ಕೆರೆಗೆ ಟ್ರ್ಯಾಕ್ಟರ್‌ ಉರುಳಿ ಏಳು ಮಕ್ಕಳು ಸೇರಿ 24 ಜನ ಸಾವು

| Published : Feb 25 2024, 01:46 AM IST / Updated: Feb 25 2024, 11:36 AM IST

ಕೆರೆಗೆ ಟ್ರ್ಯಾಕ್ಟರ್‌ ಉರುಳಿ ಏಳು ಮಕ್ಕಳು ಸೇರಿ 24 ಜನ ಸಾವು
Share this Article
  • FB
  • TW
  • Linkdin
  • Email

ಸಾರಾಂಶ

ಕೆರೆಯೊಂದಕ್ಕೆ ಟ್ರ್ಯಾಕ್ಟರ್ನ ಟ್ರಾಲಿ ಉರುಳಿ ಬಿದ್ದ ಪರಿಣಾಮ 20ಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿದ ಭೀಕರ ಘಟನೆ ಉತ್ತರಪ್ರದೇಶದ ಕಸಗಂಜ್‌ನಲ್ಲಿ ನಡೆದಿದೆ. 

ಕಸ್‌ಗಂಜ್‌: ಇನ್ನೊದು ವಾಹನವನ್ನು ಓವರ್‌ಟೇಕ್‌ ಮಾಡುವ ಭರದಲ್ಲಿ ಚಾಲಕನ ನಿಯಂತ್ರಣ ತಪ್ಪಿದ ಟ್ರ್ಯಾಕ್ಟರ್‌ ಟ್ರಾಲಿ ಕೆರೆಗೆ ಮುಗುಚಿ ಬಿದ್ದು 7 ಮಕ್ಕಳು ಸೇರಿದಂತೆ 24 ಮಂದಿ ಸಾವನ್ನಪ್ಪಿದ ದಾರುಣ ಘಟನೆ ಉತ್ತರಪ್ರದೇಶದ ಕಸ್‌ಗಂಜ್‌ ಜಿಲ್ಲೆಯ ಪಟಿಯಾಲಿ ದರಿಯಾಗಂಜ್‌ ರಸ್ತೆಯಲ್ಲಿ ನಡೆದಿದೆ.

ಈ ದುರ್ಘಟನೆಯಲ್ಲಿ 15-20ಕ್ಕೂ ಹೆಚ್ಚು ಮಂದಿಗೆ ತೀವ್ರ ಗಾಯಗಳಾಗಿದ್ದು ಎಲ್ಲರನ್ನೂ ಸಮೀಪದ ಆಸ್ಪತ್ರೆಯೊಂದಕ್ಕೆ ಸೇರಿಸಲಾಗಿದೆ. 

ಘಟನೆಯ ಕುರಿತು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌ ಸಂತಾಪ ವ್ಯಕ್ತಪಡಿಸಿದ್ದು, ಮೃತರ ಕುಟುಂಬಕ್ಕೆ ತಲಾ 2 ಲಕ್ಷ ರು. ಹಾಗೂ ಗಾಯಾಳುಗಳಿಗೆ ತಲಾ 50 ಸಾವಿರ ರು. ಪರಿಹಾರ ಘೋಷಿಸಿದ್ದಾರೆ. 

ಮಾಘಮಾಸದ ಹುಣ್ಣಿಮೆ ಪ್ರಯುಕ್ತ ಪವಿತ್ರ ಗಂಗಾ ನದಿಯಲ್ಲಿ ಸ್ನಾನ ಮಾಡಲು ತೆರಳುತ್ತಿದ್ದಾಗ ಈ ಘಟನೆ ನಡೆದಿದೆ ಎಂಬುದಾಗಿ ಪೊಲೀಸರು ತಿಳಿಸಿದ್ದಾರೆ.