ಕೋಕ್‌ ಪ್ರಿಯ ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌, ‘ಡಯಟ್‌ ಸೋಡಾ ಕುಡಿಯುವುದರಿಂದ ದೇಹದೊಳಗಿರುವ ಕ್ಯಾನ್ಸರ್‌ ಕೋಶ  ಸಾಯುತ್ತವೆ’ ಎಂದು ಹೇಳಿದ್ದಾರೆ.   ಟ್ರಂಪ್‌ರ ಈ ಸಲಹೆಗೆ ಭಾರೀ ಆಕ್ರೋಶ ವ್ಯಕ್ತವಾಗಿದೆ

ವಾಷಿಂಗ್ಟನ್‌: ಕೋಕ್‌ ಪ್ರಿಯ ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌, ‘ಡಯಟ್‌ ಸೋಡಾ ಕುಡಿಯುವುದರಿಂದ ದೇಹದೊಳಗಿರುವ ಕ್ಯಾನ್ಸರ್‌ ಕೋಶಗಳು ಸಾಯುತ್ತವೆ’ ಎಂದು ಹೇಳಿದ್ದಾರೆ. ಅಮೆರಿಕದ ಮೆಡಿಕೇರ್ ಕೇಂದ್ರಗಳ ಮುಖ್ಯಸ್ಥ ಡಾ. ಮೆಹ್ಮೆಟ್ ಓಜ್ ಅವರು ಟ್ರಂಪ್‌ ಪುತ್ರನ ಪಾಡ್‌ಕಾಸ್ಟ್‌ನಲ್ಲಿ ಮಾತನಾಡುತ್ತಾ, ‘ಹುಲ್ಲಿನ ಮೇಲೆ ಕೋಕ್‌ ಹಾಕಿದರೆ ಹುಲ್ಲು ಸಾಯುತ್ತದೆ. ಅದನ್ನು ಕುಡಿದರೆ ದೇಹದಲ್ಲಿರುವ ಕ್ಯಾನ್ಸರ್‌ ಕೋಶಗಳೂ ಸಾಯುತ್ತವೆ ಎಂದು ಟ್ರಂಪ್‌ ಹೇಳುತ್ತಿದ್ದರು. ಕಿತ್ತಳೆ ಹಣ್ಣನ್ನು ಕಿವುಚಿ ಮಾಡುವ ಆರೆಂಜ್‌ ಸೋಡಾ ಕೂಡ ಆರೋಗ್ಯಕರ ಎನ್ನುತ್ತಿದ್ದರು’ ಎಂದು ಮೆಲುಕು ಹಾಕಿದ್ದಾರೆ.

ಸಲಹೆಗೆ ಭಾರೀ ಆಕ್ರೋಶ

ಟ್ರಂಪ್‌ರ ಈ ಸಲಹೆಗೆ ಭಾರೀ ಆಕ್ರೋಶ ವ್ಯಕ್ತವಾಗಿದ್ದು, ‘ಕೋಲಾದಿಂದ ಶೌಚಾಲಯ ಸ್ವಚ್ಛವಾಗುತ್ತದೆ. ಹಾಗೆಂದು ದೇಹಶುದ್ಧಿಗೆ ನಾನದನ್ನು ಶಿಫಾರಸು ಮಾಡುವುದಿಲ್ಲ’ ಎಂದು ವ್ಯಕ್ತಿಯೊಬ್ಬರು ತಿರುಗೇಟು ನೀಡಿದ್ದಾರೆ.

12 ಕ್ಯಾನ್‌ ಡಯಟ್‌ ಕೋಕ್‌ ಕುಡಿಯುವ ಟ್ರಂಪ್‌

ದಿನವೊಂದಕ್ಕೆ 12 ಕ್ಯಾನ್‌ ಡಯಟ್‌ ಕೋಕ್‌ ಕುಡಿಯುವ ಟ್ರಂಪ್‌, ಅದನ್ನು ತರಿಸಿಕೊಳ್ಳಲೆಂದೇ ಕಚೇರಿಯಲ್ಲಿ ಪ್ರತ್ಯೇಕ ಕರೆಗಂಟೆ ಇಟ್ಟುಕೊಂಡಿದ್ದಾರೆ.