ್ಲಿ ಇದೀಗ ಇಸ್ರೇಲ್ ಜೊತೆ ಪಾಕ್ ಒಪ್ಪಂದ ಮಾಡಿಕೊಂಡಿದೆ. ಅದು ಕೂಡಾ ಇಸ್ರೇಲ್‌ನ ವೈರಿಗಳಾದ ಹಮಾಸ್ ನಿರ್ನಾಮದ ಹೊಣೆಯನ್ನು ಮತ್ತೊಂದು ಮುಸ್ಲಿಂ ದೇಶವಾದ ಪಾಕಿಸ್ತಾನಕ್ಕೆ ನೀಡಲಾಗಿದೆ.
ಗಾಜಾದಲ್ಲಿ ಅಮೆರಿಕ ನೇತೃತ್ವದಲ್ಲಿ ಪುನರ್ ನಿರ್ಮಾಣ ಮತ್ತು ಸಾಂಸ್ಥಿಕ ಪುನರ್ ರಚನೆ ಕಾರ್ಯ ನಡೆಯಲಿದೆ. ಆ ಕೆಲಸ ಪೂರ್ಣಗೊಂಡ ಬಳಿಕ ಗಾಜಾವನ್ನು ಪ್ಯಾಲೆಸ್ತೀನ್ ವಶಕ್ಕೆ ಒಪ್ಪಿಸಲು ನಿರ್ಧರಿಸಲಾಗಿದೆ. ಅಲ್ಲಿವರೆಗೆ ಗಾಜಾದಲ್ಲಿ ಹಮಾಸ್ ಉಗ್ರರ ಉಪಟಳ ನಿಯಂತ್ರಣ ಮತ್ತು ಪಾಶ್ಚಿಮಾತ್ಯ ದೇಶಗಳ ಸೂಚನೆ ಮೇರೆಗೆ ಈ ಪ್ರದೇಶದಲ್ಲಿ ಸ್ಥಿರತೆ ಕಾಯ್ದುಕೊಳ್ಳುವ ಹಾಗೂ ಮಾನವೀಯ ನೆರವಿಗೆ ತೊಂದರೆಯಾಗದಂತೆ ನೋಡಿಕೊಳ್ಳುವ ಹೊಣೆಗಾರಿಕೆ ಪಾಕ್ ಸೇನೆಗೆ ಇರಲಿದೆ.
ಮೊಸಾದ್, ಸಿಐಎ ಮತ್ತು ಆಸಿಂ ಮುನೀರ್ ನಡುವೆ ನಡೆದ ಒಪ್ಪಂದದ ಪ್ರಕಾರ, ಪಾಕಿಸ್ತಾನ ಸೇನೆಯು ಇಂಡೋನೇಷ್ಯಾ ಮತ್ತು ಅಜರ್‌ಬೈಜಾನ್‌ನ ಸೇನೆಗಳ ಜತೆಗೆ ಗಾಜಾದಲ್ಲಿ ಅಂತಾರಾಷ್ಟ್ರೀಯ ಸ್ಥಿರತೆ ಪಡೆ(ಐಎಸ್‌ಎಫ್)ಯ ಭಾಗವಾಗಲಿದೆ.
ಪಾಕ್‌ಗೇನು ಲಾಭ?:
ಆರ್ಥಿಕ ಸಂಕಷ್ಟದಿಂದ ಹೊರಬರಲು ಒದ್ದಾಡುತ್ತಿರುವ ಪಾಕಿಸ್ತಾನ ಆರ್ಥಿಕ ಲಾಭಕ್ಕಾಗಿ ಅಮೆರಿಕದ ಈ ಪ್ರಸ್ತಾಪಕ್ಕೆ ಒಪ್ಪಿಗೆ ಸೂಚಿಸಿದೆ. ಗಾಜಾದಲ್ಲಿ ಸೇನೆ ನಿಯೋಜನೆಗಾಗಿ ಇಸ್ರೇಲ್ ಹಾಗೂ ಅಮೆರಿಕವು ಪಾಕಿಸ್ತಾನಕ್ಕೆ ಆರ್ಥಿಕ ನೆರವು ಅಂದರೆ ವಿಶ್ವಬ್ಯಾಂಕ್‌ನಿಂದ ಸಾಲ ಪಡೆಯಲು ಅನುಕೂಲ ಮಾಡಿಕೊಡಲಿದೆ. ಜತೆಗೆ, ಸಾಲ ಮರುಪಾವತಿ ಸಮಯದಲ್ಲಿ ವಿನಾಯ್ತಿ ನೀಡುವ ಹಾಗೂ ಗಲ್ಫ್‌ನ ಮಧ್ಯವರ್ತಿಗಳ ಮೂಲಕ ಹಣಕಾಸು ನೆರವು ಒದಗಿಸುವ ಕೆಲಸ ಮಾಡಲಿದೆ.
;Resize=(128,128))
;Resize=(128,128))