- ಎಐ ಸಂಚಲನದ ನಡುವೆಯೇ ಕುತೂಹಲಕರ ವಿದ್ಯಮಾನ
- ಅವರ ಸಾಧನೆ ಪರಿಗಣಿಸಿ ದಿಲ್ಲಿಯ ಎಐ ಶೃಂಗಕ್ಕೆ ಆಹ್ವಾನ- ಆವಿಷ್ಕಾರ
==ದೇಶದ ಮೊದಲ ಎಐ ಶೃಂಗಕ್ಕೆ ಪಿಎಂ ಮೋದಿಚಾಲನೆ: 19ಕ್ಕೆ ಭಾಷಣ
ನವದೆಹಲಿ: ಭಾರತದಲ್ಲಿ ಇದೇ ಮೊದಲ ಬಾರಿ ಆಯೋಜಿಸಲಾಗಿರುವ 5 ದಿನಗಳ ಎಐ ಇಂಪ್ಯಾಕ್ಟ್ ಎಕ್ಸ್‌ಪೋಗೆ ಪ್ರಧಾನಿ ನರೇಂದ್ರ ಮೋದಿ ಸೋಮವಾರ ಚಾಲನೆ ನೀಡಿದ್ದಾರೆ. ಈ ಕ್ಷಣವನ್ನು ಅವರು ‘ಅಸಾಧಾರಣ ಸಾಮರ್ಥ್ಯದ ಒಂದು ನೋಟ’ ಎಂದು ಬಣ್ಣಿಸಿದ್ದಾರೆ. ಗುರುವಾರ ಅವರು ಎಐ ಶೃಂಗದಲ್ಲಿ ಉದ್ಘಾಟನಾ ಭಾಷಣ ಮಾಡಲಿದ್ದಾರೆ. ದೆಹಲಿಯ ಭಾರತ ಮಂಡಪಂನಲ್ಲಿ ನಡೆಯುತ್ತಿರುವ ಈ ಕಾರ್ಯಕ್ರಮದಲ್ಲಿ 13 ದೇಶಗಳ 600ಕ್ಕೂ ಅಧಿಕ ಸ್ಟಾರ್ಟ್‌ಅಪ್‌ಗಳು ಭಾಗವಹಿಸಿವೆ.---ನವದೆಹಲಿ: ಮಾಹಿತಿ ತಂತ್ರಜ್ಞಾನ ವಲಯದಲ್ಲಿ ಕೃತಕ ಬುದ್ಧಿಮತ್ತೆ (ಎಐ) ಬಳಕೆ ಬಗ್ಗೆ ದೇಶಾದ್ಯಂತ ಭರ್ಜರಿ ಚರ್ಚೆ ನಡೆಯುತ್ತಿರುವ ಹೊತ್ತಿನಲ್ಲೇ ಮಂಗಳೂರು ಮೂಲದ ಉದ್ಯಮಿ ವಿವೇಕ್ ರಾಜ್, ಎಐ ಆಧರಿತ ಕೃಷಿ ತಂತ್ರಜ್ಞಾನ ಅಭಿವೃದ್ಧಿಗೆ 146 ಕೋಟಿ ರು. ವೆಚ್ಚ ಮಾಡಿ ಇದಕ್ಕೆ 4 ಪೇಟೆಂಟ್ ಪಡೆದಿದ್ದಲ್ಲದೇ, ಇದೀಗ 214 ಕೋಟಿ ರು. ವೆಚ್ಚ ಮಾಡಿ ತಾವೇ 16 ಎಕರೆ ಪ್ರದೇಶದಲ್ಲಿ ಎಐ ಆಧರಿತ ಹೈಡ್ರೋಫೋನಿಕ್ಸ್ ಕೃಷಿಗೆ ಮುಂದಾಗಿದ್ದಾರೆ.
ಇವರ ಈ ಸಾಧನೆ ಪರಿಗಣಿಸಿ ಕೇಂದ್ರ ಸರ್ಕಾರ, ಸೋಮವಾರದಿಂದ ದೆಹಲಿಯಲ್ಲಿ ಆರಂಭವಾದ 5 ದಿನಗಳ ಜಾಗತಿಕ ಎಐ ಶೃಂಗಕ್ಕೆ ಭಾಷಣಕಾರನನ್ನಾಗಿ ವಿವೇಕ್ ಅವರನ್ನು ಆಹ್ವಾನಿಸಿದೆ. ದಶಕಗಳ ಹಿಂದೆ ಹಲವು ಕೋಟಿ ರು.ವೆಚ್ಚ ಮಾಡಿ 5000 ಎಕರೆ ಜಾಗದಲ್ಲಿ ಬೆಳೆದ ಶುಂಠಿ ಕೃಷಿ ಪೂರ್ಣವಾಗಿ ಕೈಕೊಟ್ಟ ಬಳಿಕ ಕೃಷಿ ವಲಯದಲ್ಲಿ ಹೊಸತನಕ್ಕೆ ಮಿಡಿದ ಅವರ ಶ್ರಮ ಇದೀಗ ಫಲ ಕೊಟ್ಟಿದೆ. ಈ ಕುರಿತು ಪನಾಮಾ ಹೈಡ್ರೋ-ಎಕ್ಸ್ ಕಂಪನಿಯ ಸಿಇಒ ಆಗಿರುವ ಕೃಷ್ಯೋದ್ಯಮಿ ರಾಜ್ ಪಿಟಿಐ ಸುದ್ದಿಸಂಸ್ಥೆಯೊಂದಿಗೆ ಮಾತನಾಡಿದ್ದಾರೆ.
