ರಾಜೀವ್ ವಿರುದ್ಧ ಸುಳ್ಳು ಸುದ್ದಿ: ತರೂರ್ ವಿರುದ್ಧ ಕೇಸ್

| Published : Apr 22 2024, 02:03 AM IST / Updated: Apr 22 2024, 05:23 AM IST

ರಾಜೀವ್ ವಿರುದ್ಧ ಸುಳ್ಳು ಸುದ್ದಿ: ತರೂರ್ ವಿರುದ್ಧ ಕೇಸ್
Share this Article
  • FB
  • TW
  • Linkdin
  • Email

ಸಾರಾಂಶ

ತಿರುವನಂತಪುರ ಕ್ಷೇತ್ರದಲ್ಲಿ ಚುನಾವಣಾ ಸ್ಪರ್ಧಿಗಳ ನಡುವಿನ ಸಮರ ತಾರಕಕ್ಕೇರಿದ್ದು, ರಾಜೀವ್‌ ಚಂದ್ರಶೇಖರ್‌ ಶಶಿ ತರೂರ್‌ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.

ತಿರುವನಂತಪುರಂ: ತಿರುವನಂತಪುರ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ರಾಜೀವ್ ಚಂದ್ರಶೇಖರ್ ವಿರುದ್ಧ ಸುಳ್ಳು ಪ್ರಚಾರ ನಡೆಸಿದ ಆರೋಪದ ಮೇಲೆ ಕಾಂಗ್ರೆಸ್ ಅಭ್ಯರ್ಥಿ ಶಶಿ ತರೂರ್ ವಿರುದ್ಧ ಪ್ರಕರಣ ದಾಖಲಾಗಿದೆ.

ತರೂರ್ ವಿರುದ್ಧ ಬಿಜೆಪಿ ನಾಯಕ ಜೆ. ಆರ್ . ಪದ್ಮಕುಮಾರ್ ಎನ್ನುವವರು ಪ್ರಕರಣ ದಾಖಲಿಸಿದ್ದಾರೆ.

ರಾಜೀವ್ ಕರಾವಳಿ ಭಾಗದ ಮತದಾರರ ಮೇಲೆ ಪ್ರಭಾವ ಬೀರಿದ್ದಾರೆ ಎಂದು ಟೀವಿ ಕಾರ್ಯಕ್ರಮವೊಂದರಲ್ಲಿ ಶಶಿ ತರೂರ್‌ ಆಪಾದಿಸಿದ್ದಲ್ಲದೆ, ಈ ವೇಳೆ ಅವಹೇಳನಕಾರಿ ಪದ ಪ್ರಯೋಗಿಸಿದ್ದಾರೆಂದು ಆರೋಪಿಸಲಾಗಿದೆ.

ಏಪ್ರಿಲ್ 15 ರಂದೇ ಈ ಪ್ರಕರಣ ದಾಖಲಾಗಿದ್ದು ಸೈಬರ್ ಪೊಲೀಸರು ಭಾನುವಾರ ಈ ಕುರಿತು ಮಾಹಿತಿ ಬಿಡುಗಡೆ ಮಾಡಿದ್ದಾರೆ.