ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಿಂದ ಐಪಿಎಲ್‌ ಫೈನಲ್‌ ಪಂದ್ಯವನ್ನು ಸ್ಥಳಾಂತರಗೊಳಿಸಿದ್ದಕ್ಕೆ ಈಗ ಸ್ವತಃ ಬಿಸಿಸಿಐ ಸ್ಪಷ್ಟನೆ ನೀಡಿದೆ. ಕರ್ನಾಟಕ ರಾಜ್ಯ ಕ್ರಿಕೆಟ್‌ ಸಂಸ್ಥೆ(ಕೆಎಸ್‌ಸಿಎ) ನಿಗದಿಗಿಂತ ಹೆಚ್ಚುವರಿಯಾಗಿ 10000 ಟಿಕೆಟ್‌ಗೆ ಬೇಡಿಕೆ ಇಟ್ಟಿದ್ದಕ್ಕೆ ಬೆಂಗಳೂರಿಗೆ ಪಂದ್ಯದ ಆತಿಥ್ಯ ನೀಡಿಲ್ಲ ಎಂದಿದೆ.

- ಐಪಿಎಲ್‌ ಪಂದ್ಯದ ಆತಿಥ್ಯ ವಹಿಸುವ ಕ್ರಿಕೆಟ್‌ ಸಂಸ್ಥೆಗೆ 15% ಟಿಕೆಟ್‌ ಉಚಿತವಾಗಿ ಹಂಚಿಕೆ- ಲೀಗ್‌ ಪಂದ್ಯದ ವೇಳೆ 15% ಮಿತಿಗಿಂತ ಹೆಚ್ಚು ಟಿಕೆಟ್‌ಗಳನ್ನು ಪಡೆದಿತ್ತು ರಾಜ್ಯ ಕ್ರಿಕೆಟ್‌ ಸಂಸ್ಥೆ- ಈ ಬಗ್ಗೆ ಪ್ರಶ್ನಿಸಿದ್ದ ಬಿಸಿಸಿಐ. ಮೇ 2ರಂದು ಉತ್ತರ ಕೊಟ್ಟ ಕೆಎಸ್‌ಸಿಎ, ಉತ್ತರ ಕಂಡು ಶಾಕ್‌- 15% ಉಚಿತ ಟಿಕೆಟ್‌ ಜತೆಗೆ ಸದಸ್ಯರು, ಕ್ಲಬ್‌ಗಳು, ಇತರರಿಗೆ ಹೆಚ್ಚುವರಿ ಟಿಕೆಟ್‌ಗೆ ಬೇಡಿಕೆ- ಶಾಸಕರು, ಸರ್ಕಾರಕ್ಕೂ 700 ಟಿಕೆಟ್‌ ಕೇಳಿದ್ದ ಸಂಸ್ಥೆ: ಬಿಸಿಸಿಐ ಕಾರ್ಯದರ್ಶಿ ದೇವಜಿತ್‌

--

ಶಾಸಕರ ಉಚಿತ ಟಿಕೆಟ್‌ಗೂನಮಗೂ ಸಂಬಂಧವೇ ಇಲ್ಲಕ್ರೀಡಾಂಗಣದ ಆಸನ ಸಾಮರ್ಥ್ಯದಲ್ಲಿ ಶೇ.15ರಷ್ಟು ಉಚಿತ ಟಿಕೆಟ್‌ಗಳನ್ನು ಬಿಸಿಸಿಐ ನೀಡುತ್ತದೆ. ಅಂದರೆ 2000ದಷ್ಟು ಟಿಕೆಟ್‌ ಸಿಗುತ್ತವೆ. ಆದರೆ ನಮ್ಮ ಸದಸ್ಯರು, ಕ್ಲಬ್‌ಗಳ ಸಂಖ್ಯೆ 3000ಕ್ಕೂ ಹೆಚ್ಚಿವೆ. ಅವರಿಗೆಲ್ಲಾ ಟಿಕೆಟ್‌ ಕೊಡಬೇಕಾಗುತ್ತದೆ. ಹೀಗಾಗಿಯೇ ನಮ್ಮ ಅಗತ್ಯವೇನು ಎಂಬುದರ ಬಗ್ಗೆ ಬಿಸಿಸಿಐಗೆ ಮಾಹಿತಿ ನೀಡಿದ್ದೆವು. ಅದಕ್ಕೆ ಅವರು ಒಪ್ಪಿಲ್ಲ. ಇನ್ನು, ಶಾಸಕರ ಉಚಿತ ಟಿಕೆಟ್‌ಗೂ ನಮಗೂ ಸಂಬಂಧವಿಲ್ಲ. ಅವರಿಗೆ ಟಿಕೆಟ್‌ಗಳನ್ನು ಆರ್‌ಸಿಬಿಯೇ ನೀಡುತ್ತಿತ್ತು.- ವಿನಯ್‌ ಮೃತ್ಯುಂಜಯ, ಕೆಎಸ್‌ಸಿಎ ಮಾಧ್ಯಮ ವಕ್ತಾರ

--

-

ನವದೆಹಲಿ: ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಿಂದ ಐಪಿಎಲ್‌ ಫೈನಲ್‌ ಪಂದ್ಯವನ್ನು ಸ್ಥಳಾಂತರಗೊಳಿಸಿದ್ದಕ್ಕೆ ಈಗ ಸ್ವತಃ ಬಿಸಿಸಿಐ ಸ್ಪಷ್ಟನೆ ನೀಡಿದೆ. ಕರ್ನಾಟಕ ರಾಜ್ಯ ಕ್ರಿಕೆಟ್‌ ಸಂಸ್ಥೆ(ಕೆಎಸ್‌ಸಿಎ) ನಿಗದಿಗಿಂತ ಹೆಚ್ಚುವರಿಯಾಗಿ 10000 ಟಿಕೆಟ್‌ಗೆ ಬೇಡಿಕೆ ಇಟ್ಟಿದ್ದಕ್ಕೆ ಬೆಂಗಳೂರಿಗೆ ಪಂದ್ಯದ ಆತಿಥ್ಯ ನೀಡಿಲ್ಲ ಎಂದಿದೆ.

