ಸಾರಾಂಶ
ಅಜ್ಮೇರ್: ಕಾಂಗ್ರೆಸ್ ಪಕ್ಷ ಚುನಾವಣೆಯಲ್ಲಿ ಗೆಲ್ಲಲು ಸಲುವಾಗ ಅಲ್ಲ ಬದಲಾಗಿ ಭ್ರಷ್ಟರನ್ನು ಉಳಿಸಲೆಂದೇ ತರಾತುರಿಯಲ್ಲಿ ರ್‍ಯಾಲಿಗಳನ್ನು ನಡೆಸುತ್ತಿದೆ ಎಂದು ಪ್ರಧಾನಿ ನರೇಂದ್ರ ಮೋದಿ ವಾಗ್ದಾಳಿ ನಡೆಸಿದರು.
ಶನಿವಾರ ಇಲ್ಲಿ ಬಿಜೆಪಿ ರ್‍ಯಾಲಿ ಉದ್ದೇಶಿಸಿ ಮಾತನಾಡಿದ ಮೋದಿ, ‘ಕಾಂಗ್ರೆಸ್ ಪಕ್ಷದ ಲೂಟಿ ಅಂಗಡಿ ಮುಚ್ಚಿರುವುದರಿಂದಲೇ ವಿರೋಧ ಪಕ್ಷ ಅಂತಕದಲ್ಲಿದೆ. ಕಾಂಗ್ರೆಸ್ ಪಕ್ಷ ಕುಟುಂಬ ರಾಜಕಾರಣದಿಂದ ಕೂಡಿದ್ದು, ಅದೊಂದು ಭ್ರಷ್ಟ ಪಕ್ಷವಾಗಿದೆ. ಯಾವೆಲ್ಲಾ ರಾಜ್ಯಗಳಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರದಲ್ಲಿದೆಯೋ ಅಲ್ಲಿ ಅಭಿವೃದ್ಧಿ ಕುಂಠತವಾಗಿದೆ. ಬಡವರು, ದೀನ ದಲಿತರು, ಯುವಕರ ಬಗ್ಗೆ ಎಂದಿಗೂ ಚಿಂತಿಸದ ಕಾಂಗ್ರೆಸ್ ಜನರಿಂದ ಅದೆಷ್ಟೋ ಹಣವನ್ನು ಲೂಟಿ ಮಾಡಿದೆ’ ಎಂದು ಟೀಕಿಸಿದರು.
ಇದೇ ವೇಳೆ ತಾವು ಮೂರನೇ ಬಾರಿ ಪ್ರಧಾನಿಯಾಗುವ ವಿಶ್ವಾಸ ವ್ಯಕ್ತಪಡಿಸಿದ ಮೋದಿ, ‘ಮೊದಲ 100 ದಿನನಗಳಲ್ಲಿ ಭ್ರಷ್ಟಾಚಾರದ ವಿರುದ್ಧ ಹೋರಾಡುತ್ತೇವೆ. ಅದರಲ್ಲಿ ಯಾವೊಬ್ಬ ಭ್ರಷ್ಟರನ್ನು ಬಿಡುವುದಿಲ್ಲ. ಭ್ರಷ್ಟರಿಗೆಲ್ಲರಿಗೂ ಶಿಕ್ಷೆ ಕೊಡಿಸುವುದೇ ನಮ್ಮ ಗುರಿ’ ಎಂದರು.