95 ಸಲ ಅರೆಸ್ಟ್ ಆಗಿದ್ದ ಖತರ್ನಾಕ್ ಕಳ್ಳ ಮಿತ್ತಲ್‌ ನಿಧನ

| Published : Apr 22 2024, 02:07 AM IST / Updated: Apr 22 2024, 05:20 AM IST

ಸಾರಾಂಶ

ನ್ಯಾಯಾಧೀಶರಂತೆ ನಟನೆ ಮಾಡಿ, ಜೈಲಿನಲ್ಲಿ ಖೈದಿಗಳನ್ನು ಬಿಡುಗಡೆ ಮಾಡಿದ್ದ ಖತರ್ನಾಕ್ ಕಳ್ಳ 85 ವರ್ಷದ ಧನಿ ರಾಮ್ ಮಿತ್ತಲ್ ಹೃದಯಘಾತದಿಂದ ನಿಧನ ಹೊಂದಿದ್ದಾನೆ

ನವದೆಹಲಿ: ನ್ಯಾಯಾಧೀಶರಂತೆ ನಟನೆ ಮಾಡಿ, ಜೈಲಿನಲ್ಲಿ ಖೈದಿಗಳನ್ನು ಬಿಡುಗಡೆ ಮಾಡಿದ್ದ ಖತರ್ನಾಕ್ ಕಳ್ಳ 85 ವರ್ಷದ ಧನಿ ರಾಮ್ ಮಿತ್ತಲ್ ಹೃದಯಘಾತದಿಂದ ನಿಧನ ಹೊಂದಿದ್ದಾನೆ.

ಈತ ಜಡ್ಜ್ ರಂತೆ ನಟಿಸಿ ಸಿಕ್ಕಿ ಬಿದ್ದಿದ್ದು ಮಾತ್ರವಲ್ಲದೇ ತನ್ನ ವೈಯುಕ್ತಿಕ ಖುಷಿಗಾಗಿ ಬೇರೆ ಬೇರೆ ಫ್ಯಾನ್ಸಿ ನಂಬರ್ ಗಳನ್ನು ಹೊಂದಿರುವ ಕಾರುಗಳನ್ನು ಕಳ್ಳತನ ಮಾಡಿ ಕುಖ್ಯಾತಿ ಗಳಿಸಿದ್ದ. ಹರಿಯಾಣ, ಚಂಡೀಗಢ , ಪಂಜಾಬ್, ರಾಜಸ್ಥಾನ ಭಾಗಗಳಲ್ಲಿ ಮಿತ್ತಲ್ ಹೆಸರಲ್ಲಿ 150 ಕ್ಕೂ ಕಳ್ಳತನ ಪ್ರಕರಣ ದಾಖಲಾಗಿತ್ತು. ಅಲ್ಲದೇ 90 ಕ್ಕೂ ಹೆಚ್ಚು ಸಲ ಆತನನ್ನು ಕಂಬಿ ಹಿಂದೆ ಹಾಕಲಾಗಿತ್ತು.

1000 ಕ್ಕೂ ಹೆಚ್ಚು ವಂಚನೆ , ಕಳ್ಳತನ ಪ್ರಕರಣಗಳಲ್ಲಿ ಭಾಗಿಯಾಗಿದ್ದ ಮಿತ್ತಲ್ 1964 ರಲ್ಲಿ ಮೊದಲ ಸಲ ವಂಚನೆ ಪ್ರಕರಣಗಳಲ್ಲಿ ಭಾಗಿಯಾಗಿದ್ದ. ತನ್ನ ವೈಯುಕ್ತಿಕ ಬಳಕೆಗಾಗಿ ಹರಿಯಾಣದ ಝಜ್ಜರ್ ನ್ಯಾಯಾಲಯದ ಪಾರ್ಕಿಂಗ್ ಏರಿಯಾದಲ್ಲಿ ಕಾರನ್ನು ಕಳ್ಳತನ ಮಾಡಿ ಸುದ್ದಿಯಾಗಿದ್ದ. 2017 ರಲ್ಲಿ ತನ್ನ 77 ನೇ ವಯಸ್ಸಿನಲ್ಲಿ ರಾಣಿ ಭಾಗ್ ನಲ್ಲಿ ಕಾರು ಕಳ್ಳತನ ಮಾಡಿದ್ದಕ್ಕೆ ಅರೆಸ್ಟ್ ಮಾಡಲಾಗಿತ್ತು . ಅದು ಆತ 95 ನೇ ಸಲ ಅರೆಸ್ಟ್ ಆಗಿದ್ದ ದಾಖಲೆಯಾಗಿತ್ತು. ವಿಶೇಷವೆಂದ್ರೆ ಹಲವು ಅಪರಾಧ ಪ್ರಕರಣಗಳಲ್ಲಿ ಭಾಗಿಯಾಗಿದ್ದ ಈತ ಕಾನೂನು ಪದವಿ ಪಡೆದಿದ್ದ.