ಸಾರಾಂಶ
ನವದೆಹಲಿ: ವಿದ್ಯಾರ್ಥಿಗಳಲ್ಲಿನ ಪರೀಕ್ಷಾ ಭಯವನ್ನು ಹೋಗಲಾಡಿಸಲು ಪ್ರಧಾನಿ ನರೇಂದ್ರ ಮೋದಿ ನಡೆಸಿಕೊಂಡು ಬರುತ್ತಿರುವ ವಾರ್ಷಿಕ ಪರೀಕ್ಷಾ ಪೇ ಚರ್ಚಾ ಕಾರ್ಯಕ್ರಮ ಫೆ.10ರಂದು ನವದೆಹಲಿಯಲ್ಲಿ ನಡೆಯಲಿದೆ.
ಈ ಕುರಿತು ಟ್ವೀಟ್ ಮಾಡಿರುವ ಸ್ವತಃ ಪ್ರಧಾನಿ ಮೋದಿ, ‘ಪರೀಕ್ಷಾ ಪೇ ಚರ್ಚಾ ಮರಳಿದೆ ಮತ್ತು ಅದರಲ್ಲೂ ಈ ಬಾರಿ ಇನ್ನಷ್ಟು ಹೊಸತನ ಮತ್ತು ಹೊಸ ಮಾದರಿಯೊಂದಿಗೆ ಬಂದಿದೆ.
ಎಲ್ಲಾ ಎಕ್ಸಾಂ ವಾರಿಯರ್‌ಗಳಿಗೆ, ಪೋಷಕರಿಗೆ ಮತ್ತು ಶಿಕ್ಷಕರಿಗೆ ಪರೀಕ್ಷಾ ಪೇ ಚರ್ಚಾ 2025 ವೀಕ್ಷಿಸುವಂತೆ ಮನವಿ ಮಾಡುತ್ತೇನೆ’ ಎಂದು ಹೇಳಿದ್ದಾರೆ.
8ನೇ ಆವೃತ್ತಿಯ ಈ ಕಾರ್ಯಕ್ರಮದಲ್ಲಿ ಈ ಬಾರಿ ಪ್ರಧಾನಿ ಮೋದಿ ಜೊತೆಗೆ ನಟಿ ದೀಪಿಕಾ ಪಡುಕೋಣೆ, ಬಾಕ್ಸರ್ ಮೇರಿ ಕೋಮ್, ಅಧ್ಯಾತ್ಮ ಗುರು ಸದ್ಗುರು, ಪ್ಯಾರಾಲಿಂಪಿಕ್ಸ್ ಚಿನ್ನದ ಪದಕ ಪುರಸ್ಕೃತೆ ಅವನಿ ಲೇಖರ, ಆಹಾರ ತಜ್ಞೆ ರುತುಜಾ ದಿವೇಕರ್, ಸೋನಾಲಿ ಸಭರ್‌ವಾಲ್, ಆರೋಗ್ಯ ತಜ್ಞೆ ಫುಡ್ ಫರ್ಮೇರ್, ಯುಟ್ಯೂಬರ್ ಟೆಕ್ನಿಕಲ್ ಗುರೂಜಿ, ರಾಧಿಕಾ ಗುಪ್ತಾ, ನಟರಾದ ಭೂಮಿ ಪೆಡ್ನೇಕರ್, ವಿಕ್ರಾಂತ್ ಮಸ್ಸಿ, ಭಾಗಿಯಾಗಲಿದ್ದಾರೆ.
ಈ ಮೂವರೂ ಗಣ್ಯರು ತಮ್ಮ ಜೀವನದ ಕಥೆಯನ್ನು ವಿದ್ಯಾರ್ಥಿಗಳೊಂದಿಗೆ ಹಂಚಿಕೊಂಡು ಅವರಲ್ಲಿ ಆತ್ಮ ವಿಶ್ವಾಸ ತುಂಬುವ ಕೆಲಸ ಮಾಡಲಿದ್ದಾರೆ.ಈ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳೊಂದಿಗೆ ಪ್ರಧಾನಿ ಮೋದಿ ಸಂವಾದ ನಡೆಸಲಿದ್ದಾರೆ, ವಿದ್ಯಾರ್ಥಿಗಳಿಂದ ಪ್ರಶ್ನೆ ಸ್ವೀಕರಿಸಿ ಅದಕ್ಕೆ ಉತ್ತರ ನೀಡಲಿದ್ದಾರೆ. ಜೊತೆಗೆ ಅವರೊಂದಿಗೆ ತಮ್ಮ ಜೀವನದ ಅನುಭವ ಹಂಚಿಕೊಳ್ಳಲಿದ್ದಾರೆ.