ಪಕ್ಷಗಳಿಗೆ ಭರವಸೆ ನೀಡುವ, ಮತದಾರರಿಗೆ ಈಡೇರಿಕೆ ರೀತಿ ತಿಳಿವ ಹಕ್ಕಿದೆ: ಚು. ಆಯೋಗ

| Published : Feb 25 2024, 01:46 AM IST / Updated: Feb 25 2024, 11:34 AM IST

ಪಕ್ಷಗಳಿಗೆ ಭರವಸೆ ನೀಡುವ, ಮತದಾರರಿಗೆ ಈಡೇರಿಕೆ ರೀತಿ ತಿಳಿವ ಹಕ್ಕಿದೆ: ಚು. ಆಯೋಗ
Share this Article
  • FB
  • TW
  • Linkdin
  • Email

ಸಾರಾಂಶ

ಜನರಿಗೆ ರಾಜಕೀಯ ಪಕ್ಷಗಳು ಘೋಷಿಸುವ ಭರವಸೆಗಳಿಗೆ ಸಂಪನ್ಮೂಲಹೊಂದಿಸುವ ಕುರಿತು ಹಕ್ಕಿದೆ. ಆದರೆ ಈ ವಿಷಯ ನ್ಯಾಯಾಲಯದಲ್ಲಿದೆ ಎಂದು ಮುಖ್ಯ ಚುನಾವಣಾ ಆಯುಕ್ತ ರಾಜೀವ್‌ ತಿಳಿಸಿದ್ದಾರೆ.

ಪಿಟಿಐ ಚೆನ್ನೈ

ಚುನಾವಣೆ ಸಂದರ್ಭದಲ್ಲಿ ಪ್ರಣಾಳಿಕೆ ಮೂಲಕ ಮತದಾರರಿಗೆ ಭರವಸೆಗಳನ್ನು ನೀಡುವ ಹಕ್ಕು ರಾಜಕೀಯ ಪಕ್ಷಗಳಿಗೆ ಇದೆ. 

ಅದೇ ರೀತಿ ಆ ಭರವಸೆಗಳು ನೈಜವೇ ಹಾಗೂ ಅವನ್ನು ಈಡೇರಿಸಲು ಯಾವ ರೀತಿ ಸಂಪನ್ಮೂಲ ಹೊಂದಿಸಲಾಗುತ್ತದೆ ಎಂಬುದನ್ನು ತಿಳಿಯುವ ಹಕ್ಕು ಕೂಡ ಮತದಾರರಿಗೆ ಇದೆ ಎಂದು ಮುಖ್ಯ ಚುನಾವಣಾ ಆಯುಕ್ತ ರಾಜೀವ್‌ ಕುಮಾರ್‌ ತಿಳಿಸಿದ್ದಾರೆ. ಆದರೆ ಈ ವಿಚಾರ ಸದ್ಯ ಕೋರ್ಟ್‌ನಲ್ಲಿದೆ ಎಂದೂ ಹೇಳಿದ್ದಾರೆ.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಚುನಾವಣೆ ಭರವಸೆಗಳನ್ನು ಘೋಷಣೆ ಮಾಡಲು ರಾಜಕೀಯ ಪಕ್ಷಗಳಿಗಾಗಿ ಆಯೋಗ ಅರ್ಜಿಯೊಂದನ್ನು ಸಿದ್ಧಪಡಿಸಿದೆ. 

ಆದರೆ ಆ ವಿಷಯವೂ ಕೋರ್ಟ್‌ನಲ್ಲಿರುವ ವಿಚಾರಕ್ಕೆ ಸಂಬಂಧಿಸಿದ್ದಾಗಿದೆ ಎಂದು ತಿಳಿಸಿದರು.ಚುನಾವಣೆ ಸಂದರ್ಭದಲ್ಲಿ ಕಟ್ಟೆಚ್ಚರದಿಂದ ಇರುವಂತೆ ಹಾಗೂ ನಗದು- ಉಡುಗೊರೆಗಳ ವಿತರಣೆ ತಡೆಯುವಂತೆ ಕಾನೂನು ಅನುಪಾಲನಾ ಸಂಸ್ಥೆಗಳಿಗೆ ನಿರ್ದೇಶನ ನೀಡಲಾಗಿದೆ. 

ಆನ್‌ಲೈನ್‌ ವಹಿವಾಟುಗಳ ಮೇಲೆ ನಿಗಾ ಇಡುವಂತೆ ನ್ಯಾಷನಲ್‌ ಪೇಮೆಂಟ್ಸ್‌ ಕಾರ್ಪೋರೆಷನ್‌ ಆಫ್‌ ಇಂಡಿಯಾಗೆ ಹೊಣೆ ವಹಿಸಲಾಗಿದೆ ಎಂದು ಹೇಳಿದರು.