5000 ಎಕರೆ ಶುಂಠಿ ನಷ್ಟ:ರಾಜ್ ಅವರು ಚಿಕ್ಕಮಗಳೂರು ಜಿಲ್ಲೆಯಲ್ಲಿ 5,000 ಎಕರೆ ಪ್ರದೇಶದಲ್ಲಿ ಶುಂಠಿ ಬೆಳೆದಿದ್ದರು. ಆದರೆ ಬರಗಾಲದಿಂದ ಬೆಳೆ ನಷ್ಟವಾಗಿ ಭಾರೀ ನಷ್ಟ ಉಂಟಾಗಿತ್ತು. ಇದರಿಂದ ನೊಂದ ವಿವೇಕ್, ಒಳಾಂಗಣ ಕೃಷಿಯ ಕಡೆ ತಿರುಗಿದ್ದು, 2016ರಿಂದ ಆ ನಿಟ್ಟಿನಲ್ಲಿ ಸಂಶೋಧನೆ ಆರಂಭಿಸಿದ್ದರು. ಇದರ ಫಲವಾಗಿ ಒಳಾಂಗಣದಲ್ಲಿ ಎಐ ಬಳಸಿ ಅಲ್ಲಿನ ಬೆಳಕು, ಆರ್ದ್ರತೆ, ತಾಪಮಾನದಂತಹ ಅಂಶಗಳನ್ನು ನಿಯಂತ್ರಿಸುವ ‘ಎಐ-ಚಾಲಿತ ಸ್ಮಾರ್ಟ್ ಎಲ್‌ಇಡಿ ವ್ಯವಸ್ಥೆ’ ಅಭಿವೃದ್ಧಿಪಡಿಸಿ, 2021ರಲ್ಲಿ ಆಸ್ಟ್ರೇಲಿಯಾದಿಂದ ತಮ್ಮ ಮೊದಲ ಪೇಟೆಂಟ್ ಪಡೆದರು.
ಬಳಿಕ ಜಲಕೃಷಿಯಲ್ಲಿ ಬೆಳೆಯಲಾದ ಬೆಳೆಯ ಸಮಸ್ಯೆಗಳನ್ನು ಎಐ ಮೂಲಕ ಕಂಡುಹಿಡಿಯುವುದು ಮತ್ತು ಒಳಾಂಗಣದಲ್ಲಿ ಸೂಕ್ತ ಮಾರ್ಪಾಡುಗಳನ್ನು ಮಾಡುವುದು, ಗಿಡಗಳಲ್ಲಿ ಸಮಸ್ಯೆ ಗೋಚರಿಸುವುದಕ್ಕೂ ಮುನ್ನವೇ ಎಐ ಸಹಾಯದಿಂದ ಕೇಸರಿ ಗಿಡಕ್ಕಂಟಿದ ರೋಗವನ್ನು ಪತ್ತೆ ಹಚ್ಚುವುದು, ಎಐ ಚಾಲಿತ ಕ್ಯಾಮೆರಾಗಳನ್ನು ಈ ಕೆಲಸಕ್ಕೆ ಬಳಸುವುದನ್ನು ಕಂಡುಹಿಡಿದಿರುವ ವಿವೇಕ್, ಇದಕ್ಕೆ ಬ್ರಿಟನ್, ಜರ್ಮನಿ ಮತ್ತು ಆಸ್ಟ್ರೇಲಿಯಾದಿಂದ ಪೇಟೆಂಟ್ ಪಡೆದಿದ್ದಾರೆ.ಹೊಸ ಸಾಹಸ:
ಇದೀಗ ಮೂಡುಬಿದಿರೆಯ 16 ಎಕರೆ ಜಾಗ ಖರೀದಿಸಿರುವ ವಿವೇಕ್ ಅಲ್ಲಿ, 5 ಎಕರೆ ಕೇಸರಿ, 5 ಎಕರೆ ಶುಂಠಿ ಹಾಗೂ 6 ಎಕರೆಯಲ್ಲಿ ಅರಶಿನ, ಅಶ್ವಗಂಧದಂತಹ ಔಷಧೀಯ ಗುಣಗಳುಳ್ಳ ಗಿಡ ಬೆಳೆಯುವ ಯೋಜನೆ ಹಾಕಿಕೊಂಡಿದ್ದಾರೆ. ಇದು 2026ರ ಅಂತ್ಯದಲ್ಲಿ ಆರಂಭವಾಗಿ, 2027ರ ಜೂನ್ ಹೊತ್ತಿಗೆ ಮೊದಲ ಫಸಲು ಬರುವ ನಿರೀಕ್ಷೆಯಿದೆ. ಸಾಂಪ್ರದಾಯಿಕ ಕೃಷಿಯಿಂದ ಪ್ರತಿ ಎಕರೆಯಲ್ಲಿ 400 ಚೀಲ. ಶುಂಠಿ ಬೆಳೆದರೆ, ಎಐ ಬೆಂಬಲಿತ ಜಲಕೃಷಿಯಿಂದ ಅಷ್ಟೇ ಪ್ರದೇಶದಲ್ಲಿ 1,200 ಚೀಲ ಬೆಳೆ ತೆಗೆಯಬಹುದು. ಜತೆಗೆ ವಾರ್ಷಿಕ 3 ಬೆಳೆ ಬೆಳೆಯಬಹುದು ಎಂದು ರಾಜ್ ಹೇಳುತ್ತಾರೆ.ಫೋರ್ಬ್ಸ್ ಪಟ್ಟೀಲಿ ಸ್ಥಾನ:
ವಿವೇಕ್ ಅವರು ಎಐ ಆಧರಿತ ಕೇಸರಿಯ ಜಲಕೃಷಿಗಾಗಿ ಫೋರ್ಬ್ಸ್ ಇಂಡಿಯಾ ಡಿಜಿಇಎಂಎಸ್ ವಿಭಾಗದಲ್ಲಿ 2025ರ ಪಟ್ಟಿಯಲ್ಲಿ ಟಾಪ್ 200 ಜನರಲ್ಲಿ ಸ್ಥಾನ ಪಡೆದಿದ್ದರು. ಇವರ ಒಟ್ಟು ಆಸ್ತಿ 6,000 ಕೋಟಿ ರು..ಹೈಡ್ರೋಫೋನಿಕ್ ಕೃಷಿ ಎಂದರೇನು?
ಇದು ಆಧುನಿಕ ವ್ಯವಸಾಯ ವಿಧಾನವಾಗಿದ್ದು, ಮಣ್ಣಿನ ಬಳಕೆಯೇ ಇಲ್ಲದೆ ಪೋಷಕಾಂಶಭರಿತ ನೀರಿನಲ್ಲಿ ಗಿಡಗಳನ್ನು ಬೆಳೆಯಲಾಗುತ್ತದೆ. ನಿಯಂತ್ರಿತ ಪ್ರದೇಶದಲ್ಲಿ ಅಗತ್ಯ ವ್ಯವಸ್ಥೆಗಳೊಂದಿಗೆ ಈ ರೀತಿಯ ಕೃಷಿಯನ್ನು ಮಾಡಲಾಗುತ್ತದೆ. ಇದರಿಂದ ಕಡಿಮೆ ಪ್ರದೇಶದಲ್ಲಿ ಹೆಚ್ಚು ಬೆಳೆ ಬೆಳೆಯಬಹುದು. ಅಂತೆಯೇ ಇದು ಮಳೆ, ಬಿಸಿಲಿನ ಮೇಲೆ ನೇರವಾಗಿ ಅವಲಂಬಿತವಾಗಿರದ ಕಾರಣ ಹವಾಮಾನ ಬದಲಾವಣೆಯಿಂದ ಹಾನಿಯಾಗದು. ಜತೆಗೆ ಸಾಂಪ್ರದಾಯಿಕ ಕೃಷಿಗಿಂತ ಶೇ.90ರಷ್ಟು ನೀರು ಉಳಿತಾಯವೂ ಆಗುತ್ತದೆ.===-
--ವಿವೇಕ್ ಸಾಧನೆ ಏನು?- ಮಂಗಳೂರಿನ ವಿವೇಕ್‌ರಿಂದ ಎಐ ಆಧರಿತ ಕೃಷಿ
₹146 ಕೋಟಿ ವೆಚ್ಚದಲ್ಲಿ ಸಂಶೋಧನೆ । 4 ಪೇಟೆಂಟ್5000 ಎಕರೆ ಶುಂಠಿ ಕೃಷಿ ನಷ್ಟದ ಬಳಿಕ ಹೊಸ ಸಾಹಸಮೂಡುಬಿದಿರೆ ಬಳಿ 16 ಎಕರೆಯಲ್ಲಿ ಹೈಡ್ರೋ ಕೃಷಿಮಂಗಳೂರಿನ ವಿವೇಕ್ ದಿಲ್ಲಿ ಸಮ್ಮಿಟ್‌ನಲ್ಲಿ ಮಿಂಚಿಂಗ್ದಿಲ್ಲಿ ಎಐ ಶೃಂಗಕ್ಕೆ ವಿವೇಕ್‌ಗೆ ಭಾಷಣಕಾರನಾಗಿ ಆಹ್ವಾನ