ಚೀನಾ ಬ್ಯಾಡ್ಮಿಂಟನ್‌: ಬೆಳ್ಳಿಗೆದ್ದ ಸಾತ್ವಿಕ್‌-ಚಿರಾಗ್‌ ಶೆಟ್ಟಿ

| Published : Sep 22 2025, 01:01 AM IST

ಚೀನಾ ಬ್ಯಾಡ್ಮಿಂಟನ್‌: ಬೆಳ್ಳಿಗೆದ್ದ ಸಾತ್ವಿಕ್‌-ಚಿರಾಗ್‌ ಶೆಟ್ಟಿ
Share this Article
  • FB
  • TW
  • Linkdin
  • Email

ಸಾರಾಂಶ

ಭಾರತದ ತಾರಾ ಡಬಲ್ಸ್‌ ಜೋಡಿ ಸಾತ್ವಿಕ್‌-ಚಿರಾಗ್‌ ಶೆಟ್ಟಿ ಚೀನಾ ಮಾಸ್ಟರ್ಸ್‌ ಸೂಪರ್‌ 750 ಬ್ಯಾಡ್ಮಿಂಟನ್‌ ಟೂರ್ನಿಯಲ್ಲಿ ಬೆಳ್ಳಿ ಪದಕಕ್ಕೆ ತೃಪ್ತಿಪಟ್ಟುಕೊಂಡಿದೆ.

ಶೆನ್ಜೆನ್‌(ಚೀನಾ): ಭಾರತದ ತಾರಾ ಡಬಲ್ಸ್‌ ಜೋಡಿ ಸಾತ್ವಿಕ್‌-ಚಿರಾಗ್‌ ಶೆಟ್ಟಿ ಚೀನಾ ಮಾಸ್ಟರ್ಸ್‌ ಸೂಪರ್‌ 750 ಬ್ಯಾಡ್ಮಿಂಟನ್‌ ಟೂರ್ನಿಯಲ್ಲಿ ಬೆಳ್ಳಿ ಪದಕಕ್ಕೆ ತೃಪ್ತಿಪಟ್ಟುಕೊಂಡಿದೆ.

ಏಷ್ಯನ್‌ ಚಾಂಪಿಯನ್‌ ಭಾರತೀಯ ಜೋಡಿಯು ಭಾನುವಾರ ನಡೆದ ಪುರುಷರ ಡಬಲ್ಸ್‌ ಫೈನಲ್‌ನಲ್ಲಿ ವಿಶ್ವ ನಂ.1, ದಕ್ಷಿಣ ಕೊರಿಯಾದ ಜೋಡಿ ಕಿಮ್‌ ವೊನ್‌ ಹೊ ಹಾಗೂ ಸಿಯೊ ಸೆಯುಂಗ್‌ ಜೇ ವಿರುದ್ಧ 19-21, 15-21 ನೇರ ಸೆಟ್‌ಗಳಲ್ಲಿ ಪರಾಭವಗೊಂಡಿತು. ಪಂದ್ಯ ಕೇವಲ 45 ನಿಮಿಷಗಳಲ್ಲಿ ಕೊನೆಗೊಂಡಿತು.

ಕಳೆದ ವಾರ ಹಾಂಕಾಂಗ್‌ ಓಪನ್‌ನಲ್ಲೂ ಸಾತ್ವಿಕ್‌-ಚಿರಾಗ್‌ ಬೆಳ್ಳಿಗೆ ತೃಪ್ತಿಪಟ್ಟುಕೊಂಡಿದ್ದರು. ಈ ಬಾರಿ ಚಿನ್ನದ ಮೇಲೆ ಕಣ್ಣಿಟ್ಟಿದ್ದರೂ ಅದು ಕೈಗೂಡಲಿಲ್ಲ. ಕಿಮ್‌-ಸಿಯೋ ಜೋಡಿ 2025ರಲ್ಲಿ 9 ಫೈನಲ್‌ ಆಡಿದ್ದು, 6ರಲ್ಲಿ ಚಾಂಪಿಯನ್‌ ಆಗಿದೆ.