ಯಾರಿಗೂ ಹೆದರಿಕೊಂಡಿಲ್ಲ, ರಾಯ್‌ ಬರೇಲಿ, ಅಮೇಠಿಗೆ ಶೀಘ್ರ ಅಭ್ಯರ್ಥಿ ಪ್ರಕಟ: ಕೈ

| Published : May 02 2024, 12:21 AM IST / Updated: May 02 2024, 05:29 AM IST

Rahul Gandhi
ಯಾರಿಗೂ ಹೆದರಿಕೊಂಡಿಲ್ಲ, ರಾಯ್‌ ಬರೇಲಿ, ಅಮೇಠಿಗೆ ಶೀಘ್ರ ಅಭ್ಯರ್ಥಿ ಪ್ರಕಟ: ಕೈ
Share this Article
  • FB
  • TW
  • Linkdin
  • Email

ಸಾರಾಂಶ

 ಅಮೇಠಿ ಮತ್ತು ರಾಯ್‌ಬರೇಲಿ ಕ್ಷೇತ್ರಗಳಿಗೆ ಪಕ್ಷ ಟಿಕೆಟ್‌ ಪ್ರಕಟಿಸದಿರುವ ಬಗ್ಗೆ ಕೇಳಿಬಂದ ಟೀಕೆಗಳಿಗೆ ಪ್ರತಿಕ್ರಿಯಿಸಿರುವ ಕಾಂಗ್ರೆಸ್‌, ನಾವು ಯಾರಿಗೂ ಹೆದರಿಕೊಂಡಿಲ್ಲ, ಮುಂದಿನ 24-30 ಗಂಟೆಯಲ್ಲಿ ನಾವು ಈ ಕ್ಷೇತ್ರಗಳಿಗೆ ಅಭ್ಯರ್ಥಿ ಪ್ರಕಟಿಸಲಿದ್ದೇವೆ ಎಂದು ಹೇಳಿದೆ.

ನವದೆಹಲಿ: ನಾಮಪತ್ರ ಸಲ್ಲಿಕೆಗೆ ಎರಡು ದಿನ ಬಾಕಿ ಇದ್ದರೂ ಅಮೇಠಿ ಮತ್ತು ರಾಯ್‌ಬರೇಲಿ ಕ್ಷೇತ್ರಗಳಿಗೆ ಪಕ್ಷ ಟಿಕೆಟ್‌ ಪ್ರಕಟಿಸದಿರುವ ಬಗ್ಗೆ ಕೇಳಿಬಂದ ಟೀಕೆಗಳಿಗೆ ಪ್ರತಿಕ್ರಿಯಿಸಿರುವ ಕಾಂಗ್ರೆಸ್‌, ನಾವು ಯಾರಿಗೂ ಹೆದರಿಕೊಂಡಿಲ್ಲ, ಮುಂದಿನ 24-30 ಗಂಟೆಯಲ್ಲಿ ನಾವು ಈ ಕ್ಷೇತ್ರಗಳಿಗೆ ಅಭ್ಯರ್ಥಿ ಪ್ರಕಟಿಸಲಿದ್ದೇವೆ ಎಂದು ಹೇಳಿದೆ.

ಈ ಕುರಿತು ಪ್ರತಿಕ್ರಿಯೆ ನೀಡಿರುವ ಪಕ್ಷದ ಹಿರಿಯ ನಾಯಕ ಜೈರಾಂ ರಮೇಶ್‌, ‘ಪಕ್ಷವು ಅಭ್ಯರ್ಥಿಗಳ ಆಯ್ಕೆಯ ಅಧಿಕಾರವನ್ನು ಖರ್ಗೆ ನೇತೃತ್ವದ ಕೇಂದ್ರೀಯ ಸಮಿತಿಗೆ ವಹಿಸಿದೆ. ಅವರು ಇನ್ನು 24-30 ಗಂಟೆಗಳ ಒಳಗೆ ಅಭ್ಯರ್ಥಿಗಳನ್ನು ಪ್ರಕಟಿಸಲಿದ್ದಾರೆ’ ಎಂದು ತಿಳಿಸಿದರು.

ಅಮೇಠಿ ಕ್ಷೇತ್ರದಲ್ಲಿ ರಾಹುಲ್‌ ಗಾಂಧಿ ಕಳೆದ ಬಾರಿ ಬಿಜೆಪಿಯ ಸ್ಮೃತಿ ಇರಾನಿ ವಿರುದ್ಧ ಸೋತಿದ್ದರೆ, ರಾಯ್‌ಬರೇಲಿ ಸಂಸದೆಯಾಗಿದ್ದ ಸೋನಿಯಾ ಗಾಂಧಿ ರಾಜ್ಯಸಭೆಗೆ ತೆರಳಿರುವ ಹಿನ್ನೆಲೆಯಲ್ಲಿ ಅಲ್ಲಿ ಪ್ರಿಯಾಂಕಾರನ್ನು ಅಭ್ಯರ್ಥಿಯಾಗಿ ಘೋಷಿಸುವ ಸಾಧ್ಯತೆಯಿದೆ. ನಾಮಪತ್ರ ಸಲ್ಲಿಕೆಗೆ ಮೇ.3 ಕೊನೆಯ ದಿನವಾಗಿದ್ದು, ಉಭಯ ಕ್ಷೇತ್ರಗಳಲ್ಲಿ ಮೇ.20ರಂದು ಮತದಾನ ನಡೆಯಲಿದೆ.