ಗಣಿ ಹಗರಣ: ಸಿಬಿಐ ವಿಚಾರಣೆಗೆ ಅಖಿಲೇಶ್‌ ಗೈರು

| Published : Mar 01 2024, 02:18 AM IST

ಸಾರಾಂಶ

ಸಿಬಿಐಗೆ ಪತ್ರ ಬರೆದು ಕಾರಣ ತಿಳಿಸಿರುವ ಅಖಿಲೇಶ್‌ ಯಾದವ್‌ ಗಣಿ ಹಗರಣದಲ್ಲಿ ತಾವು ವಿಚಾರಣೆಗೆ ಹಾಜರಾಗುವುದಿಲ್ಲ ಎಂದು ತಿಳಿಸಿದ್ದಾರೆ.

ಲಖನೌ: ಸಮಾಜವಾದಿ ಪಕ್ಷದ ನಾಯಕ ಅಖಿಲೇಶ್‌ ಯಾದವ್‌ ಅವರು ಗುರುವಾರ ಕೇಂದ್ರೀಯ ತನಿಖಾ ದಳ(ಸಿಬಿಐ) ಕರೆದಿದ್ದ ವಿಚಾರಣಾ ಸಮನ್ಸ್‌ಗೆ ಗೈರಾಗಿದ್ದಾರೆ. ಅವರು ಸಿಬಿಐಗೆ ಪತ್ರ ಬರೆದಿದ್ದು, ಕಳೆದ 5 ವರ್ಷ ಸುಮ್ಮನಿದ್ದು ಈಗೇಕೆ ವಿಚಾರಣೆಗೆ ಏಕಾಏಕಿ ಬುಲಾವ್ ನೀಡಲಾಗಿದೆ ಎಂದು ಪ್ರಶ್ನಿಸಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅಖಿಲೇಶ್‌ ಯಾದವ್‌ ಅವರು 2012-16ರ ಅವಧಿಯಲ್ಲಿ ಉತ್ತರ ಪ್ರದೇಶದ ಮುಖ್ಯಮಂತ್ರಿಯಾಗಿದ್ದ ವೇಳೆ ಗಣಿಗಾರಿಕೆಗೆ ಸಂಬಂಧಿಸಿದ ಇ-ಟೆಂಡರ್‌ ಪ್ರಕ್ರಿಯೆಯಲ್ಲಿ ಅಕ್ರಮ ನಡೆದ ಆರೋಪ ಕೇಳಿಬಂದಿತ್ತು. ಈ ಕುರಿತು ಸಾಕ್ಷಿಯಾಗಿ ವಿಚಾರಣೆಗೆ ಬರುವಂತೆ ಸಿಬಿಐ ಅವರಿಗೆ ನೋಟಿಸ್‌ ನೀಡಿತ್ತು.