ಕರ್ನಾಟಕ ಸೇರಿ 8 ರಾಜ್ಯಗಳಲ್ಲಿ 41,863 ಕೋಟಿ ವೆಚ್ಚದ ಎಲೆಕ್ಟ್ರಾನಿಕ್ಸ್‌ ಬಿಡಿಭಾಗಗಳ ಉತ್ಪಾದನಾ ಯೋಜನೆ (ಇಸಿಎಂಎಸ್‌)ಗಳಿಗೆ ಕೇಂದ್ರ ಎಲೆಕ್ಟ್ರಾನಿಕ್ಸ್‌ ಮತ್ತು ಐಟಿ ಸಚಿವಾಲಯ ಶುಕ್ರವಾರ ಅನುಮೋದನೆ ನೀಡಿದೆ. ಉತ್ಪಾದನಾ ಆಧಾರಿತ ಪ್ರೋತ್ಸಾಹಧನ ಯೋಜನೆಯಡಿ 2.58 ಲಕ್ಷ ಕೋಟಿ ರು. ಮೌಲ್ಯದ ಎಲೆಕ್ಟ್ರಾನಿಕ್ಸ್‌ ಬಿಡಿಭಾಗಗಳ ಉತ್ಪಾದನಾ ಗುರಿ ಹೊಂದಲಾಗಿದೆ.

- 22 ಯೋಜನೆಗೆ ಕೇಂದ್ರ ಐಟಿ ಸಚಿವಾಲಯ ಅಸ್ತು- ಸಾಮ್ಸಂಗ್‌, ಫಾಕ್ಸ್‌ಕಾನ್‌, ಇತರರಿಂದ ಹೂಡಿಕೆ--

11 ಎಲೆಕ್ಟ್ರಾನಿಕ್ಸ್‌

ವಸ್ತುಗಳ ಉತ್ಪಾದನೆ

ಮೊಬೈಲ್‌, ಟೆಲಿಕಾಂ, ಗೃಹೋಪಯೋಗಿ ಎಲೆಕ್ಟ್ರಾನಿಕ್ಸ್‌ ಉತ್ಪನ್ನಗಳು, ವ್ಯೂಹಾತ್ಮಕ ಎಲೆಕ್ಟ್ರಾನಿಕ್ಸ್‌, ಆಟೋಮೊಟಿವ್‌ ಮತ್ತು ಐಟಿ ಹಾರ್ಡ್‌ವೇರ್‌ ಉತ್ಪನ್ನಗಳು ಸೇರಿ 11 ನಿರ್ದಿಷ್ಟ ಎಲೆಕ್ಟ್ರಾನಿಕ್ಸ್‌ ವಸ್ತುಗಳು, ಬಿಡಿಭಾಗಗಳು ಈ ಯೋಜನೆಯಡಿ ಉತ್ಪಾದನೆ ಆಗಲಿವೆ. ಆಂಧ್ರಪ್ರದೇಶ, ಹರ್ಯಾಣ, ಕರ್ನಾಟಕ, ಮಧ್ಯಪ್ರದೇಶ, ಮಹಾರಾಷ್ಟ್ರ, ತಮಿಳುನಾಡು, ಉತ್ತರಪ್ರದೇಶ ಮತ್ತು ರಾಜಸ್ಥಾನಗಳಲ್ಲಿ ಉತ್ಪಾದನಾ ಘಟಕಗಳು ಸ್ಥಾಪನೆಯಾಗಲಿವೆ.

---

ಪಿಟಿಐ ನವದೆಹಲಿ

ಕರ್ನಾಟಕ ಸೇರಿ 8 ರಾಜ್ಯಗಳಲ್ಲಿ 41,863 ಕೋಟಿ ವೆಚ್ಚದ ಎಲೆಕ್ಟ್ರಾನಿಕ್ಸ್‌ ಬಿಡಿಭಾಗಗಳ ಉತ್ಪಾದನಾ ಯೋಜನೆ (ಇಸಿಎಂಎಸ್‌)ಗಳಿಗೆ ಕೇಂದ್ರ ಎಲೆಕ್ಟ್ರಾನಿಕ್ಸ್‌ ಮತ್ತು ಐಟಿ ಸಚಿವಾಲಯ ಶುಕ್ರವಾರ ಅನುಮೋದನೆ ನೀಡಿದೆ. ಉತ್ಪಾದನಾ ಆಧಾರಿತ ಪ್ರೋತ್ಸಾಹಧನ ಯೋಜನೆಯಡಿ 2.58 ಲಕ್ಷ ಕೋಟಿ ರು. ಮೌಲ್ಯದ ಎಲೆಕ್ಟ್ರಾನಿಕ್ಸ್‌ ಬಿಡಿಭಾಗಗಳ ಉತ್ಪಾದನಾ ಗುರಿ ಹೊಂದಲಾಗಿದೆ.