ಈ ಬಗ್ಗೆ ಮಂಡಳಿಯ ಕಾರ್ಯದರ್ಶಿ ದೇವಜಿತ್‌ ಸೈಕಿಯಾ ಗುರುವಾರ ರಾಷ್ಟ್ರೀಯ ಮಾಧ್ಯಮವೊಂದಕ್ಕೆ ಪ್ರತಿಕ್ರಿಯೆ ನೀಡಿದ್ದಾರೆ. ‘ಐಪಿಎಲ್‌ ನಿಯಮ ಪ್ರಕಾರ, ಪಂದ್ಯಕ್ಕೆ ಆತಿಥ್ಯ ವಹಿಸುವ ಕ್ರಿಕೆಟ್‌ ಸಂಸ್ಥೆಗೆ ಅಲ್ಲಿನ ಕ್ರೀಡಾಂಗಣದ ಆಸನ ಸಾಮರ್ಥ್ಯದ ಶೇ.15ರಷ್ಟು ಟಿಕೆಟ್‌ಗಳನ್ನು ಉಚಿತವಾಗಿ ನೀಡಲಾಗುತ್ತದೆ. ಆದರೆ ಐಪಿಎಲ್‌ನ ಲೀಗ್ ಪಂದ್ಯಗಳ ಆತಿಥ್ಯದ ಸಮಯದಲ್ಲಿ, ಕೆಎಸ್‌ಸಿಎ ನಿಗದಿತ ಶೇ.15ಕ್ಕಿಂತ ಹೆಚ್ಚುವರಿ ಉಚಿತ ಟಿಕೆಟ್‌ಗಳನ್ನು ಪಡೆದುಕೊಂಡಿದೆ ಎಂದು ವಿವಿಧ ಮೂಲಗಳಿಂದ ನಮಗೆ ಮಾಹಿತಿ ಬಂದಿದೆ. ಇದರ ಬಗ್ಗೆ ವಿವರ ಕೋರಿ ನಾವು

ಕೆಎಸ್‌ಸಿಎಗೆ ಇ-ಮೇಲ್‌ ಕಳುಹಿಸಿದ್ದೆವು. ಮೇ 2 ರಂದು ಕೆಎಸ್‌ಸಿಎ ನೀಡಿದ ಪ್ರತಿಕ್ರಿಯೆ ನೋಡಿ ನಿಜಕ್ಕೂ ಆಘಾತವಾಯಿತು. ಅದರಲ್ಲಿ, ಶೇ.15 ಉಚಿತ ಟಿಕೆಟ್ ಕೋಟಾದ ಜೊತೆಗೆ ಕೆಎಸ್‌ಸಿಎ ಸದಸ್ಯರು, ಕ್ಲಬ್‌ಗಳು ಮತ್ತು ಇತರರಿಗೆ ಹೆಚ್ಚುವರಿ ಟಿಕೆಟ್‌ ಅಗತ್ಯವಿದೆ ಎಂದು ತಿಳಿಸಿತ್ತು. ಇನ್ನೂ ಆಶ್ಚರ್ಯವೇನೆಂದರೆ, ಅಲ್ಲಿನ ಶಾಸಕರಿಗೂ ಉಚಿತ ಟಿಕೆಟ್‌ಗೆ ಮನವಿ ಮಾಡಲಾಗಿತ್ತು. ಕರ್ನಾಟಕ ಸರ್ಕಾರಕ್ಕೂ 700 ಟಿಕೆಟ್‌ ಕೇಳಲಾಗಿತ್ತು. ಒಟ್ಟಾರೆ ಶೇ.15 ಉಚಿತ ಟಿಕೆಟ್‌ ಜೊತೆಗೆ ಸುಮಾರು 10000 ಹೆಚ್ಚುವರಿ ಟಿಕೆಟ್‌ಗೆ ಕೆಎಸ್‌ಸಿಎ ಬೇಡಿಕೆ ಇಟ್ಟಿತ್ತು’ ಎಂದು ಸೈಕಿಯಾ ತಿಳಿಸಿದ್ದಾರೆ.

ಕಳೆದ ವರ್ಷ ಆರ್‌ಸಿಬಿ ಚಾಂಪಿಯನ್‌ ಆಗಿದ್ದರಿಂದ ನಿಯಮದಂತೆ ಈ ಬಾರಿ ಫೈನಲ್‌ ಪಂದ್ಯ ಬೆಂಗಳೂರಿನಲ್ಲಿ ನಡೆಯಕಿತ್ತು. ಆದರೆ ಫೈನಲ್‌ ಪಂದ್ಯ ಮೇ 31ಕ್ಕೆ ಅಹಮದಾಬಾದ್‌ನಲ್ಲಿ ನಡೆಸಲು ಬಿಸಿಸಿಐ ನಿರ್ಧರಿಸಿದೆ. ಚಿನ್ನಸ್ವಾಮಿ ಕ್ರೀಡಾಂಗಣ ಇತರ 3 ಪ್ಲೇ-ಆಫ್‌ ಪಂದ್ಯಗಳು ಧರ್ಮಶಾಲಾ, ಮುಲ್ಲಾನ್‌ಪುರದಲ್ಲಿ ನಡೆಯಲಿದೆ.