ಸಾರಾಂಶ
ನವದೆಹಲಿ: 2024-25ನೇ ಸಾಲಿನ ಏಪ್ರಿಲ್‌ನಿಂದ ಜೂನ್‌ವರೆಗಿನ ಜಿಡಿಪಿ ಬೆಳವಣಿಗೆ ದರ ಶೇ.6.7ಕ್ಕೆ ಕುಸಿತ ಕಂಡಿದೆ. ಇದು 15 ತಿಂಗಳ ಕನಿಷ್ಠವಾಗಿದೆ. ಆದರೆ ಚೀನಾ ಈ ಅವಧಿಯಲ್ಲಿ ಶೇ.4.7ರಷ್ಟು ಪ್ರಗತಿ ಕಂಡಿದ್ದು, ಭಾರತದ ಜಿಡಿಪಿ ಅದಕ್ಕಿಂತ ಹೆಚ್ಚಿದೆ.
2023-24 ಏಪ್ರಿಲ್-ಜೂನ್ ಅವಧಿಯಲ್ಲಿ ಶೇ.8.2ರ ಜಿಡಿಪಿ ದರ ದಾಖಲಾಗಿತ್ತು. ಅದಕ್ಕಿಂತ ಹಿಂದೆ ಎಂದರೆ 2023ರ ಜನವರಿ-ಮಾರ್ಚ್ ಅವಧಿಯಲ್ಲಿ ಶೇ.6.2ರಷ್ಟು ಜಿಡಿಪಿ ಇತ್ತು. ಇದಾದ ನಂತರದ ಕನಿಷ್ಠ ದರ ಈಗಿನ ಶೇ.6.7 ಆಗಿದೆ.ಕೃಷಿ ಕ್ಷೇತ್ರದಲ್ಲಿ ಬೆಳವಣಿಗೆಯು ಶೇ.3.7ರಿಂದ ಶೇ.2ಕ್ಕೆ ಕುಸಿತ ಕಂಡಿದೆ. ಇದು ಜಿಡಿಪಿ ಇಳಿಕೆಗೆ ಮುಖ್ಯ ಕಾರಣ. ಆದರೆ ಉತ್ಪಾದನಾ ವಲಯವು ಶೇ.7ರಲ್ಲಿ ಪ್ರಗತಿ ಸಾಧಿಸಿದೆ.
ಭಾರತೀಯ ಪುರುಷರಲ್ಲಿ ಏನೋ ದೋಷವಿದೆ: ತರೂರ್
ತಿರುವನಂತಪುರ: ಮಲಯಾಳಂ ಚಿತ್ರೋದ್ಯಮದ ಲೈಂಗಿಕ ಹಗರಣದ ಬಗ್ಗೆ ಪ್ರತಿಕ್ರಿಯೆ ನೀಡಿರುವ ಕೇರಳದ ಕಾಂಗ್ರೆಸ್ ಸಂಸದ ಶಶಿ ತರೂರ್ ಅವರು ‘ಭಾರತೀಯ ಸಮಾಜದಲ್ಲಿನ ಒಟ್ಟಾರೆ ಮನೋಭಾವ ವನ್ನು ಬದಲಿಸಬೇಕು’ ಎಂದು ಕರೆ ನೀಡಿದ್ದಾರೆ ಹಾಗೂ ‘ಭಾರತೀಯ ಪುರುಷರಲ್ಲಿ ಏನೋ ದೋಷವಿದೆ’ ಎಂದು ಟೀಕಿಸಿದ್ದಾರೆ.ಶುಕ್ರವಾರ ಎನ್‌ಡಿಟೀವಿ ಜತೆ ಮಾತನಾಡಿದ ಅವರು, ‘ಈಗ ಉಂಟಾಗಿರುವ ಸಮಸ್ಯೆಯನ್ನು ಪರಿಹರಿಸಬೇಕು. ಪರಿಹರಿಸಲು ಸಾಧ್ಯವಾಗದಿದ್ದರೆ ಭಾರತೀಯ ಪುರುಷರಲ್ಲಿ ಏನೋ ದೋಷವಿದೆ ಎಂದರ್ಥ. ಲಿಂಗ ಸಮಾನತೆಯ ನಿಜವಾದ ಯುದ್ಧವು ಭಾರತೀಯ ಸಮಾಜದ ಅಧಃಪತನವನ್ನು ಸರಿಪಡಿಸುವಲ್ಲಿ ಅಡಗಿದೆ’ ಎಂದು ಅಭಿಪ್ರಾಯಪಟ್ಟಿದ್ದಾರೆ.