ನಟಿ ದೀಪಿಕಾ ಪಡುಕೋಣೆ ಗರ್ಭಿಣಿ: ಸೆಪ್ಟೆಂಬರ್‌ಗೆ ಹೆರಿಗೆ

| Published : Mar 01 2024, 02:19 AM IST / Updated: Mar 01 2024, 08:13 AM IST

ನಟಿ ದೀಪಿಕಾ ಪಡುಕೋಣೆ ಗರ್ಭಿಣಿ: ಸೆಪ್ಟೆಂಬರ್‌ಗೆ ಹೆರಿಗೆ
Share this Article
  • FB
  • TW
  • Linkdin
  • Email

ಸಾರಾಂಶ

ದೀಪಿಕಾ ಪಡುಕೋಣೆ ಗರ್ಭಿಣಿಯಾಗಿದ್ದು, ಸೆಪ್ಟೆಂಬರ್‌ನಲ್ಲಿ ಹೆರಿಗೆಯಾಗುವುದಾಗಿ ಬಾಲಿವುಡ್‌ ತಾರಾ ದಂಪತಿಯಾಗಿರುವ ಡೀಪ್‌ವೀರ್‌ ಸಾಮಾಜಿಕ ಜಾಲತಾಣದಲ್ಲಿ ಪ್ರಕಟಿಸಿದ್ದಾರೆ.

ಮುಂಬೈ: ಬಾಲಿವುಡ್‌ನ ತಾರಾ ಜೋಡಿ ದೀಪಿಕಾ ಪಡುಕೋಣೆ ಮತ್ತು ರಣವೀರ್ ಸಿಂಗ್‌ ದಂಪತಿ ಪೋಷಕರಾಗುತ್ತಿರುವುದಾಗಿ ಅಧಿಕೃತವಾಗಿ ಘೋಷಿಸಿದ್ದಾರೆ. ದೀಪಿಕಾ ಗರ್ಭವತಿಯಾಗಿರುವ ಬಗ್ಗೆ ಹಲವು ತಿಂಗಳು ವದಂತಿ ಹರಿದಾಡಿದ ಬಳಿಕ ಈಗ ಅಧಿಕೃತ ಮಾಹಿತಿ ಹೊರಬಿದ್ದಿದೆ.

ರಣವೀರ್‌ ಹಾಗೂ ದೀಪಿಕಾ ತಮ್ಮ ಇನ್‌ಸ್ಟಾಗ್ರಾಮ್‌ ಖಾತೆಯಲ್ಲಿ ಗುರುವಾರ ಪೋಸ್ಟ್‌ವೊಂದರ ಮೂಲಕ ಸಿಹಿ ಸುದ್ದಿ ಹಂಚಿಕೊಂಡಿದ್ದಾರೆ. ಸರಳ ಪೋಸ್ಟ್‌ನಲ್ಲಿ ಮಗುವಿನ ಆಟಿಕೆ ಸಾಮಗ್ರಿಗಳ ಹಂಚಿಕೊಂಡಿರುವ ದಂಪತಿ ಈ ವರ್ಷದ ಸೆಪ್ಟೆಂಬರ್‌ ವೇಳೆಗೆ ಮಗುವಿನ ನಿರೀಕ್ಷೆ ಇರುವುದಾಗಿ ಹೇಳಿದ್ದಾರೆ.

ಈ ನಡುವೆ, ದೀಪಿಕಾ ಸದ್ಯದಲ್ಲೇ ಸಿಹಿ ಸುದ್ದಿ ನೀಡುವುದಾಗಿ ಪೋಸ್ಟ್‌ನಲ್ಲಿ ಹೇಳಿದ್ದಾರೆ. ಅಭಿಮಾನಿಗಳು ಇನ್‌ಸ್ಟಾದಲ್ಲಿ ಶುಭ ಕೋರಿದ್ದಾರೆ.