ಸಾರಾಂಶ
ಇಲ್ಲಿಯ ಶ್ರೀ ಬಸವೇಶ್ವರ ಪತ್ತಿನ ಸಹಕಾರ ಸಂಘದ 25 ನೇ ವರ್ಷದ ಬೆಳ್ಳಿ ಮಹೋತ್ಸವ ಸೆ 1 ರ ಸೋಮವಾರದಂದು ನಡೆಯಲಿದೆ ಎಂದು ಸಂಘದ ನಿರ್ದೇಶಕ ವೆಂಕಟಾಪುರ ವೀರೇಂದ್ರ ಪಾಟೀಲ್ ತಿಳಿಸಿದ್ದಾರೆ.
ಕನ್ನಡಪ್ರಭ ವಾರ್ತೆ, ತುರುವೇಕೆರೆ
ಇಲ್ಲಿಯ ಶ್ರೀ ಬಸವೇಶ್ವರ ಪತ್ತಿನ ಸಹಕಾರ ಸಂಘದ 25 ನೇ ವರ್ಷದ ಬೆಳ್ಳಿ ಮಹೋತ್ಸವ ಸೆ 1 ರ ಸೋಮವಾರದಂದು ನಡೆಯಲಿದೆ ಎಂದು ಸಂಘದ ನಿರ್ದೇಶಕ ವೆಂಕಟಾಪುರ ವೀರೇಂದ್ರ ಪಾಟೀಲ್ ತಿಳಿಸಿದ್ದಾರೆ. ಸಂಘದ ಕಚೇರಿಯಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ಸಂಘ ತನ್ನ 25 ನೇ ವರ್ಷದ ಬೆಳ್ಳಿ ಹಬ್ಬವನ್ನು ಪಟ್ಟಣದ ಶ್ರೀ ಗುರುಸಿದ್ದರೇಮೇಶ್ವರ ಸಮುದಾಯ ಭವನದಲ್ಲಿ ಆಚರಿಸಲಿದೆ. ಈ ಸಮಾರಂಭದ ಅಧ್ಯಕ್ಷತೆಯನ್ನು ಸಂಘದ ಅಧ್ಯಕ್ಷರಾದ ಶ್ರೀ ಗುರುಪರದೇಶೀಕೇಂದ್ರ ಸ್ವಾಮೀಜಿ ವಹಿಸಲಿದ್ದಾರೆ. ಗೋಡೆಕೆರೆಯ ಭೂ ಸುಕ್ಷೇತ್ರದ ಚರಪಟ್ಟಾಧ್ಯಕ್ಷರಾಗಿರುವ ಶ್ರೀ ಮೃತ್ಯುಂಜಯದೇಶೀಕೇಂದ್ರ ಸ್ವಾಮೀಜಿ, ಸಿಡ್ಲೇಹಳ್ಳಿ ಮಹಾಸಂಸ್ಥಾನಮಠ, ಗುರುಕುಲಾನಂದಾಶ್ರಮದ ಶ್ರೀ ಇಮ್ಮಡಿ ಕರಿಬಸವದೇಶೀಕೇಂದ್ರ ಸ್ವಾಮೀಜಿಯವರು ಆಶೀರ್ವಚನ ನೀಡಲಿದ್ದಾರೆ.ಶಾಸಕ ಎಂ.ಟಿ.ಕೃಷ್ಣಪ್ಪ, ಮಾಜಿ ಶಾಸಕರಾದ ಮಸಾಲಾ ಜಯರಾಮ್, ಎಂ.ಡಿ.ಲಕ್ಷ್ಮೀನಾರಾಯಣ್ ಸೇರಿದಂತೆ ಹಲವು ಗಣ್ಯರು ಆಗಮಿಸಲಿದ್ದಾರೆ. ಈ ಕಾರ್ಯಕ್ರಮದಲ್ಲಿ ಸಂಘದ ಷೇರುದಾರರಿಗೆ ವಿಶೇಷವಾದ ಕೊಡುಗೆಯನ್ನು ನೀಡಲಾಗುವುದು ಎಂದು ಅವರು ತಿಳಿಸಿದರು. ಪತ್ರಿಕಾಗೋಷ್ಠಿಯಲ್ಲಿ ಶ್ರೀ ಗುರುಪರದೇಶೀಕೇಂದ್ರ ಮಹಾಸ್ವಾಮೀಜಿ, ಉಪಾಧ್ಯಕ್ಷ ಎಂ.ಎಸ್.ಶಿವಶಂಕರಯ್ಯ, ನಿರ್ದೇಶಕರಾದ ಬಿ.ಎಸ್.ವಿಜಯಕುಮಾರ್, ಗುರುಲಿಂಗಮೂರ್ತಿ, ಶಿವರುದ್ರಪ್ಪ, ಏಸ್.ಶಿವಬಸವಯ್ಯ, ಶ್ರೀಕಂಠಯ್ಯ, ನಂದೀಶ್, ಗಿರಿಯಪ್ಪ, ಮಹೇಶ್, ಎಂ.ಎನ್.ಲೋಕೇಶ್, ಶಿವಶಂಕರಪ್ಪ, ಯೋಗಾನಂದ್, ಸಂಘದ ಸಿಇಓ ವಿದ್ಯಾಶ್ರೀ, ನಗದು ಗುಮಾಸ್ತ ಓಂಕಾರಮೂರ್ತಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.