ಸಾರಾಂಶ
ಮಧ್ಯಪ್ರದೇಶದಲ್ಲೂ ಬುಲ್ಡೋಜ಼ರ್ ಕಾರ್ಯಾಚರಣೆ ನಡೆಸಿದ್ದು, ಕಾಮುಕನ ಮನೆ ಅಕ್ರಮವಾಗಿ ಕಟ್ಟಿದ್ದ ಹಿನ್ನೆಲೆಯಲ್ಲಿ ಸ್ಥಳೀಯ ಆಡಳಿತದಿಂದ ನೆಲಸಮ ಮಾಡಲಾಗಿದೆ
ಗುನಾ (ಮ.ಪ್ರ): ತನ್ನ ನೆರೆ ಮನೆಯ ಮಹಿಳೆಯನ್ನು ತಿಂಗಳ ಕಾಲ ಕೊಠಡಿಯೊಂದರಲ್ಲಿ ಕೂಡಿಹಾಕಿ ಅತ್ಯಾಚಾರವೆಸಗಿ ಆಕೆ ಕಿರುಚಿಕೊಳ್ಳದಂತೆ ತುಟಿಗೆ ಗ್ಲೂ ಹಾಕಿದ್ದ ಕಾಮುಕನ ಮನೆಯನ್ನು ಸ್ಥಳೀಯ ಆಡಳಿತವು ಬುಲ್ಡೋಜರ್‌ನಲ್ಲಿ ಧ್ವಂಸಗೊಳಿಸಿದೆ.
ಆರೋಪಿ ಆಯನ್ ಪಠಾಣ್ ಮನೆಯನ್ನು ಸರ್ಕಾರಿ ಜಾಗದಲ್ಲಿ ದಾಖಲೆಗಳನ್ನು ನಕಲು ಮಾಡಿ ನಿರ್ಮಿಸಲಾಗಿರುವ ಹಿನ್ನೆಲೆಯಲ್ಲಿ ಸ್ಥಳೀಯ ಅಧಿಕಾರಿಗಳ ನೇತೃತ್ವದಲ್ಲಿ ಭಾನುವಾರ ಆತನ ಮನೆಯನ್ನು ಬುಲ್ಡೋಜ಼ರ್ ಸಹಾಯದಿಂದ ನೆಲಸಮ ಮಾಡಲಾಗಿದೆ.
ಆಯನ್ ಪಠಾಣ್ ಎಂಬ ದುರುಳ ನೆರೆಮನೆಯ ಯುವತಿಯನ್ನು ಮದುವೆಯಾಗುವ ಜೊತೆಗೆ ಪಿತ್ರಾರ್ಜಿತ ಆಸ್ತಿಯನ್ನು ತನಗೇ ನೀಡುವಂತೆ ಪೀಡಿಸಿ ತಿಂಗಳ ಕಾಲ ಅತ್ಯಾಚಾರ ಮಾಡಿದ್ದ. ಬಳಿಕ ಆಕೆ ತಪ್ಪಿಸಿಕೊಂಡು ಬಂದು ಪೊಲೀಸರಿಗೆ ದೂರು ನೀಡಿದ ಹಿನ್ನೆಲೆಯಲ್ಲಿ ಪೊಲೀಸರು ಆರೋಪಿಯನ್ನು ಬಂಧಿಸಿದ್ದರು.
ಆಯನ್ ಯುವತಿಯ ಕಣ್ಣಿಗೆ ಮೆಣಸಿನ ಪುಡಿಯನ್ನೂ ಹಾಕಿ ವಿಕೃತಿ ಮೆರೆದಿದ್ದ. ಈ ಹಿನ್ನೆಲೆಯಲ್ಲಿ ಆಕೆಗೆ ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗುತ್ತಿದೆ.