4 ವರ್ಷದ ಡಿಗ್ರಿ ಪಾಸ್‌ ಆಗಿದ್ರೆ ಪಿಎಚ್‌ಡಿಗೆ ನೇರ ಅವಕಾಶ

| Published : Apr 22 2024, 02:04 AM IST / Updated: Apr 22 2024, 05:22 AM IST

4 ವರ್ಷದ ಡಿಗ್ರಿ ಪಾಸ್‌ ಆಗಿದ್ರೆ ಪಿಎಚ್‌ಡಿಗೆ ನೇರ ಅವಕಾಶ
Share this Article
  • FB
  • TW
  • Linkdin
  • Email

ಸಾರಾಂಶ

ರಾಷ್ಟ್ರೀಯ ಶಿಕ್ಷಣ ನೀತಿ 2020 ಅನ್ವಯ ನಾಲ್ಕು ವರ್ಷದ ಪದವಿಯನ್ನು ಶೇ.75 ಅಂಕಗಳಿಂದ ಪೂರೈಸಿದವರು ನೇರವಾಗಿ ಪಿಎಚ್‌ಡಿ ಮಾಡಬಹುದು. ಇಲ್ಲವೇ ನೆಟ್‌ ಪರೀಕ್ಷೆ ಎದುರಿಸಬಹುದು ಎಂದು ವಿಶ್ವವಿದ್ಯಾಲಯ ಧನಸಹಾಯ ಆಯೋಗ (ಯುಜಿಸಿ) ಘೋಷಿಸಿದೆ

ನವದೆಹಲಿ: ರಾಷ್ಟ್ರೀಯ ಶಿಕ್ಷಣ ನೀತಿ 2020 ಅನ್ವಯ ನಾಲ್ಕು ವರ್ಷದ ಪದವಿಯನ್ನು ಶೇ.75 ಅಂಕಗಳಿಂದ ಪೂರೈಸಿದವರು ನೇರವಾಗಿ ಪಿಎಚ್‌ಡಿ ಮಾಡಬಹುದು. ಇಲ್ಲವೇ ನೆಟ್‌ ಪರೀಕ್ಷೆ ಎದುರಿಸಬಹುದು ಎಂದು ವಿಶ್ವವಿದ್ಯಾಲಯ ಧನಸಹಾಯ ಆಯೋಗ (ಯುಜಿಸಿ) ಘೋಷಿಸಿದೆ.

ನಾಲ್ಕು ವರ್ಷದ ಪದವಿಯಲ್ಲಿ ಒಟ್ಟಾರೆ ಶೇ.75 ಅಂಕಗಳನ್ನು ಪಡೆದಿದ್ದಲ್ಲಿ ಪಿಎಚ್‌ಡಿ ಮಾಡಬಹುದು ಹಾಗೂ ರಾಷ್ಟ್ರೀಯ ಅರ್ಹತಾ ಪರೀಕ್ಷೆ (ನೆಟ್‌) ಬರೆಯಲು ವಿದ್ಯಾರ್ಥಿಗೆ ಅರ್ಹತೆ ಇರುತ್ತದೆ. ಅವರು ಯಾವುದೇ ವಿಷಯದಲ್ಲಿ ಬೇಕಾದರೂ ಪಿಎಚ್‌ಡಿ ಮಾಡಬಹುದು. ಅಂಕಗಳಲ್ಲಿ ಶೇ.5ರಷ್ಟು ಪರಿಶಿಷ್ಟ ಜಾತಿ, ವರ್ಗ, ಮೇಲ್ಪದರಕ್ಕೆ ಸೇರಿರದ ಒಬಿಸಿಗಳು, ಆರ್ಥಿಕವಾಗಿ ಹಿಂದುಳಿದವರು ಮತ್ತು ಅಂಗವಿಕಲರಿಗೆ ವಿನಾಯಿತಿಯನ್ನು ವಿಶ್ವವಿದ್ಯಾನಿಲಯಗಳು ನೀಡಬಹುದಾಗಿದೆ ಎಂದು ಯುಜಿಸಿ ಅಧ್ಯಕ್ಷ ಜಗದೀಶ್‌ ಕುಮಾರ್‌ ತಿಳಿಸಿದ್ದಾರೆ.

ಇದುವರೆಗೂ ಪಿಎಚ್‌ಡಿ ಪ್ರವೇಶ ಪರೀಕ್ಷೆ ಹಾಗೂ ನೆಟ್‌ ಪರೀಕ್ಷೆಗೆ ಸ್ನಾತಕೋತ್ತರ ಪದವಿಯನ್ನು ಒಟ್ಟಾರೆ ಶೇ.55 ಅಂಕಗಳೊಂದಿಗೆ ತೇರ್ಗಡೆಯಾಗಬೇಕಿರುವುದು ಕಡ್ಡಾಯವಾಗಿತ್ತು.