ಸಾರಾಂಶ
ಲೋಕಸಭಾ ಚುನಾವಣೆ ಹಿನ್ನೆಲೆ ಸಿಪಿಐ ಪಕ್ಷ ಶನಿವಾರ ತನ್ನ ಪ್ರಣಾಳಿಕೆಯನ್ನು ಇಲ್ಲಿ ಬಿಡುಗಡೆ ಮಾಡಿದೆ. ಪಕ್ಷ ಅಧಿಕಾರಕ್ಕೆ ಬಂದರೆ ರಾಜ್ಯಪಾಲ ಹುದ್ದೆಯನ್ನೇ ರದ್ದು, ಸಿಎಎ ಕಾಯ್ದೆ ರದ್ದು, ಎಸ್ಸಿ, ಎಸ್ಟಿಗೆ ಇರುವ ಶೇ.50ರ ಮೀಸಲು ಮಿತಿ ರದ್ದು ಸೇರಿದಂತೆ ಹಲವು ಭರವಸೆಗಳನ್ನು ನೀಡಿದೆ.
ನವದೆಹಲಿ : ಲೋಕಸಭಾ ಚುನಾವಣೆ ಹಿನ್ನೆಲೆ ಸಿಪಿಐ ಪಕ್ಷ ಶನಿವಾರ ತನ್ನ ಪ್ರಣಾಳಿಕೆಯನ್ನು ಇಲ್ಲಿ ಬಿಡುಗಡೆ ಮಾಡಿದೆ. ಪಕ್ಷ ಅಧಿಕಾರಕ್ಕೆ ಬಂದರೆ ರಾಜ್ಯಪಾಲ ಹುದ್ದೆಯನ್ನೇ ರದ್ದು, ಸಿಎಎ ಕಾಯ್ದೆ ರದ್ದು, ಎಸ್ಸಿ, ಎಸ್ಟಿಗೆ ಇರುವ ಶೇ.50ರ ಮೀಸಲು ಮಿತಿ ರದ್ದು ಸೇರಿದಂತೆ ಹಲವು ಭರವಸೆಗಳನ್ನು ನೀಡಿದೆ.ಪ್ರಣಾಳಿಕೆಯ ಮುಖ್ಯಾಂಶಗಳು
- ಸಿಎಎ ಕಾಯ್ದೆ ರದ್ದು/ ರಾಜ್ಯಪಾಲರ ಕಚೇರಿ ರದ್ದು.
- ಎಸ್ಸಿ, ಎಸ್ಟಿ ಮತ್ತು ಒಬಿಸಿ ಶೇ.50 ಮೀಸಲಾತಿ ರದ್ದತಿ.
- ನರೇಗಾ ದಿನಗೂಲಿ 700ಕ್ಕೆ ಹೆಚ್ಚಳ.
- ಅಸಮಾನತೆ ತೊಡೆದು ಹಾಕಲು ಕ್ರಮ.
- ಶ್ರೀಮಂತರಿಗೆ ಹೆಚ್ಚು ತೆರಿಗೆ/ ಖಾಸಗಿ ವಲಯದಲ್ಲೂ ಮೀಸಲು
- ಸಿಬಿಐ ಮತ್ತು ಇ.ಡಿ ಸಂಸತ್ತಿನ ಕಣ್ಗಾವಲು ವ್ಯಾಪ್ತಿಗೆ