ಸಾರಾಂಶ
ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಒಬ್ಬ ಜುಮ್ಲಾ (ಖಾಲಿ ಭರವಸೆ) ಆಗಿದ್ದು, ರಾಜಕೀಯವಾಗಿ ಸಂಪೂರ್ಣ ವಿಫಲ ವ್ಯಕ್ತಿ ಎಂದು ಬಿಜೆಪಿ ಸೇರಿರುವ ಡಬ್ಲುಡಬ್ಲುಎಫ್ ಖ್ಯಾತಿಯ ಕುಸ್ತಿಪಟು ದಿ ಗ್ರೇಟ್ ಖಲಿ ಟೀಕಿಸಿದ್ದಾರೆ.
ಬಾಢ್ಮೇರ್ (ರಾಕಸ್ಥಾಮ): ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಒಬ್ಬ ಜುಮ್ಲಾ (ಖಾಲಿ ಭರವಸೆ) ಆಗಿದ್ದು, ರಾಜಕೀಯವಾಗಿ ಸಂಪೂರ್ಣ ವಿಫಲ ವ್ಯಕ್ತಿ ಎಂದು ಬಿಜೆಪಿ ಸೇರಿರುವ ಡಬ್ಲುಡಬ್ಲುಎಫ್ ಖ್ಯಾತಿಯ ಕುಸ್ತಿಪಟು ದಿ ಗ್ರೇಟ್ ಖಲಿ ಟೀಕಿಸಿದ್ದಾರೆ.
ಗ್ರೇಟ್ ಖಲಿ ಎಂದೇ ಖ್ಯಾತರಾದ ದಲೀಪ್ ಸಿಂಗ್ ರಾಣಾ ಎಎನ್‌ಐ ಸುದ್ದಿಸಂಸ್ಥೆಯೊಂದಿಗೆ ಮಾತನಾಡಿ, ‘ರಾಹುಲ್ ಗಾಂಧಿ ಹಲವು ಬಾರಿ ವಿಫಲರಾದ ಹಿನ್ನೆಲೆಯಲ್ಲಿ ಕಾಂಗ್ರೆಸ್ ಪಕ್ಷವು ಮಲ್ಲಿಕಾರ್ಜುನ ಖರ್ಗೆಯವರನ್ನು ಮೇರು ಪಟ್ಟಕ್ಕೆ ತಂದು ಕೂರಿಸಿ ಸೋಲಿನ ಹೊಣೆಗಾರಿಕೆಯನ್ನು ಅವರ ತಲೆಗೆ ಹೊರಿಸಲು ಯೋಜಿಸಿದೆ’ ಎಂದು ಆರೋಪಿಸಿದರು.ಮೋದಿಗೆ ಮೆಚ್ಚುಗೆ:
ಇದೇ ವೇಳೆ ಪ್ರಧಾನಿ ನರೇಂದ್ರ ಮೋದಿ ಕುರಿತು ಮೆಚ್ಚುಗೆ ವ್ಯಕ್ತಪಡಿಸಿ, ‘ಬಡತನವನ್ನು ಕಂಡವರಿಗೆ ಮಾತ್ರ ಬಡವರಿಗೆ ಸಹಾಯ ಮಾಡಲು ಸಾಧ್ಯ. ಶ್ರೀಮಂತರು ಮತ್ತು ಕಾಂಗ್ರೆಸ್ ನಾಯಕರಿಗೆ ತಮ್ಮ ಖಾತೆಗೆ ಹಣ ಬಂದು ಬಿದ್ದರೆ ಮಾತ್ರ ಬಡವರಿಗೆ ಸಹಾಯ ಮಾಡಲಾಗಿದೆ ಎಂಬ ಮನಸ್ಥಿತಿ ಹೊಂದಿದ್ದಾರೆ’ ಎಂದು ಕಿಡಿಕಾರಿದರು.