ವಿಜಯ್ ಅಭಿನಯದ ಬಹುನಿರೀಕ್ಷಿತ ಚಿತ್ರ ‘ಜನನಾಯಗನ್’ ಆನ್‌ಲೈನ್‌ನಲ್ಲಿ ಲೀಕ್ ಆಗಿರುವ ಪ್ರಕರಣದಲ್ಲಿ, ತಮಿಳುನಾಡು ಪೊಲೀಸರು ಬುಧವಾರ ಮೂವರು ಮುಖ್ಯ ಆರೋಪಿಗಳನ್ನು ಬಂಧಿಸಿದ್ದಾರೆ. ಈಗ ಬಂಧಿತರ ಸಂಖ್ಯೆ 9ಕ್ಕೇರಿದೆ.
ಚೆನ್ನೈ: ವಿಜಯ್ ಅಭಿನಯದ ಬಹುನಿರೀಕ್ಷಿತ ಚಿತ್ರ ‘ಜನನಾಯಗನ್’ ಆನ್‌ಲೈನ್‌ನಲ್ಲಿ ಲೀಕ್ ಆಗಿರುವ ಪ್ರಕರಣದಲ್ಲಿ, ತಮಿಳುನಾಡು ಪೊಲೀಸರು ಬುಧವಾರ ಮೂವರು ಮುಖ್ಯ ಆರೋಪಿಗಳನ್ನು ಬಂಧಿಸಿದ್ದಾರೆ. ಈಗ ಬಂಧಿತರ ಸಂಖ್ಯೆ 9ಕ್ಕೇರಿದೆ.
ಪ್ರಮುಖ ಆರೋಪಿ ಫ್ರೀಲ್ಯಾನ್ಸ್ ಅಸಿಸ್ಟಂಟ್ ಎಡಿಟರ್ ಆಗಿದ್ದು, ಇನ್ನೊಂದು ಚಿತ್ರದ ಕೆಲಸ ಮಾಡುತ್ತಿದ್ದ. ಆದರೂ ಜನನಾಯಗನ್ ಚಿತ್ರದ ಎಡಿಟಿಂಗ್ ಸ್ಟುಡಿಯೋಗೆ ಅನಧಿಕೃತ ಪ್ರವೇಶ ಪಡೆದು ಚಿತ್ರದ ಮೂಲ ರೀಲ್‌ಗಳನ್ನು ಕದ್ದಿದ್ದ. ನಂತರ ಆ ರೀಲ್‌ಗಳನ್ನು ಪೂರ್ಣ ಚಿತ್ರವಾಗಿ ರೂಪಿಸಿ, ಇತರ ಆರೋಪಿಗಳೊಂದಿಗೆ ಹಂಚಿಕೊಂಡಿದ್ದ. ಬಳಿಕ ಇದು ವೈರಲ್ ಆಯಿತು ಎಂದು ಪೊಲೀಸರು ತಿಳಿಸಿದ್ದಾರೆ.
ಕರ್ನಾಟಕದ ರೀತಿ 3 ಗ್ಯಾರಂಟಿ
ಚೆನ್ನೈ: ಏ.23ರಂದು ನಡೆಯಲಿರುವ ವಿಧಾನಸಭಾ ಚುನಾವಣೆಗೆ ಟಿವಿಕೆ ಮುಖ್ಯಸ್ಥ ವಿಜಯ್ ಪ್ರಣಾಳಿಕೆ ಬಿಡುಗಡೆ ಮಾಡಿದ್ದಾರೆ. ಅದರಲ್ಲಿ ಕರ್ನಾಟಕದ ‘ಗೃಹಲಕ್ಷ್ಮೀ’ ಯೋಜನೆ ಹೋಲುವಂಥ 60 ವರ್ಷದ ಒಳಗಿನ ಮಹಿಳೆಯರ ಖಾತೆಗೆ ಮಾಸಿಕ 2,500 ರು. ಸಹಾಯಧನ, ‘ಯುವನಿಧಿ’ ಮಾದರಿ ನಿರುದ್ಯೋಗಿ ಪದವೀಧರರಿಗೆ ಮಾಸಿಕ 4,000 ರು.ವರೆಗೆ ಸಹಾಯಧನ, ‘ಗೃಹಜ್ಯೋತಿ’ ರೀತಿ 200 ಯೂನಿಟ್ ಉಚಿತ ವಿದ್ಯುತ್ ಘೋಷಣೆ ಮಾಡಿದ್ದಾರೆ.
ವಧುವಿಗೆ 8 ಗ್ರಾಂ ಚಿನ್ನ
ಜೊತೆಗೆ, ವಧುವಿಗೆ 8 ಗ್ರಾಂ ಚಿನ್ನ, ರೇಷ್ಮೆ ಸೀರೆ, ವೃದ್ಧರು ಮತ್ತು ಅಂಗವಿಕಲರಿಗೆ ಮಾಸಿಕ 3,000 ರು. ಪಿಂಚಣಿ, 100 ವಸತಿ ಶಾಲೆಗಳ ನಿರ್ಮಾಣ, 20 ಲಕ್ಷ ರು.ವರೆಗೆ ಉನ್ನತ ಶಿಕ್ಷಣಕ್ಕೆ ಸಾಲ, ಮಹಿಳಾ ಸ್ವಸಹಾಯ ಸಂಘಗಳಿಗೆ 5 ಲಕ್ಷ ರು.ವರೆಗೆ ಬಡ್ಡಿರಹಿತ ಸಾಲ, ಶಾಲೆ ಬಿಡುವುದನ್ನು ತಡೆಯಲು ತಾಯಂದಿರಿಗೆ ವಾರ್ಷಿಕವಾಗಿ 15,000 ರು., 5 ಎಕರೆಗಿಂತ ಕಡಿಮೆ ಭೂಮಿ ಹೊಂದಿರುವ ರೈತರಿಗೆ ಸಂಪೂರ್ಣ ಸಹಕಾರಿ ಬೆಳೆ ಸಾಲ ಮನ್ನಾ ಮತ್ತು ಭತ್ತಕ್ಕೆ ಕ್ವಿಂಟಲ್‌ಗೆ 3,500 ರು. ಕನಿಷ್ಠ ಬೆಂಬಲ ಬೆಲೆಯನ್ನು ಘೋಷಿಸಿದ್ದಾರೆ.