ಡಿಕ್ಸನ್‌, ಸ್ಯಾಮ್ಸಂಗ್‌ ಡಿಸ್‌ಪ್ಲೇ ನೋಯಿಡಾ ಪ್ರೈ.ಲಿ, ಫಾಕ್ಸ್‌ಕಾನ್‌ ಇಂಡಿಯಾ ಪ್ರೈ.ಲಿ. ಹಿಂಡಾಲ್ಕೋ ಇಂಡಸ್ಟ್ರೀಗಳ ಪ್ರಸ್ತಾವನೆಗಳು ಇದರಲ್ಲಿ ಸೇರಿವೆ. ಈ ಯೋಜನೆಗಳ ಮೂಲಕ 33,791 ನೇರ ಉದ್ಯೋಗ ಸೇರಿ ಒಟ್ಟಾರೆ 37 ಸಾವಿರ ಉದ್ಯೋಗಾವಕಾಶ ಸೃಷ್ಟಿಯಾಗುವ ನಿರೀಕ್ಷೆ ಇದೆ.

ಇತ್ತೀಚೆಗಷ್ಟೇ ಕೇಂದ್ರದ ಎಲೆಕ್ಟ್ರಾನಿಕ್ಸ್‌ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯವು 12,704 ಕೋಟಿ ಮೌಲ್ಯದ ಹೂಡಿಕೆ ಯೋಜನೆಗಳನ್ನು ಘೋಷಿಸಿತ್ತು. ಇದರ ಮುಂದುವರಿದ ಭಾಗವಾಗಿ ಇದೀಗ ಹೊಸ 22 ಉತ್ಪಾದನಾ ಯೋಜನೆಗಳಿಗೆ ಅನುಮೋದನೆ ನೀಡಲಾಗಿದೆ.

ಮೊಬೈಲ್‌, ಟೆಲಿಕಾಂ, ಗೃಹೋಪಯೋಗಿ ಎಲೆಕ್ಟ್ರಾನಿಕ್ಸ್‌ ಉತ್ಪನ್ನಗಳು, ವ್ಯೂಹಾತ್ಮಕ ಎಲೆಕ್ಟ್ರಾನಿಕ್ಸ್‌, ಆಟೋಮೊಟಿವ್‌ ಮತ್ತು ಐಟಿ ಹಾರ್ಡ್‌ವೇರ್‌ ಉತ್ಪನ್ನಗಳು ಸೇರಿ 11 ನಿರ್ದಿಷ್ಟ ಎಲೆಕ್ಟ್ರಾನಿಕ್ಸ್‌ ವಸ್ತುಗಳು, ಬಿಡಿಭಾಗಗಳು ಈ ಯೋಜನೆಯಡಿ ಉತ್ಪಾದನೆ ಆಗಲಿವೆ. ಆಂಧ್ರಪ್ರದೇಶ, ಹರ್ಯಾಣ, ಕರ್ನಾಟಕ, ಮಧ್ಯಪ್ರದೇಶ, ಮಹಾರಾಷ್ಟ್ರ, ತಮಿಳುನಾಡು, ಉತ್ತರಪ್ರದೇಶ ಮತ್ತು ರಾಜಸ್ಥಾನಗಳಲ್ಲಿ ಉತ್ಪಾದನಾ ಘಟಕಗಳು ಸ್ಥಾಪನೆಯಾಗಲಿವೆ.

ಏನೇನು ಉತ್ಪಾದನೆ?:

ಪಿಸಿಬಿಗಳು, ಕೆಪಾಸಿಟರ್ಸ್‌, ಕನೆಕ್ಟರ್ಸ್‌, ಎನ್‌ಕ್ಲೋಷರ್ಸ್‌, ಲಿಯಾನ್‌ ಸೆಲ್‌ಗಳು, ಕ್ಯಾಮೆರಾ ಮೊಡ್ಯೂಲ್ಸ್‌, ಡಿಸ್‌ಪ್ಲೇ ಮಾಡ್ಯೂಲ್ಸ್‌, ಆಪ್ಟಿಕಲ್‌ ಟ್ರಾನ್ಸೀವರ್ಸ್‌ ಮತ್ತು ಸಪ್ಲೈ ಚೈನ್‌ ವಸ್ತುಗಳಾದ ಅಲ್ಯುಮಿನಿಯಂ ಎಕ್ಸ್‌ಟ್ರೂಷನ್‌, ಅನೋಡ್‌ ಮೆಟಟೀರಿಯಲ್‌ ಮತ್ತು ಲ್ಯಾಮಿನೇಟ್‌ಗಳು.