ಕರ್ನಾಟಕದ ಗೃಹಲಕ್ಷ್ಮಿ ಮಾದರಿಯಲ್ಲಿ ಮಹಿಳೆಯರಿಗೆ ಮಾಸಿಕ 1.5 ಸಾವಿರ ರು. ಹಣಕಾಸು ನೆರವು ನೀಡುವ ಮಹಾರಾಷ್ಟ್ರ ಸರ್ಕಾರದ ‘ಮಾಝಿ ಲಡ್ಕಿ ಬಹಿನ್ ಯೋಜನೆ’ಯಿಂದ 92 ಲಕ್ಷ ಅನರ್ಹ ಫಲಾನುಭವಿಗಳನ್ನು ಕೈಬಿಡಲಾಗಿದೆ. ಇವರಲ್ಲಿ 14 ಸಾವಿರ ಪುರುಷರೂ ಇದ್ದರು ಎಂಬುದು ಗಮನಾರ್ಹ.
ಮುಂಬೈ: ಕರ್ನಾಟಕದ ಗೃಹಲಕ್ಷ್ಮಿ ಮಾದರಿಯಲ್ಲಿ ಮಹಿಳೆಯರಿಗೆ ಮಾಸಿಕ 1.5 ಸಾವಿರ ರು. ಹಣಕಾಸು ನೆರವು ನೀಡುವ ಮಹಾರಾಷ್ಟ್ರ ಸರ್ಕಾರದ ‘ಮಾಝಿ ಲಡ್ಕಿ ಬಹಿನ್ ಯೋಜನೆ’ಯಿಂದ 92 ಲಕ್ಷ ಅನರ್ಹ ಫಲಾನುಭವಿಗಳನ್ನು ಕೈಬಿಡಲಾಗಿದೆ. ಇವರಲ್ಲಿ 14 ಸಾವಿರ ಪುರುಷರೂ ಇದ್ದರು ಎಂಬುದು ಗಮನಾರ್ಹ.
ಆರಂಭದಲ್ಲಿ ಯೋಜನೆಯಡಿ 2.4 ಕೋಟಿ ಫಲಾನುಭವಿ
ಆರಂಭದಲ್ಲಿ ಯೋಜನೆಯಡಿ 2.4 ಕೋಟಿ ಫಲಾನುಭವಿಗಳಿದ್ದರು. ಯೋಜನೆ ಕುರಿತು ಪುನರ್ ಪರಿಶೀಲನೆ ನಡೆಸಿದ ಬಳಿಕ ಆದಾಯ ತೆರಿಗೆ ಪಾವತಿಸುತ್ತಿರುವವರು, ಅನರ್ಹರೂ ಯೋಜನೆಯ ಲಾಭ ಪಡೆಯುತ್ತಿರುವುದು ಬೆಳಕಿಗೆ ಬಂದಿತ್ತು. ಈ ಹಿನ್ನೆಲೆಯಲ್ಲಿ ಹೊಸದಾಗಿ ಇ-ಕೆವೈಸಿ ಮಾಡಿದ ತರುವಾಯ ಶೇ.38ರಷ್ಟು ಮಂದಿಯನ್ನು ಅನರ್ಹರೆಂದು ಗುರುತಿಸಲಾಗಿದೆ.
ಇ-ಕೆವೈಸಿ ಪ್ರಕ್ರಿಯೆ ಪೂರ್ಣಗೊಳುವಲ್ಲಿ ವಿಫಲ
ಸುಮಾರು 50ರಿಂದ 55 ಲಕ್ಷ ಮಂದಿ ಮಹಿಳೆಯರು ನಿಗದಿತ ಅವಧಿ (8 ತಿಂಗಳು)ಯೊಳಗೆ ಇ-ಕೆವೈಸಿ ಪ್ರಕ್ರಿಯೆ ಪೂರ್ಣಗೊಳುವಲ್ಲಿ ವಿಫಲವಾಗಿದ್ದರೆ, 12 ಲಕ್ಷ ಮಂದಿ ತೆರಿಗೆ ವ್ಯಾಪ್ತಿಗೆ ಸೇರಿದವರಿದ್ದರು. ಅದೇ ರೀತಿ 4.5 ಲಕ್ಷ ಮಹಿಳೆಯರು 65 ವರ್ಷಕ್ಕಿಂತ ಹೆಚ್ಚಿನವರಾಗಿದ್ದರೆ, 14, 000 ಮಂದಿ ಪುರುಷರು ಮಹಿಳೆಯರ ಹೆಸರಿನಲ್ಲಿ ಯೋಜನೆಯ ಲಾಭ ಪಡೆಯುತ್ತಿದ್ದರು.
ರಾಜ್ಯದಲ್ಲಿ ಬೀಡ್ ಜಿಲ್ಲೆಯಲ್ಲಿ ಅತಿ ಹೆಚ್ಚು ಮಂದಿ ಅಂದರೆ 28 ಲಕ್ಷ ಮಹಿಳೆಯರನ್ನು ಅನರ್ಹರೆಂದು ಘೋಷಿಸಲಾಗಿದೆ.
